'ಹೌದು ಆರ್‌ಸಿಬಿ ಟೀಮ್ ಖರೀದಿಗೆ ದೊಡ್ಡ ಮೊತ್ತದ ಬಿಡ್ ಮಾಡಿದ್ದೇನೆ..' ಖಚಿತಪಡಿಸಿದ ಬಿಲಿಯನೇರ್!
ಐಪಿಎಲ್ 2026ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಮಾಲೀಕರು ಬರುವ ಸಾಧ್ಯತೆ ದಟ್ಟವಾಗಿದೆ. ಫಾರ್ಮಾ ಉದ್ಯಮಿ ಆದರ್ ಪೂನವಾಲ್ಲಾ ಅವರು ಆರ್‌ಸಿಬಿ ಫ್ರಾಂಚೈಸ್ ಖರೀದಿಸಲು ಆಸಕ್ತಿ ತೋರಿದ್ದು, ದೊಡ್ಡ ಮೊತ್ತದ ಬಿಡ್ ಮಾಡುವುದಾಗಿ ಖಚಿತಪಡಿಸಿದ್ದಾರೆ.

ಐಪಿಎಲ್ 2026 ಟೂರ್ನಮೆಂಟ್‌ಗೆ ಇನ್ನೂ 45 ದಿನಗಳು ಉಳಿದಿವೆ. ಈ ಟೂರ್ನಮೆಂಟ್‌ಗೂ ಮುನ್ನ ಆರ್‌ಸಿಬಿ ಹೊಸ ಮಾಲೀಕರನ್ನು ಪಡೆಯುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಬಿಲಿಯನೇರ್ ಫಾರ್ಮಾ ಕೈಗಾರಿಕೋದ್ಯಮಿ ಆದರ್ ಪೂನವಾಲ್ಲಾ ಆರ್‌ಸಿಬಿ ಫ್ರಾಂಚೈಸ್ ಖರೀದಿಸಲು ಆಸಕ್ತಿ ತೋರಿಸಿದ್ದಾರೆ.
ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಮಾಲೀಕರನ್ನು ಪಡೆಯುವುದು ಬಹುತೇಕ ಖಚಿತವಾಗಿದೆ. ಕಳೆದ ಋತುವಿನಲ್ಲಿ ಐಪಿಎಲ್ ಚಾಂಪಿಯನ್ ಆದ ಬಳಿಕ ಹಾಲಿ ಮಾಲೀಕರು ತಂಡವನ್ನು ಮಾರಾಟ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದರು.
ಅಂದಿನಿಂದ, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಫ್ರಾಂಚೈಸಿಯನ್ನು ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿತ್ತು. ಫ್ರಾಂಚೈಸಿ ನವೆಂಬರ್‌ನಲ್ಲಿ ತಂಡವನ್ನು ಮಾರಾಟಕ್ಕೆ ಇಟ್ಟಿತ್ತು.
ಆರ್‌ಸಿಬಿ ತಂಡವನ್ನು ಖರೀದಿಸುವ ಬಯಕೆಯನ್ನು ಅನೇಕ ಜನರು ವ್ಯಕ್ತಪಡಿಸಿದ್ದಾರೆ. ಫಾರ್ಮಾ ಉದ್ಯಮಿ ಆದರ್ ಪೂನವಾಲ್ಲಾ ಅವರ ಹೆಸರು ಮುಂಚೂಣಿಯಲ್ಲಿದೆ. ಪೂನವಲ್ಲಾ ಸ್ವತಃ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ನೀಡಿದ್ದು, ಆರ್‌ಸಿಬಿಗೆ ದೊಡ್ಡ ಬಿಡ್ ಮಾಡುವುದಾಗಿಯೂ ಅವರು ಖಚಿತಪಡಿಸಿದ್ದಾರೆ.
ಮುಂದಿನ ತಿಂಗಳು ಐಪಿಎಲ್ ಫ್ರಾಂಚೈಸಿ ಆರ್‌ಸಿಬಿಗೆ ದೊಡ್ಡ ಮತ್ತು ಉತ್ತಮ ಬಿಡ್ ಮಾಡುವುದಾಗಿ ಆದಾರ್ ಪೂನವಾಲ್ಲಾ ಹೇಳಿದ್ದಾರೆ. ಆದರೆ ಅವರು ಖರ್ಚು ಮಾಡಲು ಸಿದ್ಧರಿರುವ ಹಣವನ್ನು ಮಾತ್ರ ರಹಸ್ಯವಾಗಿಟ್ಟಿದ್ದಾರೆ.
ವರದಿಗಳ ಪ್ರಕಾರ, ಆರ್‌ಸಿಬಿ ಫ್ರಾಂಚೈಸಿ 18,000 ರಿಂದ 20,000 ಕೋಟಿ ರೂ.ಗಳಷ್ಟು ದುಬಾರಿಯಾಗಬಹುದು. ಆರ್‌ಸಿಬಿ ಐಪಿಎಲ್‌ನ ಅತ್ಯಂತ ದುಬಾರಿ ತಂಡಗಳಲ್ಲಿ ಒಂದಾಗಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ಅವರಂತಹ ಆಟಗಾರರಿದ್ದಾರೆ.
ಆದಾರ್ ಪೂನವಾಲ್ಲಾ 2 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿರುವ ಕೋಟ್ಯಾಧಿಪತಿ. ಆದಾರ್ ಪೂನವಾಲ್ಲಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

