ಫ್ಲಾಶ್ ಹಾಕಿ ಜೀವ ಉಳಿಸಲು ಅಂಗಲಾಚಿದ ಟೆಕ್ಕಿ ಕೊನೆಯ ವಿಡಿಯೋ, ಮಕಲುಕುವ ವಿಡಿಯೋ ಇದೀಗ ಹೊರಬಂದಿದೆ. ಮಗನ ಉಳಿಸಲು ಸಾಧ್ಯವಾಗದೆ ಚಡಪಡಿಸುತ್ತಿರುವ ವಿಡಿಯೋ ಘಟನೆಯ ಕರಾಳತೆಯನ್ನು ಬಿಡಿಸಿ ಹೇಳುತ್ತಿದೆ.
ನೋಯ್ಡಾ (ಜ.22) ಅಸಮರ್ಪಕ ಕಾಮಗಾರಿ, ಕಾಮಗಾರಿ ವೇಳೆಯ ನಿರ್ಲಕ್ಷ್ಯಗಳಿಂದ ಹಲವು ಜೀವಗಳು ಬಲಿಯಾಗಿದೆ. ಇದಕ್ಕೆ ಇತ್ತೀಚೆಗಿನ ನೋಯ್ದಾಡದಲ್ಲಿನ ಟೆಕ್ಕಿ ಯುವರಾಜ್ ಮೆಹ್ತ ದುರಂತ ಅಂತ್ಯ ಸೇರಿಕೊಂಡಿದೆ. ನೋಯ್ಡಾ ಟೆಕ್ಕಿ ಅಂತ್ಯ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಿಂದ ನಡೆದ ಘಟನೆ. ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಟೆಕ್ಕಿ ದಟ್ಟ ಮಂಜಿನ ಕಾರಣ, ತಡೆಗೋಡೆ ಇಲ್ಲದ ಅಸಮರ್ಪಕ ರಸ್ತೆ ಹಾಗೂ ನಿರ್ಮಾಣ ಕಾಮಗಾರಿಯಿಂದ ಸೃಷ್ಟಿಯಾದ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಭಾರಿ ಚರ್ಚೆಯಾಗಿದೆ. ಇದೀಗ ಟೆಕ್ಕಿಯ ಕೊನೆಯ ವಿಡಿಯೋ ಬಹಿರಂಗವಾಗಿದೆ. ಜೀವ ಉಳಿಸಲು ಟೆಕ್ಕಿ ಅಂಗಲಾಚುತ್ತಿರುವ ಕೊನೆಯ ವಿಡಿಯೋ ಇದು. ದಟ್ಟ ಮಂಜಿನ ಕಾರಣ ತನ್ನ ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿ ನೆರವು ಕೇಳುತ್ತಿದ್ದರೆ, ಇತ್ತ ತಂದೆ ಅಸಹಾಯಕರಾಗಿ ಕುಳಿತ ವಿಡಿಯೋ ಇದು.
ಮಗನ ರಕ್ಷಿಸಲು ಸಾಧ್ಯವಾಗಲಿಲ್ಲ
27 ವರ್ಷದ ಯುವರಾಜ್ ಮೆಹ್ತಾ ಜನವರಿ 16ರಂದು ಕೆಲಸ ಮುಗಿಸಿ ಮುಂಜಾನೆ ಮನೆಗೆ ಮರಳುವಾಗ ಈ ಘಟನೆ ನಡೆದಿತ್ತು. ಟೆಕ್ಕಿಯ ಕೊನೆಯ ವಿಡಿಯೋ ಇದೀಗ ಬಹಿರಂಗವಾಗಿದೆ. ಕಾರು ಅಪಘಾತವಾಗಿ ನಿರ್ಮಾಣ ಹಂತದ ಗುಂಡಿಗೆ ಬಿದ್ದಿದೆ. ಕೆಸರು ತುಂಬಿದ್ದ ಈ ಗುಂಡಿಯಲ್ಲಿ ಕಾರು ಮುಳುಗಲು ಆರಂಭಿಸಿದೆ. ಈ ವೇಳೆ ಕಾರಿನಿಂದ ಹೊರಬರಲು ಆಗದೆ, ತನ್ನ ಮೊಬೈಲ್ ಫ್ಲಾಶ್ ಆನ್ ಮಾಡಿ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾನೆ. ಹೇಗಾದರೂ ಮಾಡಿ ಬದುಕಿಸಲು ಅಂಗಲಾಚಿದ್ದಾನೆ. ದುರಂತ ಅಂದರೆ ಸ್ಥಳಕ್ಕೆ ಧಾವಿಸಿ ಬಂದ ತಂದೆಗೆ ಮಗನ ರಕ್ಷಿಸಲು ಸಾಧ್ಯವಾಗಲಿಲ್ಲ. ಮಗ ಕೂಗಿ ಹೇಳುತ್ತಿದ್ದರೆ, ಇತ್ತ ತಂದೆ, ಧೈರ್ಯವಾಗಿ ಇರು ಎಂದು ಧೈರ್ಯ ತುಂಬದ್ದಾರೆ. ಆದರೆ ಮಗನ ಪ್ರಾಣ ಹೋಗುತ್ತಿದ್ದರೆ ತಂದೆ ಅಸಹಾಯಕರಾಗಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.
ಟೆಕ್ಕಿಯ ಕೊನೆಯ ವಿಡಿಯೋ ಇದು. ಬಳಿಕ ಕಾರು ಸೇರಿದಂತೆ ಟೆಕ್ಕಿ ಕೆಸರು ತುಂಬಿದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪೊಲೀಸರು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸುವ ವೇಳೆಗೆ ಟೆಕ್ಕಿ ದುರಂತ ಅಂತ್ಯಕಂಡಿದ್ದಾನೆ. ಘಟನೆ ಸಂಬಂಧ ಹಲವು ಅಧಿಕಾರಿಗಳು ಅಮಾನತ್ತಾಗಿದ್ದಾರೆ. ಆದರೆ ಟೆಕ್ಕಿ ದುರಂತ ಸಾವಿನಿಂದ ತಂದೆ ಮಗನ ಉಳಿಸಲು ಸಾಧ್ಯವಾಗಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.
ಕೊನೆಯದಾಗಿ ತಂದೆಗೆ ಕರೆ ಮಾಡಿದ್ದ ಟೆಕ್ಕಿ
ಅಪಘಾತವಾದ ಬಳಿಕ ಸಾವರಿಸಿಕೊಂಡ ಟೆಕ್ಕಿ ತಾನು ಗುಂಡಿಯಲ್ಲಿ ಬಿದ್ದು ಸಿಲಕಿದ್ದೇನೆ ಅನ್ನೋದು ಗೊತ್ತಾಗಿದೆ. ದಟ್ಟ ಮಂಜಿನ ಕಾರಣ ಯಾವುದು ಗೊತ್ತಾಗದ ಪರಿಸ್ಥಿತಿ, ತನ್ನ ಮೊಬೈಲ್ ಮೂಲಕ ತಂದೆ ಕರೆ ಮಾಡಿ ಅಪಘಾತವಾಗಿದೆ, ಗುಂಡಿಗೆ ಬಿದ್ದಿದ್ದೇನೆ. ನನಗೆ ಸಾಯಲು ಇಷ್ಟ ಇಲ್ಲ ಅಪ್ಪ, ಹೇಗಾದರು ಮಾಡಿ ನನ್ನ ಬದುಕಿಸು ಎಂದು ಅಂಗಲಾಚಿದ್ದಾನೆ. ಮಗನ ಕರೆಯಿಂದ ಆಘಾತಗೊಂಡ ತಂದೆ ಪೊಲೀಸರಿಗೆ ಫೋನ್ ಮಾಡುತ್ತಾ, ಸ್ಥಳಕ್ಕೆ ಧಾವಿಸಿದ್ದಾರೆ. ಕೆಸರು ತುಂಬಿದ ಕೆರ, ಅದರ ಪಕ್ಕದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೃಷ್ಟಿಯಾದ ಗುಂಡಿ. ಯಾವುದೇ ಸಲಕರಣೆ ಇಲ್ಲ, ಮಗನ ಉಳಿಸಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಡೆಲಿವರಿ ಎಜೆಂಟ್ ಕೂಡ ತಂದೆಗೆ ನರೆವು ನೀಡರೂ ಪ್ರಯೋಜನವಾಗಿಲ್ಲ.


