ಸೋಷಿಯಲ್ ಮೀಡಿಯಾ ಲೈಕ್ಸ್‌ಗಾಗಿ ಕೇರಳದ ಶಿಮ್ಜಿತಾ ಮುಸ್ತಫಾ ಎಂಬ ಮಹಿಳೆ, ದೀಪಕ್ ಎಂಬ ಅಮಾಯಕನ ಮೇಲೆ ಸುಳ್ಳು ಆರೋಪ ಮಾಡಿ ವಿಡಿಯೋ ವೈರಲ್ ಮಾಡಿದ್ದಳು. ಈ ಅವಮಾನ ತಾಳಲಾರದೆ ದೀಪಕ್ ಸಾವಿನ ಹಾದಿ ಹಿಡಿದ ಬೆನ್ನಲ್ಲೇ ಜೀವ ರಕ್ಷಣೆಗೆ ಹೊಸ ಟ್ರೆಂಡ್​ ಶುರುವಾಗಿದೆ. 

ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಲು, ಲೈಕ್ಸ್​ ಗಳಿಸಲು ಈಚೆಗೆ ಕೇರಳದಲ್ಲಿ, ಶಿಮ್ಜಿತಾ ಮುಸ್ತಫಾ ಎಂಬಾಕೆ ಅನ್ಯಾಯವಾಗಿ ದೀಪಕ್​ ಎನ್ನುವವರ ಪ್ರಾಣವನ್ನೇ ಬಲಿ ಪಡೆದ ಘಟನೆ ಇಡೀ ಪುರುಷ ವರ್ಗವನ್ನೇ ತಲ್ಲಣಗೊಳಿಸಿದೆ. ಬಸ್​ಗಳಲ್ಲಿ, ರಶ್​ ಇದ್ದಾಗ ಅದನ್ನೇ ತಮ್ಮ ತೇವಲಿಗೆ ಬಳಸಿಕೊಳ್ಳುವ ಪುರುಷರೂ ಇದ್ದಾರೆ. ಮಹಿಳೆಯರಿಗೆ ಇದರ ಅನುಭವ ಸಾಕಷ್ಟು ಆಗಿರುತ್ತದೆ. ಆದರೆ, ಕೇವಲ ಲೈಕ್​ಗೋಸ್ಕರ ಬಸ್​ನಲ್ಲಿ ತಾನೇ ಹಿಂದೆ ಮುಂದೆ ಸರಿದು, ದೀಪಕ್​ ಅವರೇ ತಮ್ಮ ಖಾಸಗಿ ಅಂಗ ಮುಟ್ಟಿದಂತೆ ತೋರಿಸಿದ ಐನಾತಿ ಈ ಶಿಮ್ಜಿತಾ ಮುಸ್ತಫಾ. ಬಳಿಕ ಈಕೆ ವಿಡಿಯೋ ಎಡಿಟ್ ಮಾಡಿರುವುದು ಪೊಲೀಸ್​ ತನಿಖೆಯಿಂದಲೂ ತಿಳಿದುಬಂದಿದೆ. ಎಡಿಟ್​ ಮಾಡಿರುವ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿ 2 ಮಿಲಿಯನ್​ ವ್ಯೂವ್ಸ್ ಪಡೆದ ಕಿರಾತಕಿ ಇವಳು. ಇದು ವೈರಲ್​ ಆಗುತ್ತಿದ್ದಂತೆಯೇ ಮನನೊಂದ ದೀಪಕ್​ ಅವರು ಸಾವಿನ ಹಾದಿಯನ್ನೇ ತುಳಿದುಬಿಟ್ಟರು.

ಕೊಂದ ಕಿರಾತಕಿ!

ಸದ್ಯ ಶಿಮ್ಜಿತಾ ಮುಸ್ತಫಾ, ತಪ್ಪಿಸಿಕೊಂಡು ಓಡಿಹೋಗಿದ್ದಳು. ಆದರೆ ಸಂಬಂಧಿಕರ ಮನೆಯಿಂದ ಆಕೆಯನ್ನು ಅರೆಸ್ಟ್​ ಮಾಡಲಾಗಿದೆ. ಶಿಕ್ಷೆ ಆಗತ್ತೋ, ಬಿಡತ್ತೋ. ಆದರೆ ಒಬ್ಬನೇ ಮಗನನ್ನು ಕಳೆದುಕೊಂಡ ದೀಪಕ್​ ಅವರ ಪಾಲಕರ ಕಣ್ಣೀರಂತೂ ನೋಡಲು ಆಗುತ್ತಿಲ್ಲ. 'ಸಾಯಬೇಕಿತ್ತು ಏಕೆ, ಎದುರಿಸಬೇಕಿತ್ತು' ಎಂದೆಲ್ಲಾ ಮಾತನಾಡುವವರೂ ಇದ್ದಾರೆ. ಆದರೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ, ಕಂಡಕಂಡವರೆಲ್ಲರೂ ಪ್ರಶ್ನೆ ಮಾಡುವಾಗ ನಾನು ಹಾಗೆ ಮಾಡಿಲ್ಲ, ಹಾಗೆ ಮಾಡಿಲ್ಲ ಎಂದು ಉತ್ತರ ಕೊಡುತ್ತಾ ಇರುವ ಬದಲು (ಬಹುಶಃ ಹಾಗೊಂದು ವೇಳೆ ಹೇಳಿದ್ದರೂ, ಈಕೆ ಮಾಡಿರುವ ವಿಡಿಯೋ ನೋಡಿ ನಂಬುತ್ತಲೂ ಇರಲಿಲ್ಲ ಅನ್ನಿ) ಸಾಯುವುದೇ ಮೇಲು ಎಂದು ಅವರು ಸಾವಿನ ಹಾದಿ ತುಳಿದರು.

ಹಾಸ್ಯದ ವಿಡಿಯೋ

ಇದಾದ ಬಳಿಕ ಸೋಷಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ಗಳು, ಇದೇ ವಿಷಯವನ್ನು ಇಟ್ಟುಕೊಂಡು ಹಾಸ್ಯದ ರೀತಿಯಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಹುಡುಗಿ, ಯುವತಿ ಕಂಡಾಕ್ಷಣ ಓಡಿ ಹೋಗುವುದು, ರಟ್ಟನ್ನು ತಂದು ಯುವತಿಯ ಮಧ್ಯೆ ಇಡುವುದು, ಯುವತಿ ಇರುವ ಸೀಟು ಕಂಡು ಹೌಹಾರಿ ಹೋಗುವುದು... ಹೀಗೆ ಹಲವಾರು ರೀತಿಯ ವಿಡಿಯೋ ಮಾಡುತ್ತಿದ್ದಾರೆ. ಈ ವಿಡಿಯೋ ಹಾಸ್ಯದ ರೀತಿಯಲ್ಲಿ ಪ್ರಸೆಂಟ್​ ಮಾಡಲಾಗುತ್ತಿದೆ. ಆದರೆ, ರಿಯಲ್​ ಆಗಿ ದೀಪಕ್​ ಅವರ ಕಥೆ ಕೇಳಿದರೆ ಮಾತ್ರ ಎಂಥವರ ಕಣ್ಣಲ್ಲೂ ನೀರು ಬರುವುದು ಇದೆ.

ರಟ್ಟಿನ ಬಾಕ್ಸ್​ ಟ್ರೆಂಡ್​

ಇದೀಗ ಮಹಿಳೆಯರಿಂದ ರಕ್ಷಣೆ ಮಾಡಿಕೊಳ್ಳಲು ಕೆಲವು ಪುರುಷರು ತಮ್ಮನ್ನು ರಟ್ಟಿನ ಬಾಕ್ಸ್​ ಒಳಗೆ ತೂರಿಸಿಕೊಂಡು ಬಸ್​ನಲ್ಲಿ ಹತ್ತುತ್ತಿದ್ದಾರೆ.ಇದರ ವಿಡಿಯೋಗಳು ವೈರಲ್​ ಆಗುತ್ತಿವೆ. ಇಂಥದ್ದೊಂದು ಟ್ರೆಂಡ್​ ಈಗ ಕೇರಳದ ಬಸ್​ಗಳಲ್ಲಿ ಶುರುವಾಗಿದೆ. ದೀಪಕ್​ ಅವರ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಪ್ರತಿಭಟನಾರ್ಥವಾಗಿ ಕೆಲವು ಪುರುಷರು ಹೀಗೆ ಮಾಡುತ್ತಿದ್ದಾರೆ. ಕೆಲವರು ಇದನ್ನು ಕೂಡ ವೈರಲ್​ಗೋಸ್ಕರ ಮಾಡುತ್ತಿದ್ದಾರೆ ಎನ್ನಿ. ಆದರೆ ಹೆಣ್ಣುಮಕ್ಕಳ ಬಗ್ಗೆ ಅದ್ಯಾವ ರೀತಿಯಲ್ಲಿ ಅಸಹ್ಯ ಭಾವನೆ ಮೂಡುತ್ತಿದೆ, ಇಡೀ ಮಹಿಳಾ ಸಮುದಾಯವನ್ನು ಪುರುಷರು ಯಾರ ಮಟ್ಟಿಗೆ ನೋಡುವ ಸ್ಥಿತಿ ಉಂಟಾಗಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ.