ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂವುಗಳನ್ನು ಮಾರುತ್ತಿದ್ದ 11 ವರ್ಷದ ಪುಟ್ಟ ಬಾಲಕಿಯನ್ನು ಕಾಮುಕನೋರ್ವ ಅಪಹರಿಸಿ ಅತ್ಯಾ*ಚಾರವೆಸಗಿ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಂತಹ ದಾರುಣ ಘಟನೆ ನಡೆದಿದೆ.

ನವದೆಹಲಿ: ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂವುಗಳನ್ನು ಮಾರುತ್ತಿದ್ದ 11 ವರ್ಷದ ಪುಟ್ಟ ಬಾಲಕಿಯನ್ನು ಕಾಮುಕನೋರ್ವ ಅಪಹರಿಸಿ ಅತ್ಯಾ*ಚಾರವೆಸಗಿ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಂತಹ ದಾರುಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ ಕೇಂದ್ರ ದೆಹಲಿಯ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗುಲಾಬಿಗಳನ್ನು ಮಾರುತ್ತಿದ್ದಳು. ಆ 11 ವರ್ಷದ ಬಾಲಕಿಯ ಮೇಲೆ ಇ-ರಿಕ್ಷಾ ಚಾಲಕನೊಬ್ಬನ ಕಣ್ಣು ಬಿದ್ದಿದ್ದು, ಆಕೆಯನ್ನು ಅಪಹರಿಸಿ ಅತ್ಯಾ*ಚಾರ ಎಸಗಿದ ಆ ಕಾಮುಕ ಆಕೆಗೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲಿಸರು ವಿವಿಧ ಮಾರ್ಗಗಳಲ್ಲಿ ಅಳವಡಿಸಲಾದ ಸುಮಾರು 300 ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ ಸುಮಾರು 40 ವರ್ಷ ವಯಸ್ಸಿನ ಆರೋಪಿ ದುರ್ಗೇಶ್‌ ಎಂಬಾತನನ್ನು ಬಂಧಿಸಿದ್ದಾರೆ. ಜನವರಿ 11 ರಂದು ದೆಹಲಿ ಪ್ರಸಾದ್ ನಗರ ಪ್ರದೇಶದಲ್ಲಿ ಈ ಬೀಭತ್ಸ ಘಟನೆ ನಡೆದಿದ್ದು, ಅಲ್ಲಿ ಆ ಪುಟ್ಟ ಹುಡುಗಿ ಗುಲಾಬಿಗಳನ್ನು ಮಾರುತ್ತಾ ರೆಡ್‌ ಲೈಟ್ ಬಳಿ ನಿಂತಿದ್ದಳು. ಆಕೆಯನ್ನು ನೋಡಿದ ಆರೋಪಿ ದುರ್ಗೇಶ್ ತನ್ನ ಆಟೋದಲ್ಲಿದ್ದ. ಪ್ರಯಾಣಿಕರನ್ನು ಇಳಿಸಿದ ಅಕೆಯ ಬಳಿ ಬಂದಿದ್ದಾನೆ. ನಂತರ ಆ ಬಾಲಕಿಗೆ ತಾನು ನಿನ್ನ ಬಳಿ ಇರುವ ಎಲ್ಲಾ ಹೂವುಗಳನ್ನು ಮಾರಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಆಕೆಯನ್ನು ತನ್ನ ಆಟೋದ ಒಳಗೆ ಕೂರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಆರೋಪಿಬಾಲಕಿಯನ್ನು ಪ್ರೊಫೆಸರ್ ರಾಮ್ ನಾಥ್ ವಿಜ್ ಮಾರ್ಗ್ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅತ್ಯಾ*ಚಾರ ಎಸಗಿದ್ದಾರೆ. ತನ್ನ ಕೃತ್ಯದಿಂದ ಆಕೆ ಸತ್ತಿದ್ದಾಳೆಂದು ನಂಬಿ ದುರ್ಗೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ , ಘಟನೆಯಿಂದಾಗಿ ಆ ಬಾಲೆಗೆ ತೀವ್ರ ರಕ್ತಸ್ರಾವವಾಗಿ ಬಾಲಕಿಗೆ ಪ್ರಜ್ಞೆ ತಪ್ಪಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜ್ಞೆ ಮರಳಿದ ನಂತರ, ಆ ಹುಡುಗಿ ತನ್ನ ಕುಟುಂಬವನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾಳೆ. ರಕ್ತಸಿಕ್ತವಾಗಿದ್ದ ಆಕೆಯ ಸ್ಥಿತಿಯನ್ನು ನೋಡಿ ಗಾಬರಿಗೊಂಡ ಅವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಮಾಹಿತಿ ನೀಡಿದರು.

ನಂತರ ಪೊಲೀಸರು ಅಪಹರಣ ಮತ್ತು ಅತ್ಯಾ*ಚಾರ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯಿಂದ ಮಗು ತೀವ್ರ ಆಘಾತಕ್ಕೊಳಗಾಗಿದ್ದು, ಆರಂಭದಲ್ಲಿ ಆಕೆಗೆ ಘಟನೆಯನ್ನು ಕ್ರಮವಾಗಿ ವಿವರಿಸಲು ಸಾಧ್ಯವಾಗಲಿಲ್ಲ, ಇದು ತನಿಖೆಯನ್ನು ತೀವ್ರ ಸವಾಲಿನದ್ದಾಗಿ ಮಾಡಿತು. ನಂತರ ಪೊಲೀಸರು ಮಗುವನ್ನು ಕೊನೆಯದಾಗಿ ನೋಡಿದ ಪ್ರದೇಶ ಮತ್ತು ಕಾಡಿಗೆ ಹೋಗುವ ಮಾರ್ಗಗಳಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಸೋದರನಿಗೆ ಅಪಘಾತವಾಗಿದೆ ಆಸ್ಪತ್ರೆಗೆ ಹೋಗಬೇಕು: ಹೆದ್ದಾರಿಯಲ್ಲಿ ಇದು ಹೊಸ ಸ್ಕ್ಯಾಮಾ? ಬೈಕರ್ ಮಾಡಿದ್ದೇನು?

ಆರೋಪಿಯ ಪತ್ತೆಗಾಗಿ ಸುಮಾರು 15 ಮಾರ್ಗಗಳಲ್ಲಿ ಅಳವಡಿಸಲಾದ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ಒಂದು ದೃಶ್ಯದಲ್ಲಿ ಹುಡುಗಿ ಇ-ರಿಕ್ಷಾ ಹತ್ತುತ್ತಿರುವುದು ಕಂಡುಬಂದಿದೆ. ನಂತರ ಆ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು, ಇದು ಅದೇ ದಿನ ಆರೋಪಿಯನ್ನು ಗುರುತಿಸಿ ಬಂಧಿಸಲು ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಮಗು ನೋಡಿಕೊಳ್ಳಲು ಬಂದ 10 ವರ್ಷದ ಬಾಲಕಿಗೆ ಅನ್ನ ನೀಡದೇ ಉಪವಾಸ ಹಾಕಿ ಪಕ್ಕೆಲುಬು ಮುರಿಯುವಂತೆ ಹೊಡೆದ ದಂಪತಿ

ವಿಚಾರಣೆಯ ಸಮಯದಲ್ಲಿ ಆರೋಪಿ ದುರ್ಗೇಶ್ , ಈ ಹಿಂದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಡುಗಿಯನ್ನು ಗಮನಿಸಿ ಅಪಹರಣಕ್ಕೆ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. ಆತನ ತಪ್ಪೊಪ್ಪಿಗೆಯ ಮೇರೆಗೆ ಪೊಲೀಸರು ರಕ್ತದ ಕಲೆಗಳಿರುವ ಬಟ್ಟೆಗಳು ಮತ್ತು ಇತರ ಸಾಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಮಗುವಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ನೀಡಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.