10:57 PM (IST) Aug 19

India Latest News Live 19 August 2026 ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಈಗ ಸಖತ್ ಸ್ಲಿಮ್ - ಅಷ್ಟಕ್ಕೂ ಯಾರು ಗೊತ್ತಾ?

ನಟಿ ನಿವೇತಾ ಥಾಮಸ್‌ ಇತ್ತೀಚೆಗೆ ತಮ್ಮ ಹೊಸ ಲುಕ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.

Read Full Story
10:13 PM (IST) Aug 19

India Latest News Live 19 August 2026 ಪುಟ್ನಂಜ ನಟಿ ಮೀನಾ ಪತಿಯನ್ನು ಉಳಿಸಲು ಮಾಡಿದ್ದ ಪ್ರಯತ್ನಗಳೆಷ್ಟು? ಇಷ್ಟು ದಿನದ ಬಳಿಕ ಬಯಲಾಯ್ತು ಸತ್ಯ

ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story
10:05 PM (IST) Aug 19

India Latest News Live 19 August 2026 SBI ಗ್ರಾಹಕರ ಗಮನಕ್ಕೆ - ಇನ್ಮುಂದೆ ಎಟಿಎಂನಿಂದ ಲಿಮಿಟ್‌ಗಿಂತ ಹೆಚ್ಚು ಹಣ ತೆಗೆದರೆ ಭಾರಿ ಚಾರ್ಜ್‌; ಹೊಸ ನಿಯಮ ಜಾರಿ!

SBI ತನ್ನ 'ಬೇಸಿಕ್ ಸೇವಿಂಗ್ಸ್‌ ಬ್ಯಾಂಕ್ ಡಿಪಾಸಿಟ್' (BSBD) ಖಾತೆದಾರರಿಗೆ ನಗದು ಹಿಂಪಡೆಯುವಿಕೆಯ ಹೊಸ ನಿಯಮಗಳನ್ನು ಘೋಷಿಸಿದೆ. ಅಕ್ಟೋಬರ್ 1, 2026 ರಿಂದ, ತಿಂಗಳಿಗೆ 4 ಉಚಿತ ವಹಿವಾಟುಗಳ ನಂತರ ಪ್ರತಿ ನಗದು ಹಿಂಪಡೆಯುವಿಕೆಗೆ ₹15 ಮತ್ತು ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ.

Read Full Story
09:48 PM (IST) Aug 19

India Latest News Live 19 August 2026 ‘ಭಯ ಹುಟ್ಟಿಸುವ ಸಂಗತಿಗಳಿಗೂ ಯೆಸ್ ಹೇಳಿ’ - ಯಶ್ ‘ಟಾಕ್ಸಿಕ್’ ಅನುಭವ ಬಿಚ್ಚಿಟ್ಟ ಕಿಯಾರಾ

Kiara Advani: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪಯಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.

Read Full Story
09:39 PM (IST) Aug 19

India Latest News Live 19 August 2026 RS 10 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್‌ಹ್ಯಾಂಡ್ ಸಿಕ್ಕಿಬಿದ್ದ ಕೇಂದ್ರ ಸಚಿವಾಲಯದ ಅಧಿಕಾರಿ

ಖಾಸಗಿ ಕಂಪನಿಯ ಕಡತ ವಿಲೇವಾರಿ ಮಾಡಲು ಪತ್ನಿಯ ಮೂಲಕ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 15 ಲಕ್ಷಕ್ಕೆ ಬೇಡಿಕೆಯಿಟ್ಟು 10 ಲಕ್ಷಕ್ಕೆ ಡೀಲ್ ಕುದುರಿಸಿದ್ದ 2020ರ ಬ್ಯಾಚ್‌ನ ಐಸಿಎಎಸ್ ಅಧಿಕಾರಿ ಸಂದೀಪ್ ಸದ್ಯ ಸಿಬಿಐ ಬಲೆಗೆ ಬಿದ್ದಿದ್ದಾನೆ.

Read Full Story
08:44 PM (IST) Aug 19

India Latest News Live 19 August 2026 200 ರೂಪಾಯಿ ಇದ್ರೆ ಸಾಕು, ಭಾರತದ ಈ ಪ್ರದೇಶದಲ್ಲಿ ವಜ್ರದ ಗಣಿ ಲೀಸ್‌ಗೆ ಪಡೆಯಬಹುದು!

ಮಧ್ಯಪ್ರದೇಶದ 'ವಜ್ರಗಳ ನಗರಿ' ಪನ್ನಾದಲ್ಲಿ, ಕೇವಲ 200 ರೂಪಾಯಿ ಪಾವತಿಸಿ ಸಣ್ಣ ಭೂಪ್ರದೇಶವನ್ನು ಗುತ್ತಿಗೆ ಪಡೆದು ವಜ್ರಕ್ಕಾಗಿ ಗಣಿಗಾರಿಕೆ ನಡೆಸಬಹುದು. ಈ ಅವಕಾಶವು ಅನೇಕ ಬಡ ಕಾರ್ಮಿಕರ ಜೀವನವನ್ನು ಬದಲಾಯಿಸಿದ್ದು, ಅವರು ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ರೋಚಕ ನೈಜ ಕಥೆಗಳಿವೆ.
Read Full Story
08:35 PM (IST) Aug 19

India Latest News Live 19 August 2026 ರೈಲು ಪ್ರಯಾಣಿಕರ ಗಮನಕ್ಕೆ - ಮೈಸೂರು-ಶಿವಮೊಗ್ಗ ನಡುವಿನ ವಿವಿಧ ರೈಲುಗಳು ರದ್ದು - ಡಿಟೇಲ್ಸ್​ ಇಲ್ಲಿದೆ

ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್‌ಗಳಲ್ಲಿನ ನಿರ್ವಹಣಾ ಕಾರ್ಯದಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಹಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ ಮತ್ತು ಭಾಗಶಃ ರದ್ದುಪಡಿಸಿದೆ. ಮೈಸೂರು, ಅರಸೀಕೆರೆ, ಶಿವಮೊಗ್ಗ, ಮತ್ತು ಬೆಂಗಳೂರು ಮಾರ್ಗದ ಅನೇಕ ರೈಲುಗಳ ಸಂಚಾರದಲ್ಲಿ ಆಗಸ್ಟ್ ತಿಂಗಳ ನಿಗದಿತ ದಿನಾಂಕಗಳಂದು ಬದಲಾವಣೆಗಳಾಗಲಿವೆ.
Read Full Story
07:57 PM (IST) Aug 19

India Latest News Live 19 August 2026 ಭೂಮಿಗೆ ಬೀಳಲ್ಲ, ಗಾಳಿಯಲ್ಲೇ ತೇಲುತ್ತೆ ನೀರು! ದೇಶದ ಉಲ್ಟಾ ಜಲಪಾತ ಎಲ್ಲಿದೆ? ಇದಕ್ಕಿದೆ ಶಾತವಾಹನರ ಕಾಲದ ಇತಿಹಾಸ!

ಮಹಾರಾಷ್ಟ್ರದ ನಾನೇಘಾಟ್‌ನಲ್ಲಿ ಮಳೆಗಾಲದಲ್ಲಿ ಒಂದು ಅಪರೂಪದ ದೃಶ್ಯ ಕಂಡುಬರುತ್ತದೆ, ಇಲ್ಲಿ ಜಲಪಾತದ ನೀರು ಕೆಳಗೆ ಬೀಳುವ ಬದಲು ಮೇಲಕ್ಕೆ ಚಿಮ್ಮುತ್ತದೆ. ಇದು ಯಾವುದೇ ಮ್ಯಾಜಿಕ್ ಅಲ್ಲ, ಬದಲಿಗೆ ತೀವ್ರವಾದ ಗಾಳಿಯ ಒತ್ತಡದಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವಾಗಿದೆ. ಈ ತಾಣವು ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಅಲ್ಲ, 2000 ವರ್ಷಗಳಷ್ಟು ಹಳೆಯ ಐತಿಹಾಸಿಕ ವ್ಯಾಪಾರ ಮಾರ್ಗವಾಗಿಯೂ ಪ್ರಸಿದ್ಧವಾಗಿದೆ.
Read Full Story
06:53 PM (IST) Aug 19

India Latest News Live 19 August 2026 PM CARES ಅಡಿಟ್‌ ವರದಿ ರಿಲೀಸ್‌ - ಅಕೌಂಟ್‌ನಲ್ಲಿ 8452 ಕೋಟಿ ರೂಪಾಯಿ ಹಣ!

ಪಿಎಂ ಕೇರ್ಸ್ ಫಂಡ್‌ನ ಇತ್ತೀಚಿನ ಆಡಿಟ್ ವರದಿಯ ಪ್ರಕಾರ, ನಿಧಿಯ ಒಟ್ಟು ಬಾಕಿ ಮೊತ್ತ 8,452 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ 1,162 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೂ, ಕೇವಲ 16.47 ಕೋಟಿ ರೂ. ಮಾತ್ರ ವೆಚ್ಚ ಮಾಡಿರುವುದು ವರದಿಯಿಂದ ಬಹಿರಂಗವಾಗಿದೆ.

Read Full Story
06:22 PM (IST) Aug 19

India Latest News Live 19 August 2026 Tata Nexon 2027 - ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಟಾಟಾ ನೆಕ್ಸಾನ್! ಫೀಚರ್ಸ್ ಹೇಗಿರಲಿದೆ?

ಭಾರತದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ನೆಕ್ಸಾನ್‌ನ ಹೊಸ ತಲೆಮಾರಿನ ಮಾಡೆಲ್ ರಸ್ತೆಯಲ್ಲಿ ಪರೀಕ್ಷಾರ್ಥವಾಗಿ ಕಾಣಿಸಿಕೊಂಡಿದೆ. 2027ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಕಾರು, ಸಂಪೂರ್ಣ ಹೊಸ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಫೀಚರ್‌ಗಳೊಂದಿಗೆ ಬರಲಿದೆ.
Read Full Story
05:59 PM (IST) Aug 19

India Latest News Live 19 August 2026 'ಬಂದೂಕು ಹಿಡಿದಿದ್ದ ಕೈಯಲ್ಲಿ ಶೇರು ಸರ್ಟಿಫಿಕೇಟ್..' 25,000 ಮಾಜಿ ನಕ್ಸಲರ ಜೀವನ ಬದಲಿಸಿದ ಲಾಯ್ಡ್ಸ್ ಮೆಟಲ್ಸ್

ಒಂದು ಕಾಲದಲ್ಲಿ ಹಿಂಸಾಚಾರದಿಂದ ಗುರುತಿಸಲ್ಪಡುತ್ತಿದ್ದ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ, 'ಲಾಯ್ಡ್ಸ್ ಮೆಟಲ್ಸ್' ಕಂಪನಿಯು ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿದೆ. ಈ ಮೂಲಕ, 25,000ಕ್ಕೂ ಹೆಚ್ಚು ಮಾಜಿ ಮಾವೋವಾದಿಗಳು ಮತ್ತು ಸ್ಥಳೀಯ ಬುಡಕಟ್ಟು ಜನರು ಕಂಪನಿಯ ಶೇರುದಾರರಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ.

Read Full Story
05:51 PM (IST) Aug 19

India Latest News Live 19 August 2026 IND vs SL 1st Test - ಮಾನವ್ ಸುತಾರ್ ಅಲ್ಲ, ಈತನಿಂದಲೇ ಗೆಲುವು ಸಿಕ್ತು; ಸ್ವಲ್ಪ ಗಲಿಬಿಲಿ ಆಯ್ತು ಎಂದ ಕ್ಯಾಪ್ಟನ್ ಗಿಲ್

ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ ಅವರ ಅಮೋಘ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ನಾಯಕ ಶುಭ್‌ಮನ್ ಗಿಲ್ ಶ್ಲಾಘಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
Read Full Story
05:48 PM (IST) Aug 19

India Latest News Live 19 August 2026 ಭಾರತದಲ್ಲೇ ಮೊದಲು ಸೂರ್ಯೋದಯವಾಗುವ ತಾಣ, ಬೆರಗುಗೊಳಿಸುತ್ತೆ ಈ ಕಣಿವೆಯ ರೋಮಾಂಚಕ ಪಯಣ!

ಅರುಣಾಚಲ ಪ್ರದೇಶದ ಡಾಂಗ್ ಕಣಿವೆಯು ಭಾರತದಲ್ಲಿ ಮೊದಲು ಸೂರ್ಯೋದಯವಾಗುವ ಸ್ಥಳವಾಗಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮುಂಜಾನೆ ಚಾರಣ ಮಾಡಬೇಕಿದ್ದು, ಈ ಲೇಖನವು ಡಾಂಗ್‌ನ ಪ್ರವಾಸಿ ಆಕರ್ಷಣೆಗಳು, ಸ್ಥಳೀಯ ಸಂಸ್ಕೃತಿ ಮತ್ತು ಪ್ರಯಾಣದ ವಿವರಗಳನ್ನು ನೀಡುತ್ತದೆ.
Read Full Story
05:20 PM (IST) Aug 19

India Latest News Live 19 August 2026 ಪ್ರತಿ ಆರು ತಿಂಗಳಿಗೊಮ್ಮೆ ದೇಶ ಬದಲಾಯಿಸುವ ಜಗತ್ತಿನ ಏಕೈಕ ವಿಚಿತ್ರ ದ್ವೀಪ! 350 ವರ್ಷಗಳಿಂದ ನಡೆಯುತ್ತಿದೆ ಈ ಸಂಗತಿ!

ಫ್ರಾನ್ಸ್ ಮತ್ತು ಸ್ಪೇನ್ ಗಡಿಯಲ್ಲಿರುವ ಫೆಸೆಂಟ್ ದ್ವೀಪವು ಒಂದು ವಿಶಿಷ್ಟ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಈ ದ್ವೀಪವು ವರ್ಷದ ಆರು ತಿಂಗಳು ಸ್ಪೇನ್‌ನ ನಿಯಂತ್ರಣದಲ್ಲಿದ್ದರೆ, ಉಳಿದ ಆರು ತಿಂಗಳು ಫ್ರಾನ್ಸ್‌ನ ಆಡಳಿತಕ್ಕೆ ಒಳಪಟ್ಟಿರುತ್ತದೆ. 350 ವರ್ಷಗಳಿಗೂ ಹಳೆಯದಾದ ಈ ವ್ಯವಸ್ಥೆಯು ಎರಡು ದೇಶಗಳ ನಡುವಿನ ಶಾಂತಿಯುತ ಸಹಕಾರದ ಸಂಕೇತವಾಗಿದೆ.
Read Full Story
04:43 PM (IST) Aug 19

India Latest News Live 19 August 2026 ಹೊಸ ಸಿಮ್‌ ಕಾರ್ಡ್‌ಗೆ ರಿಯಲ್‌ ಟೈಮ್‌ ವೆರಿಫಿಕೇಶನ್‌ ಕಡ್ಡಾಯ - ಕೇಂದ್ರದ ಮತ್ತೊಂದು ಕಠಿಣ ನಿಯಮ

'ಡಿಜಿಟಲ್ ಅರೆಸ್ಟ್'ನಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಹೊಸ ಸಿಮ್ ಕಾರ್ಡ್ ಪಡೆಯುವ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಹೊಸ ಸಿಮ್ ಸಕ್ರಿಯಗೊಳಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು 'ರಿಯಲ್-ಟೈಮ್ ಡಿಜಿಟಲ್ ಇಂಟೆಲಿಜೆನ್ಸ್ ಪೋರ್ಟಲ್' ಮೂಲಕ ಪರಿಶೀಲಿಸುವುದು ಕಡ್ಡಾಯವಾಗಲಿದೆ.

Read Full Story
04:20 PM (IST) Aug 19

India Latest News Live 19 August 2026 ವೈರಲ್ ವಿಡಿಯೋ ನೋಡಿ ದಾರಿತಪ್ಪಿದ ಗ್ಯಾಂಗ್ - 16 ವರ್ಷದ ಬಾಲಕನ ವೃಷಣ ಕತ್ತರಿಸಿ ಕೆರೆಗೆ ಎಸೆದ ಪಾಪಿಗಳು!

ಸಾಮಾಜಿಕ ಜಾಲತಾಣದ ವದಂತಿಯನ್ನು ನಂಬಿ, ಭೋಪಾಲ್‌ನಲ್ಲಿ ಗ್ಯಾಂಗ್ ಒಂದು 16 ವರ್ಷದ ಬಾಲಕನನ್ನು ಕೊಂದು ಆತನ ವೃಷಣವನ್ನು ಕತ್ತರಿಸಿದೆ. ಖರೀದಿದಾರರು ಸಿಗದಿದ್ದಾಗ ಸಾಕ್ಷ್ಯ ನಾಶಪಡಿಸಲು ಕೆರೆಗೆ ಎಸೆದಿದ್ದು, ಪೊಲೀಸರು ಈಗ ಆ ಅಂಗಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Read Full Story
04:00 PM (IST) Aug 19

India Latest News Live 19 August 2026 Mekedatu Dam - ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ, ಕರ್ನಾಟಕಕ್ಕೆ ತಮಿಳುನಾಡು ಸಚಿವರ ಖಡಕ್ ಎಚ್ಚರಿಕೆ

ಕಾವೇರಿ ನೀರು ಹಂಚಿಕೆ ವಿವಾದದ ನಡುವೆಯೇ, ತಮಿಳುನಾಡು ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಗೆ ತನ್ನ ವಿರೋಧವನ್ನು ಸ್ಪಷ್ಟಪಡಿಸಿದೆ. ಈ ವಿವಾದಿತ ಯೋಜನೆಗೆ ಕರ್ನಾಟಕ ಒಂದೇ ಒಂದು ಕಲ್ಲು ಹಾಕಲು ಬಿಡುವುದಿಲ್ಲ ಎಂದು ತಮಿಳುನಾಡು ಸಚಿವ ಎನ್. ಆನಂದ್ ಘೋಷಿಸಿದ್ದಾರೆ.
Read Full Story
03:45 PM (IST) Aug 19

India Latest News Live 19 August 2026 ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಶುರುವಾಗೋ ಡೇಟ್ 'ಇದು'.. 12 ಸಾವಿರ ಸ್ಕ್ರೀನ್‌ಗಳಲ್ಲಿ ʻರಾಕಿ ಭಾಯ್‌ʼ ಯಶ್ ಅಬ್ಬರ!

'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ.

Read Full Story
03:27 PM (IST) Aug 19

India Latest News Live 19 August 2026 Health Tips - ಅಪ್ಪಿತಪ್ಪಿಯೂ 'ಇವರು' ಡ್ರ್ಯಾಗನ್ ಹಣ್ಣು ತಿನ್ನುವಂತೆ ಇಲ್ಲ, ಎಷ್ಟು ದೂರವಿದ್ದರೆ ಅಷ್ಟು ಒಳ್ಳೆದು!

ಡ್ರಾಗನ್ ಫ್ರೂಟ್ ಪೋಷಕಾಂಶಗಳಿಂದ ಕೂಡಿದ್ದರೂ, ಕೆಲವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಅಲರ್ಜಿ, ಮಧುಮೇಹ, ಮತ್ತು ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಇದನ್ನು ಸೇವಿಸುವುದು ಉತ್ತಮ. ಆರೋಗ್ಯವಂತರು ಇದನ್ನು ಮಿತವಾಗಿ ಸೇವಿಸಬಹುದು.
Read Full Story
03:23 PM (IST) Aug 19

India Latest News Live 19 August 2026 ಕೇವಲ 46 ಪೈಸೆ ಕಮ್ಮಿ ಕಟ್ಟಿದ್ದಕ್ಕೆ ₹1,200 ದಂಡ! HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕನ ಪೋಸ್ಟ್ ವೈರಲ್

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಕೇವಲ 46 ಪೈಸೆ ಬಾಕಿ ಉಳಿಸಿದ್ದಕ್ಕೆ ಗ್ರಾಹಕರೊಬ್ಬರಿಗೆ ಬ್ಯಾಂಕ್ ₹1,200ಕ್ಕೂ ಅಧಿಕ ದಂಡ ವಿಧಿಸಿದೆ. ಈ ಅನ್ಯಾಯದ ವಿರುದ್ಧ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬ್ಯಾಂಕಿಂಗ್ ನಿಯಮಗಳು ಮತ್ತು ಆರ್‌ಬಿಐ ಮಾರ್ಗಸೂಚಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story