ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ ಅವರ ಅಮೋಘ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ನಾಯಕ ಶುಭ್‌ಮನ್ ಗಿಲ್ ಶ್ಲಾಘಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ದೇವದತ್‌ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಲೇ ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವ ಸಿಕ್ತು ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್ ಹೇಳಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಪಡಿಕ್ಕಲ್ ಗಳಿಸಿದ ಭಾರೀ ಸ್ಕೋರ್, ಪಂದ್ಯವನ್ನು ತಮ್ಮ ಕಡೆಗೆ ವಾಲುವಂತೆ ಮಾಡಿತು ಎಂದು ಹೇಳಿದ್ದಾರೆ. ಎರಡು ಟೆಸ್ಟ್ ಸರಣಿಯ ಭಾಗವಾಗಿ ಗಾಲೆ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆದ ಮೊದಲ ಪಂದ್ಯದಲ್ಲಿ ಭಾರತ 165 ರನ್‌ಗಳ ಭಾರೀ ಅಂತರದೊಂದಿಗೆ ಗೆಲುವು ಪಡೆಯಿತು.

372 ರನ್‌ಗಳ ಭಾರೀ ಮೊತ್ತದ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 84/4 ರನ್‌ಗಳ ಓವರ್ ನೈಟ್‌ ಸ್ಕೋರ್‌ನೊಂದಿಗೆ ಕೊನೆಯ ದಿನ ಆಟ ಆರಂಭಿಸಿತ್ತು. ಆದರೆ ಲಂಕಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಆಲೌಟ್ ಆಯ್ತು. ಈ ಗೆಲುವಿನೊಂದಿಗೆ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಯೊಂದಿಗೆ ಮುನ್ನಡೆ ಪಡೆಯಿತು.

ಈ ಗೆಲುವು ಬಹಳ ವಿಶೇಷ!

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ಕ್ಯಾಪ್ಟನ್ ಶುಭ್‌ಮನ್‌ ಗಿಲ್, ಮಳೆಯ ಕಾರಣದಿಂದ ಗೆಲುವಿನ ವಿಚಾರದಲ್ಲಿ ಸ್ವಲ್ಪ ಆತಂಕ ಆಯ್ತು. ಭಾರತಕ್ಕೆ ಇದು 600ನೇ ಟೆಸ್ಟ್ ಪಂದ್ಯದ ಗೆಲುವು. ಈ ಕಾರಣದಿಂದ ಈ ಗೆಲುವು ವಿಶೇಷವಾಗಿದೆ. ಈ ಗೆಲುವು ಬಹಳ ಖುಷಿಕೊಟ್ಟಿದೆ. ಹವಾಮಾನ ಕಾರಣದಿಂದ ಅಂತಿಮ ದಿನದಂದು ಆಟ ನಡೆಯುತ್ತಾ ಎಂಬ ಗೊಂದಲ ಎದುರಾಗಿತ್ತು. ಇದರಿಂದ ಸ್ವಲ್ಪ ಒತ್ತಡ ಆಯ್ತು, ಆದರೆ ತಂಡದ ಉತ್ತಮ ಪ್ರದರ್ಶನ ನೀಡಿತು ಎಂದಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಅುಭವಿಸಿದ ವೈಫಲ್ಯದ ಬಗ್ಗೆ ಯಾವುದೇ ಆತಂಕ ಇಲ್ಲ. ಏಕೆಂದರೆ ನಾವು 400 ರನ್ಗಳ ಲಕ್ಷ್ಯವನ್ನು ಎದುರಾಳಿಗೆ ನೀಡಬೇಕು ಎಂದು ಚರ್ಚೆ ಮಾಡಿದ್ದವು. ಅದರಂತೆ ಪ್ಲ್ಯಾನ್ ಮಾಡಿ ವೇಗದ ಆಟಕ್ಕೆ ಮೊರೆ ಹೋಗಿದ್ದವು. ಆದರೆ ಇಂತಹ ಪಿಚ್‌ನಲ್ಲಿ ರನ್‌ಗಳಿಸುವುದು ಅಷ್ಟು ಸುಲಭ ಅಲ್ಲ. 4 ಮತ್ತು 5ನೇ ದಿನ ಎಷ್ಟು ಓವರ್ ಬೌಲ್ ಮಾಡ್ತೀವಿ ಎಂದು ಕ್ಲಾರಿಟಿ ಇರಲಿಲ್ಲ. ಶ್ರೀಲಂಕಾ ಹೆಚ್ಚು ಓವರ್ ಆಡಿಸಬೇಕು ಎಂಬ ಉದ್ದೇಶದಿಂದ ವೇಗವಾಗಿ ಆಡಿದ್ದೇವು. ಈ ಕ್ರಮದಿಂದಲೇ ವೇಗವಾಗಿ ವಿಕೆಟ್ ಕಳೆದುಕೊಂಡಿದ್ದೇವು. ಆದರೂ ನಾವು ಉತ್ತಮ ಸ್ಥಾನದಲ್ಲಿದ್ದೇವು ಎಂದು ಗಿಲ್ ಹೇಳಿದ್ದಾರೆ.

ಮಾನವ್ ಸೂತರ್ ಬೌಲಿಂಗ್ ಅದ್ಭುತ

ಮಾನವ್ ಸೂತರ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಲಂಕಾ ವಿರುದ್ಧವೂ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದರು. ಆತ ಬಹಳ ಪ್ರತಿಭಾವಂತ, ಭಾರತ ಪರ ಸುದೀರ್ಘ ಕಾಲ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಬಹಳ ಉತ್ತಮವಾಗಿತ್ತು. ಶತಕದ ಬಳಿಕವೂ ಇನ್ನಿಂಗ್ಸ್ ಮುಂದೂವರಿಸಿ ತಂಡ ಭಾರೀ ಸ್ಕೋರ್ ನೀಡಿದ್ದರು. ಸವಾಲಿನ ಪಂದ್ಯವನ್ನು ನಮ್ಮ ಕಡೆ ತಿರುಗುವಂತೆ ಮಾಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಪಡಿಕ್ಕಲ್ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದ ರೀತಿ ಬಹಳ ವಿಶೇಷವಾಗಿತ್ತು. ಡಬ್ಲ್ಯೂಟಿಸಿ ಟೈಟಲ್ ಗೆಲ್ಲುವುದು ನಮ್ಮ ಅಂತಿಮ ಗುರಿ. ಟೆಸ್ಟ್ ಗೆಲುವು ಅಷ್ಟು ಸುಲಭ ಅಲ್ಲ, ಆದರೆ ಈ ಗೆಲುವು ನಮಗೆ ಬಹಳ ಸಂತಸಕೊಟ್ಟಿದೆ ಎಂದು ಹೇಳಿದ್ದಾರೆ.

ಸಂಕ್ಷೀಪ್ತ ಸ್ಕೋರ್

  • ಭಾರತ ಮೊದಲ ಇನ್ನಿಂಗ್ಸ್- 462 ಆಲೌಟ್
  • ಶ್ರೀಲಂಕಾ ಮೊದಲ ಇನ್ನಿಂಗ್ಸ್- 284 ಆಲೌಟ್
  • ಭಾರತ ಎರಡನೇ ಇನ್ನಿಂಗ್ಸ್- 193 ಆಲೌಟ್
  • ಶ್ರೀಲಂಕಾ ಎರಡನೇ ಇನ್ನಿಂಗ್ಸ್- 206 ಆಲೌಟ್