ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್‌ಗಳಲ್ಲಿನ ನಿರ್ವಹಣಾ ಕಾರ್ಯದಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಹಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ ಮತ್ತು ಭಾಗಶಃ ರದ್ದುಪಡಿಸಿದೆ. ಮೈಸೂರು, ಅರಸೀಕೆರೆ, ಶಿವಮೊಗ್ಗ, ಮತ್ತು ಬೆಂಗಳೂರು ಮಾರ್ಗದ ಅನೇಕ ರೈಲುಗಳ ಸಂಚಾರದಲ್ಲಿ ಆಗಸ್ಟ್ ತಿಂಗಳ ನಿಗದಿತ ದಿನಾಂಕಗಳಂದು ಬದಲಾವಣೆಗಳಾಗಲಿವೆ.

ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್‌ಗಳಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ, ಭಾಗಶಃ ರದ್ದುಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಪ್ರಕಟಣೆ ಮೂಲಕ ತಿಳಿಸಿದೆ.

ರೈಲುಗಳ ರದ್ದತಿ:

1. ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ಅನ್ನು 19.08.2026 ರಂದು ರದ್ದುಗೊಳಿಸಲಾಗಿದೆ.

2. ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ದೈನಂದಿನ ಪ್ಯಾಸೆಂಜರ್ ಅನ್ನು 25.08.2026 ಮತ್ತು 01.09.2026 ರಂದು ರದ್ದುಗೊಳಿಸಲಾಗಿದೆ

II. ರೈಲುಗಳ ಭಾಗಶಃ ರದ್ದತಿ:

1. ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ ಅನ್ನು 19.08.2026 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು.

2. ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ ಅನ್ನು 25.08.2026 ಮತ್ತು 01.09.2026 ರಂದು ಅರಸೀಕೆರೆ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುವುದು.

III. ರೈಲುಗಳ ಭಾಗಶಃ ರದ್ದತಿ:

1. ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್‌ಪ್ರೆಸ್, 19.08.2026 ರಂದು ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಣದಲ್ಲಿರಲಿದೆ.

ಇದಾಗಲೇ ಇನ್ನೂ ಕೆಲವು ರೈಲುಗಳ ರದ್ದತಿ ಕುರಿತು ಮಾಹಿತಿ ನೀಡಲಾಗಿದೆ.

ರೈಲು ಸಂಖ್ಯೆ 20652: ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (Talguppa – KSR Bengaluru Express) ರೈಲಿನ ಸಂಚಾರವು ಭಾಗಶಃ ರದ್ದಾಗಲಿದೆ. ಆಗಸ್ಟ್ 22, 23 ಮತ್ತು 26 ರಂದು ಈ ರೈಲು ಅರಸೀಕೆರೆಯಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಮುಂದೆ ಹೋಗುವವರು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ರೈಲು ಸಂಖ್ಯೆ 20689: ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ( Yesvantpur–Shivamogga Town Intercity Express) ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ. ಆಗಸ್ಟ್ 22, 23 ಮತ್ತು 26 ರಂದು ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೆ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಈ ರೈಲುಗಳ ಸೇವೆಗಳೂ ರದ್ದು

ಆಗಸ್ಟ್ 26 ರಂದು ಈ ರೈಲುಗಳ ಸೇವೆ ರದ್ದು ಆಗಲಿವೆ. ಅವುಗಳೆಂದರೆ

ಚಿಕ್ಕಮಗಳೂರು–ಯಶವಂತಪುರ (ರೈಲು ಸಂಖ್ಯೆ: 16239),

ಯಶವಂತಪುರ–ಚಿಕ್ಕಮಗಳೂರು (ರೈಲು ಸಂಖ್ಯೆ: 16240),

ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ (ರೈಲು ಸಂಖ್ಯೆ: 12614),

ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (ರೈಲು ಸಂಖ್ಯೆ: 66567) ಹಾಗೂ

ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (ರೈಲು ಸಂಖ್ಯೆ: 66572)

ಅದೇ ರೀತಿ, ಆಗಸ್ಟ್ 22 ಮತ್ತು 26 ರಂದು ಯಲಹಂಕ–ಅರಸೀಕೆರೆ (ರೈಲು ಸಂಖ್ಯೆ: 66505) ಮತ್ತು ಅರಸೀಕೆರೆ–ಯಲಹಂಕ (ರೈಲು ಸಂಖ್ಯೆ: 66506) ಮೆಮು ರೈಲುಗಳ ಸಂಚಾರವೂ ಇರುವುದಿಲ್ಲ.

ಅಂತೆಯೇ, ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 17310) ಹಾಗೂ ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20676) ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇವು ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.