ನಟಿ ನಿವೇತಾ ಥಾಮಸ್ ಇತ್ತೀಚೆಗೆ ತಮ್ಮ ಹೊಸ ಲುಕ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.
90ರ ದಶಕದ ಮಕ್ಕಳಿಗೆ ಚಿರಪರಿಚಿತವಾಗಿರುವ ‘ಮೈ ಡಿಯರ್ ಭೂತಂ’ ಧಾರಾವಾಹಿಯ ಬಾಲನಟಿ ನಿವೇತಾ ಥಾಮಸ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ನಿವೇತಾ, ಇತ್ತೀಚೆಗೆ ತಮ್ಮ ಹೊಸ ಲುಕ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.
‘ಮೈ ಡಿಯರ್ ಭೂತಂ’ನ ಪುಟಾಣಿ ಈಗ ಹೀರೋಯಿನ್!
ನಿವೇತಾ ಥಾಮಸ್ ಅವರಿಗೆ ತಮಿಳು ಕಿರುತೆರೆಯ ಮೂಲಕವೇ ಬಾಲ್ಯದಲ್ಲಿ ದೊಡ್ಡ ಜನಪ್ರಿಯತೆ ಸಿಕ್ಕಿತ್ತು. ಅದರಲ್ಲೂ 90ರ ದಶಕದ ಮಕ್ಕಳ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಮೈ ಡಿಯರ್ ಭೂತಂ’ನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಗಳಿಸಿದ್ದರು. ಶಾಲೆ ಮುಗಿಸಿ ಮನೆಗೆ ಬಂದ ಕೂಡಲೇ ನೋಡುತ್ತಿದ್ದ ಧಾರಾವಾಹಿಗಳ ಪಟ್ಟಿಯಲ್ಲಿ ‘ಮೈ ಡಿಯರ್ ಭೂತಂ’ ಕೂಡ ಇತ್ತು ಎಂದು ಇಂದಿಗೂ ಅನೇಕ 90s ಕಿಡ್ಸ್‌ಗಳು ನೆನಪಿಸಿಕೊಳ್ಳುತ್ತಾರೆ. ಕಿರುತೆರೆಯಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡ ನಿವೇತಾ, ನಂತರ ಬೆಳ್ಳಿತೆರೆಗೆ ಕಾಲಿಟ್ಟರು. ತಮಿಳು ಮಾತ್ರವಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಾಯಕಿಯಾಗಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಿವೇತಾ!
ನಿವೇತಾ ಥಾಮಸ್ ನಟನೆಯ ಕೊನೆಯ ಪ್ರಮುಖ ಚಿತ್ರಗಳಲ್ಲಿ ‘35 ಚಿನ್ನ ಕಥಾ ಕಾಡು’ ಕೂಡ ಒಂದು. 2024ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಿವೇತಾ ಇಬ್ಬರು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನೂ ಹೆಚ್ಚಿಸಿಕೊಂಡಿದ್ದರು. ಸಿನಿಮಾ ಬಿಡುಗಡೆಯಾದ ಬಳಿಕ ನಿವೇತಾ ಅವರ ಬದಲಾಗಿದ್ದ ಲುಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಾಕಷ್ಟು ಚರ್ಚೆ ನಡೆಸಿದ್ದರು. ನಟಿಯ ತೂಕ ಹೆಚ್ಚಾಗಿರುವುದನ್ನು ಗಮನಿಸಿದ ಕೆಲವರು ಕೂಡ ಪ್ರತಿಕ್ರಿಯೆ ನೀಡಿದ್ದರು.
ಈಗ ಸ್ಲಿಮ್ ಲುಕ್‌ನಲ್ಲಿ ನಿವೇತಾ ಥಾಮಸ್!
ಇದೀಗ ಅದೇ ನಿವೇತಾ ಥಾಮಸ್ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಬದಲಾದ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಾತ್ರಕ್ಕಾಗಿ ದೇಹದಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಮತ್ತೆ ತಮ್ಮ ಫಿಟ್ ಲುಕ್‌ಗೆ ಮರಳಿರುವ ನಿವೇತಾ, ಹೊಸ ಫೋಟೋ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ‘ಮೈ ಡಿಯರ್ ಭೂತಂ’ನ ಪುಟ್ಟ ಬಾಲನಟಿಯಿಂದ ದಕ್ಷಿಣ ಭಾರತದ ಬಹುಭಾಷಾ ನಾಯಕಿಯವರೆಗೆ ಬೆಳೆದಿರುವ ನಿವೇತಾ ಅವರ ಈ ಹೊಸ ಲುಕ್ ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.


