MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Life
  • Health Tips: ಅಪ್ಪಿತಪ್ಪಿಯೂ 'ಇವರು' ಡ್ರ್ಯಾಗನ್ ಹಣ್ಣು ತಿನ್ನುವಂತೆ ಇಲ್ಲ, ಎಷ್ಟು ದೂರವಿದ್ದರೆ ಅಷ್ಟು ಒಳ್ಳೆದು!

Health Tips: ಅಪ್ಪಿತಪ್ಪಿಯೂ 'ಇವರು' ಡ್ರ್ಯಾಗನ್ ಹಣ್ಣು ತಿನ್ನುವಂತೆ ಇಲ್ಲ, ಎಷ್ಟು ದೂರವಿದ್ದರೆ ಅಷ್ಟು ಒಳ್ಳೆದು!

ಡ್ರಾಗನ್ ಫ್ರೂಟ್ ಪೋಷಕಾಂಶಗಳಿಂದ ಕೂಡಿದ್ದರೂ, ಕೆಲವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಅಲರ್ಜಿ, ಮಧುಮೇಹ, ಮತ್ತು ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಇದನ್ನು ಸೇವಿಸುವುದು ಉತ್ತಮ. ಆರೋಗ್ಯವಂತರು ಇದನ್ನು ಮಿತವಾಗಿ ಸೇವಿಸಬಹುದು.

2 Min read
Author : Sumanth SN
Published : Aug 19 2026, 03:27 PM IST
Share this Photo Gallery
  • FB
  • TW
  • Linkdin
  • Whatsapp
16
ಆಹಾರ ಭಾಗವಾಗಿ ಸೇವಿಸುವುದು ಉತ್ತಮ
Image Credit : Getty

ಆಹಾರ ಭಾಗವಾಗಿ ಸೇವಿಸುವುದು ಉತ್ತಮ

ಡ್ರಾಗನ್ ಫ್ರೂಟ್‌ನಲ್ಲಿ ನಾರಿನಾಂಶ, ವಿಟಮಿನ್, ಆಂಟಿಆಕ್ಸಿಡೆಂಟ್ಸ್ ನಂತರ ಪೋಷಕಾಂಶಗಳು ಇರುತ್ತವೆ. ಸಾಮಾನ್ಯವಾಗಿ ಆರೋಗ್ಯವಾಗಿ ಇರುವವರು ಇದನ್ನು ಆಹಾರದ ಭಾಗವಾಗಿ ಸೇವಿಸಬಹುದು. ಆದರೆ ಪ್ರತಿಯೊಬ್ಬರು ಇದೇ ರೀತಿ ಸೇವಿಸುವ ಅಗತ್ಯವಿಲ್ಲ. ಪ್ರಮುಖವಾಗಿ ಕೆಲವು ಆರೋಗ್ಯ ಸಮಸ್ಯೆಗಳಿರುವ ಜನರು ಕಡಿಮೆ ಪ್ರಮಾಣದಲ್ಲಿ ಡ್ರ್ಯಾಗನ್ ಫ್ರೂಟ್ ಸೇವಿಸಿದರೆ ಉತ್ತಮ ಎಂದು ಡಯಟಿಷಿಯನ್ ಡಾಕ್ಟರ್ ಶ್ರೀಲತಾ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಲರ್ಜಿ ಸಮಸ್ಯೆ ಇರುವವರು
Image Credit : Getty

ಅಲರ್ಜಿ ಸಮಸ್ಯೆ ಇರುವವರು

ಅಲರ್ಜಿ ಸಮಸ್ಯೆ ಇರುವವರು ಇದನ್ನು ಸಂಪೂರ್ಣವಾಗಿ ದೂರವಿಡಬೇಕು. ಈ ಸಮಸ್ಯೆ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಿಸುತ್ತದೆ. ಕೆಲವರಲ್ಲಿ ಡ್ರ್ಯಾಗನ್ ಫ್ರೂಟ್ ಸೇವಿಸಿದರೆ ಗುಳ್ಳೆ ಆಗೋದು, ಕೆರತ ಆಗುವುದು ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತವೆ. ಕೆಲವರಿಗೆ ಉಸಿರಾಟದಲ್ಲೂ ಸಮಸ್ಯೆಯಾಗುತ್ತದೆ. ಅಂತಹವರು ಕೂಡಲೇ ವೈದ್ಯನ್ನು ಸಂಪರ್ಕ ಮಾಡಬೇಕಾಗುತ್ತದೆ.

Related Articles

Related image1
ಉಡುಪಿ: ರಾಜ್ಯದಲ್ಲಿ ಮೊದಲ ಬಾರಿಗೆ Dragon Boat Championship!
Related image2
Dragon Fruit Farming: ಬಯಲು ಸೀಮೆಯಲ್ಲಿ ಡ್ರ್ಯಾಗನ್ ಬೆಳೆದು ಯಶಸ್ವಿಯಾದ ಯುವ ರೈತ!
36
ಮಧುಮೇಹ ಕಾಯಿಲೆ
Image Credit : Getty

ಮಧುಮೇಹ ಕಾಯಿಲೆ

ಸಕ್ಕರೆ ಖಾಯಿಲೆ ಇರುವವರು ಇದನ್ನು ಸೇವಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು, ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಅದರಲ್ಲೂ ಶುಗರ್ ಕಡಿಮೆ ಮಾಡುವ ಔಷಧಿ ಅಥವಾ ಇನ್ಸುಲಿನ್ ಉಪಯೋಗಿಸುವ ಮಂದಿ ಈ ಹಣ್ಣನ್ನು ಹೆಚ್ಚು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಧುಮೇಹ ಇರುವವರು ತಮ್ಮ ಡಯಾಟ್‌ಗೆ ಅನುಗುಣವಾಗಿ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೋ ಅಷ್ಟು ಮಾತ್ರ ಅಥವಾ ನಿಮ್ಮ ಡೈಟಿಷಿಯನ್ ಸಲಹೆ ಪಡೆದು ಸೇವಿಸುವುದು ಉತ್ತಮ.

46
ಕಿಡ್ನಿ ಸಮಸ್ಯೆ ಇರುವವರು ಎಚ್ಚರ ವಹಿಸಿ!
Image Credit : pinterest

ಕಿಡ್ನಿ ಸಮಸ್ಯೆ ಇರುವವರು ಎಚ್ಚರ ವಹಿಸಿ!

ಮೂತ್ರಪಿಂಡ ಸಮಸ್ಯೆ ಇರುವವರು ಈ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಕಿಡ್ನಿಗಳು ಕೆಲಸ ಮಾಡದ ಸಂದರ್ಭದಲ್ಲಿ ದೇಶದಲ್ಲಿ ಪೊಟಾಶಿಯಂ ಮಟ್ಟವನ್ನು ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಇಂತಹ ಸಮಸ್ಯೆ ಇರುವವರಿಗೆ ಹಣ್ಣಿನಲ್ಲಿರುವ ಪೊಟಾಶಿಯಂ ಕೂಡ ಪರಿಣಾಮ ಉಂಟು ಮಾಡಬಹುದು. ಆದರೆ ಕಿಡ್ನಿ ಸಮಸ್ಯೆ ಇರುವವರು ಸಂಪೂರ್ಣವಾಗಿ ಡ್ರ್ಯಾಗನ್ ಫ್ರೂಟ್ ಸೇವಿಸಬಾರದು ಅಂತ ಹೇಳಲು ಯಾವುದೇ ಸೂಕ್ತ ಆಧಾರಗಳು ಇಲ್ಲ. ನಿಮ್ಮ ಕಿಡ್ನಿಯ ಆರೋಗ್ಯ ಸಮಸ್ಯೆ ಯಾವ ಹಂತದಲ್ಲಿದೆ, ರಕ್ತದಲ್ಲಿ ಪೊಟಾಶಿಯಂ ಪ್ರಮಾಣ ಎಷ್ಟಿದೆ, ಯಾವ ಔಷಧಿ ಬಳಕೆ ಮಾಡುತ್ತಿದ್ದೀರಿ ಎಂಬ ಬಗ್ಗೆ ವೈದ್ಯರ ಸಲಹೆ ಪಡೆದು ಹಣ್ಣು ಸೇವಿಸಿ.

56
ಗರ್ಭಿಣಿ, ಬಾಣಂತಿಯರು ಸೇವಿಸಬಹುದಾ?
Image Credit : pinterest

ಗರ್ಭಿಣಿ, ಬಾಣಂತಿಯರು ಸೇವಿಸಬಹುದಾ?

ಗರ್ಭಿಣಿ, ಬಾಣಂತಿಯರು ಆಹಾರದಲ್ಲಿ ಡ್ರ್ಯಾಗನ್ ಫ್ರೂಟ್ ಸೇವಿಸುವುದರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಔ‍ಷಧಿ ರೂಪದಲ್ಲಿ ಅಥವಾ ಸಪ್ಲಿಮೆಂಟರಿ ರೂಪದಲ್ಲಿ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರ ಬಗ್ಗೆ ಅಗತ್ಯ ಮಾಹಿತಿ ಕಡಿಮೆ ಇದೆ. ಆದ್ದರಿಂದ ಸಮೀತವಾಗಿ ಆಹಾರ ರೂಪದಲ್ಲಿ ಈ ಹಣ್ಣು ಸೇವಿಸುವುದು ಉತ್ತಮ.

66
ವೈದ್ಯ ಸಲಹೆ ಪಡೆಯಿರಿ
Image Credit : Getty

ವೈದ್ಯ ಸಲಹೆ ಪಡೆಯಿರಿ

ಒಟ್ಟಾರೆ, ಡ್ರ್ಯಾಗನ್ ಫ್ರೂಟ್‌ಅನ್ನು ಯಾರು ತಿನ್ನಬಾರದು ಅನ್ನೋದು ಸರಿಯಾದ ಮಾತು ಅಲ್ಲ. ಉತ್ತಮ ಆರೋಗ್ಯಕ್ಕಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತವಾದ ಸಂಗತಿ. ಆದರೆ ಅಲರ್ಜಿ ಇರುವವರು ಇದರಿಂದ ಸಂಪೂರ್ಣ ದೂರ ಇರ್ಬೇಕು. ಮಧುಮೇಹ, ಕಿಡ್ನಿ ಸಮಸ್ಯೆ ಸೇರಿದಂತೆ ದೀರ್ಘಕಾಲದ ಆರೋಗ್ಯ ಸಮಸ್ಯೆ ಇರುವವರು ಮಾತ್ರ ವೈದ್ಯರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಆರೋಗ್ಯಕರ ಆಹಾರಗಳು
ಆರೋಗ್ಯ
ಹಣ್ಣುಗಳು

Latest Videos
Recommended Stories
Recommended image1
ಭಾನುವಾರ, ಏಕಾದಶಿಯಂದು ತುಳಸಿಗೆ ನೀರು ಹಾಕಬಾರದೇಕೆ? ಈ ನಾಲ್ಕು ತಪ್ಪನ್ನು ಎಂದಿಗೂ ಮಾಡಬೇಡಿ
Recommended image2
Cancer Detection: ಸಾಕು ನಾಯಿಗಳು ನಿಜವಾಗಿಯೂ ಮನುಷ್ಯರಲ್ಲಿನ ಕ್ಯಾನ್ಸರ್ ಪತ್ತೆಹಚ್ಚಬಲ್ಲವೇ?
Recommended image3
Anklet Designs:ಈ ಕಾಲ್ಗೆಜ್ಜೆ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ
Related Stories
Recommended image1
ಉಡುಪಿ: ರಾಜ್ಯದಲ್ಲಿ ಮೊದಲ ಬಾರಿಗೆ Dragon Boat Championship!
Recommended image2
Dragon Fruit Farming: ಬಯಲು ಸೀಮೆಯಲ್ಲಿ ಡ್ರ್ಯಾಗನ್ ಬೆಳೆದು ಯಶಸ್ವಿಯಾದ ಯುವ ರೈತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved