
ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್ಸ್ಟರ್ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
ಟಾಕ್ಸಿಕ್ನ ಸ್ಯಾಂಪಲ್ಸ್ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದ ಮೇಲೆ ಈ ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ. ಮೇಲ್ನೋಟಕ್ಕೆ ಇದು ಗ್ಯಾಂಗ್‌ಸ್ಟರ್ ಸ್ಟೋರಿ ಅನ್ನಿಸಿದರೂ ಇಲ್ಲಿ ಗ್ಯಾಂಗ್‌ಸ್ಟರ್ ಕತೆ ಮಾತ್ರವಲ್ಲ ಬೇರೆಯದ್ದೇ ಸ್ಟೋರಿ ಇದೆ ಅಂತ ಯಶ್ ಬಾಯ್ಬಿಟ್ಟಿದ್ದಾರೆ..
ರಾಕಿಂಗ್ ಸ್ಟಾರ್ ಯಶ್(Rocking Star Yash) ನಟನೆಯ ಟಾಕ್ಸಿಕ್ ಮೂವಿ ಹೇಗಿರುತ್ತೆ..? ಈಗಾಗ್ಲೆ ಬಂದಿರೋ ಟೀಸರ್ ನೋಡಿ ಯಶ್ ಈ ಭಾರಿ ಬೇರೆಯದ್ದೇನೋ ಮಾಡಿದ್ದಾರೆ ಅನ್ನೋ ನಂಬಿಕೆ ಬೇರೆ ಹುಟ್ಟಿದೆ.. ಇಲ್ಲಿ ಯಶ್ ಗ್ಯಾಂಗ್‌ಸ್ಟರ್ ಕಥೆ ಹೇಳಿದ್ದಾರೆ ಅನ್ನೋ ಒಂದು ಹಿಂಟ್ ಅಂತೂ ಸಿಕ್ಕಿದೆ. ಇಲ್ಲಿ ನಿಜಕ್ಕೂ ಗ್ಯಾಂಗ್‌ಸ್ಟರ್ ಕತೆ ಇದೆಯಾ..? ಯಶ್ ರೋಲ್ ಹೇಗೆಲ್ಲಾ ಇರುತ್ತೆ..? ಇದಕ್ಕೆಲ್ಲ ಈಗ ರಾಕಿ ಭಾಯ್ ಹಾಲಿವುಡ್ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ನೋಡೋಣ ಬನ್ನಿ..
ಹಾಲಿವುಡ್ ಸಂದರ್ಶನದಲ್ಲಿ ಟಾಕ್ಸಿಕ್ ಕತೆ ಬಿಚ್ಚಿಟ್ಟ ಯಶ್; ರಾಕಿಯ ಕನಸಿನ ಸಿನಿಮಾದಲ್ಲಿ ಏನೆಲ್ಲಾ ಇದೆ ಗೊತ್ತಾ..?
ರಾಕಿಂಗ್ ಸ್ಟಾರ್ ಯಶ್ ನಟನೆಯ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪದೇ ಪದೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿ ಕೊನೆಗೆ ಜೂನ್ 4ಕ್ಕೆ ಸಿನಿಮಾ ತೆರೆಗೆ ಬರೋದು ಪಕ್ಕಾ ಆಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂದು ಸಾಂಗ್ ಬಂದು ಹಿಟ್ ಆಗಿದೆ.
ಟಾಕ್ಸಿಕ್ನ ಸ್ಯಾಂಪಲ್ಸ್ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದ ಮೇಲೆ ಈ ಸಿನಿಮಾದಲ್ಲಿ ಯಶ್ ಏನೆಲ್ಲಾ ಕತೆ ಹೇಳಿರಬಹುದು ಅನ್ನೋ ಲೆಕ್ಕಾಚಾರಗಳು ನಡೀತಾ ಇದೆ. ಮೇಲ್ನೋಟಕ್ಕೆ ಇದು ಗ್ಯಾಂಗ್‌ಸ್ಟರ್ ಸ್ಟೋರಿಯ ಸಿನಿಮಾ ಅನ್ನೋದು ಗೊತ್ತಾಗಿದೆ. ಆದ್ರೆ ಇಲ್ಲಿ ಗ್ಯಾಂಗ್‌ಸ್ಟರ್ ಕತೆ ಮಾತ್ರವಲ್ಲ ಬೇರೆಯದ್ದೇ ಸ್ಟೋರಿ ಇದೆ ಅಂತ ಯಶ್ ಬಾಯ್ಬಿಟ್ಟಿದ್ದಾರೆ..
ಟಾಕ್ಸಿಕ್ನಕ್ಕಿ ಗ್ಯಾಂಗ್‌ಸ್ಟರ್ ಮಾತ್ರವಲ್ಲ ಬೇರೆಯದ್ದೇ ಸ್ಟೋರಿ ಇದೆ..!
'ರಾಮಾಯಣ' ಸಿನಿಮಾ ಬಗ್ಗೆ ಚರ್ಚೆಯ ನಡುವೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಯಶ್ ಮನ ಬಿಚ್ಚಿದ್ದಾರೆ. "ಟಾಕ್ಸಿಕ್ ಬಹಳ ಮಹತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಇಂಗ್ಲೀಷ್‌ನಲ್ಲಿ ಕೂಡ ಸಿನಿಮಾ ಶೂಟ್ ಮಾಡಿದ್ದೀವಿ. ಕಾನ್ಸೆಪ್ಟ್‌ನಲ್ಲಿ ಸಾಕಷ್ಟು ಪದರಗಳಿವೆ. ಇಡು ಬರೀ ಟಿಪಿಕಲ್ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ. ಮೇಲ್ನೋಟಕ್ಕೆ ಭಾರೀ ಆಕ್ಷನ್ ಇರುವ ಗ್ಯಾಂಗ್‌ಸ್ಟರ್ ಸಿನಿಮಾ ಅನಿಸಬಹುದು. ಆದರೆ ಬಹಳ ಆಳವಾದ ಸೈಕಾಲಜಿ ಇದೆ ಡಾರ್ಕ್ ಕ್ಯಾರೆಕ್ಟರ್‌ಗಳನ್ನು ತೋರಿಸಿದ್ದೇವೆ ನೋಡೋಕೆ ಸಿಕ್ಕಾಪಟ್ಟೆ ಮಜವಾಗಿರುತ್ತದೆ" ಎಂದಿದ್ದಾರೆ ಯಶ್.
ನಿರ್ದೇಶಕಿ ಗೀತು ಮೋಹನ್ ದಾಸ್ ಕೊಂಡಾಡಿದ ಯಶ್; ಟಾಕ್ಸಿಕ್ ಚಿತ್ರಕ್ಕೆ ಹೊಸ ಆಯಾಮ ಕೊಟ್ಟಿದ್ದೇ ಡೈರೆಕ್ಟರ್..!
ಅಷ್ಟೆ ಅಲ್ಲ ನಟ ಯಶ್ ಟಾಕ್ಸಿಕ್ ಹಿಂದಿನ ಸೂತ್ರಧಾರಿ ನಿರ್ದೇಶಕಿ ಗೀತೂ ಮೋಹನ್ ದಾಸ್. ಆದ್ರೆ ಯಶ್ ಹಾಗು ಗೀತು ಮೋಹನ್ ದಾಸ್ ಮಧ್ಯೆ ಯಾವ್ದು ಸರಿ ಇಲ್ಲ ಅಂತೆಲ್ಲ ಸುದ್ದಿಯಾದ ಕಾಲವೂ ಇತ್ತು. ಭಟ್ ಈಗ ಯಶ್ ಟಾಕ್ಸಿಕ್ ಬಗ್ಗೆ ಮಾತನಾಡುತ್ತಾ ಈ ಚಿತ್ರಕ್ಕೆ ಹೊಸ ಆಯಾಮ ಕೊಟ್ಟಿದ್ದೇ ನಿರ್ದೇಶಕಿ ಗೀತು ಮೋಹನ್ ದಾಸ್ ಎಂದಿದ್ದಾರೆ. ಅಷ್ಟೆ ಅಲ್ಲ "ನಾನು ಗ್ಯಾಂಗ್‌ಸ್ಟರ್ ಕ್ಯಾರೆಕ್ಟರ್‌ಗಳನ್ನು ಮಾಡಿದ್ದೀನಿ, ಡಾರ್ಕ್ ಕ್ಯಾರೆಕ್ಟರ್ ಮಾಡುವುದಕ್ಕೂ ಇಷ್ಟ. ನಟನಾಗಿ ಸಾಕಷ್ಟು ಪಾತ್ರಗಳನ್ನು ಮಾಡಬೇಕು, ಅದಕ್ಕೆ ಯಾವುದೇ ಗಡಿ ಇಲ್ಲ. ಈ ಚಿತ್ರದಲ್ಲಿ ಆ ಕ್ಯಾರೆಕ್ಟರ್‌ಗೆ ಸಾಕಷ್ಟು ಶೇಡ್ಸ್, ಲುಕ್ಸ್ ಇವೆ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...