ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!

ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ ! ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ ! ಹಾರ್ಮುಜ್ ಜಲಸಂಧಿಯಲ್ಲಿ‌ದೆ ಇಡೀ ವಿಶ್ವದ ಲಗಾಮು ! ಇರಾನ್ ಕೊಟ್ಟ ಎಚ್ಚರಿಕೆಗೆ ಭೂಮಂಡಲೇ ನಡುಗಿದ್ದೇಕೆ..?

Share this Video
  • FB
  • Linkdin
  • Whatsapp

ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ ! ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ ! ಹಾರ್ಮುಜ್ ಜಲಸಂಧಿಯಲ್ಲಿ‌ದೆ ಇಡೀ ವಿಶ್ವದ ಲಗಾಮು ! ಇರಾನ್ ಕೊಟ್ಟ ಎಚ್ಚರಿಕೆಗೆ ಭೂಮಂಡಲೇ ನಡುಗಿದ್ದೇಕೆ..? ಇದೇ ಈ ಹೊತ್ತಿನ ವಿಶೇಷ ಇಂಟರ್ನೆಟ್ ಬಂದ್ ಇರಾನ್ ಬ್ರಹ್ಮಾಸ್ತ್ರ. ಪಾಕಿಸ್ತಾನದಲ್ಲಿ‌ ನಡೆಯುತ್ತಿದ್ದ ಶಾಂತಿ ಮಾತುಕತೆಯಿಂದ‌ ಇರಾನ್ ಹೊರಬಂದಿದೆ. ಅಮೆರಿಕಾದ ಹೊಸ ಹೊಸ‌ ನಿಂಬಂಧನೆಗಳು‌ ಅನಾವಶ್ಯಕವಾಗಿದ್ದು, ಇದು ಅತಿರೇಖದ ವರ್ತನೆಯಗಿದೆ.. ಅಲ್ದೆ, ಯುದ್ಧಕ್ಕೆ ನಾವು ಸದಾ ಸಿದ್ಧವಾಗಿಯೇ ಇದ್ದೇವೆ ಅನ್ನೋ ಸಂದೇಶವನ್ನು ರವಾನೆ‌ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮದ್ಯೆ ಹಡಗೊಂದನ್ನ ಅಮೆರಿಕ‌ ವಶಪಡಿಸಿಕೊಂಡಿರೋದಕ್ಕೆ ಕೆಂಡಾಮಂಡಲವಾಗಿರುವ ಇರಾನ್, ತನ್ನ ಬತ್ತಳಿಕೆಯಲ್ಲಿರೋ ಹೊಸ ಬ್ರಹ್ಮಾಸ್ತ್ರವನ್ನು ಪ್ರದರ್ಶನ ಮಾಡಿದೆ. ಅದನ್ನು ನೋಡಿಯೇ ಜಗತ್ತು ಬೆಚ್ಚಿಬಿದ್ದಿದೆ. ಇರಾನ್ ಬತ್ತಳಿಕೆಯಲ್ಲಿ ಜಗತ್ತಿನ ಅಂತರ್ಜಾಲ‌ ಸಂಪರ್ಕದ ಮಹಾ ಬ್ರಹ್ಮಾಸ್ತ್ರವಿದೆ ಅನ್ನೋದನ್ನ.. ಇದನ್ನ ಕಟ್ ಮಾಡಿದ್ರೆ ಏನೆಲ್ಲಾ ಆಗುತ್ತದೆ ಅನ್ನೋದನ್ನ ಊಹೆ ಕೂಡ ಮಾಡೋದಕ್ಕೆ ಅಗೋಲ್ಲ. ಹೀಗಿರುವಾಗ ಭಾರತಕ್ಕೆ ಇದ್ರಿಂದ ಏನೆಲ್ಲಾ ಆಗುತ್ತದೆ. ಇರಾನ್ ಬತ್ತಳಿಕೆಯ ಬ್ರಹ್ಮಾಸ್ತ್ರ ಹಾರ್ಮುಜ್ ಜಲಸಂಧಿಯಲ್ಲಿ ಹಾದು ಬಂದಿರುವ ಇಂಟರ್ನೆಟ್ ಕೇಬಲ್ ಗಳಾಗಿವೆ.

ಅಮೆರಿಕವನ್ನು ನಿಯಂತ್ರಣದಲ್ಲಿ‌ ಇಡೋದಕ್ಕೆ ಅಂತ ಇರಾನ್ ಈ ಕೇಬಲ್ ಗಳನ್ನ ಕಟ್ ಮಾಡಿದ್ದೇ ಆದ್ರೆ, ಜಗತ್ತು 10 ವರ್ಷಗಳ‌ ಹಿಂದಕ್ಕೆ ತಳ್ಳಲ್ಪಡುತ್ತದೆ. ಈ ಒಂದು ಜಲ ಸಂಧಿಯಲ್ಲಿ ಹಾದು ಹೋಗಿರುವ ಇಂಟರ್ನೆಟ್ ಭಾರತದ ಆರ್ಥಿಕತೆಯ ಮೇಲೆ ಏನೆಲ್ಲಾ ಪರಿಣಾಮ‌ ಬಿರುತ್ತದೆ ಅನ್ನೋದನ್ನ ನೋಡಿದ್ರಲ್ಲ. ಇರಾನ್ ಅಷ್ಟು ಸುಲಭಕ್ಕೆ ಈ ಅಸ್ತ್ರವನ್ನು ಪ್ರಯೋಗ ಮಾಡೋದಿಲ್ಲ... ಮಾಡಿದ್ರೆ, ಅದು ಇರಾನ್ ಗೆ ಮುಳುವಾಗುವ ಸಾಧ್ಯತೆಗಳು ಹೆಚ್ಚು.. ಹೀಗಾಗಿ ಅಮೆರಿಕ ಇದಕ್ಕೆ ಪ್ರತಿತಂತ್ರ ಮಾಡೋದ್ರ ಬದಲು‌ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತದೆ.. ಇಷ್ಟಾಗಿಯೂ ಕೇಬಲ್ ಕಟ್ ಮಾಡಿದ್ರೆ‌ ಏನೆಲ್ಲಾ ಆಗುತ್ತದೆ.

Related Video