ಗಾಜಾಪಟ್ಟಿಯಲ್ಲಿ ಮನುಕುಲದ ಮಹಾವಲಸೆ: ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ವಿರುದ್ಧ ಹೋರಾಟ ?

11ನೆ ದಿನಕ್ಕೆ ಕಾಲಿಟ್ಟರೂ ನಿಲ್ಲುತ್ತಿಲ್ಲ ಇಸ್ರೇಲ್ ಹಮಾಸ್ ಯುದ್ಧ 
ಉಗ್ರರ ನಿರ್ನಾಮಕ್ಕೆ ಸವಾಲಾಗಿ ಕಾಡುತ್ತಿದ್ದ ಗಾಜಾಪಟ್ಟಿ ನಗರ
ಈ ಯುದ್ಧಕ್ಕೆ ನಗರಗಳೇ ರಣರಂಗವಾಗಿರುವುದು ಮೊದಲ ಸವಾಲು

Share this Video
  • FB
  • Linkdin
  • Whatsapp

ಗಾಜಾಪಟ್ಟಿಯಲ್ಲಿ ಮನುಕುಲದ ಮಹಾವಲಸೆ ನಡೆಯುತ್ತಿದೆ. ಗಾಜಾಪಟ್ಟಿಯ ಉತ್ತರ ಭಾಗದಿಂದ ದಕ್ಷಿಣದತ್ತ 10 ಲಕ್ಷ ಜನ ವಲಸೆ ಹೋಗುತ್ತಿದ್ದಾರೆ. ಉತ್ತರ ಭಾಗವನ್ನು ಖಾಲಿ ಮಾಡುವಂತೆ ಡೆಡ್‌ಲೈನ್‌ನನ್ನು ಇಸ್ರೇಲ್(Isreal) ನೀಡಿತ್ತು. ವಿದ್ಯುತ್, ಆಹಾರ, ನೀರಿಲ್ಲದೆ ಪ್ರಾಣಭೀತಿಯಿಂದ ಜನ ಗುಳೆ ಹೋಗುತ್ತಿದ್ದಾರೆ. ಹಮಾಸ್(Hamas)ಉಗ್ರರ ಮಹಾಬೇಟೆಯಲ್ಲಿ ಪ್ಯಾಲೆಸ್ತೀನ್ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಯುದ್ಧಪೀಡಿತ ನಗರಗದ ಆಸ್ಪತ್ರೆಗಳಲ್ಲೂ(Hospitals) ಔಷಧೋತ್ಪನಗಳಿಗೆ ಅಭಾವ ಉಂಟಾಗಿದೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಲ್ಲಿ ಜನರೇಟರ್‌ಗಳೂ ಸ್ತಬ್ಧವಾಗುವ ಆತಂಕ ಇದೆ. ಕಟ್ಟಡಗಳ ಅವಶೇಷಗಳಡಿ ನಿವಾಸಿಗಳು ಆಹಾರವನ್ನು(Food) ಹುಡುಕುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಇಸ್ರೇಲ್ ಭೂಸೇನೆ ಗಾಜಾನಗರ ಪ್ರವೇಶಿಸುವ ಸಾಧ್ಯತೆ ಇದೆ. ಗಾಜಾಪಟ್ಟಿ ಚಿಕ್ಕದಾಗಿರುವುದರಿಂದ ಇಸ್ರೇಲ್ ಮುಂದೆ ಹಲವಾರು ಸವಾಲುಗಳು ಇವೆ.

ಇದನ್ನೂ ವೀಕ್ಷಿಸಿ: ಗಾಜಾ ಅತಿಕ್ರಮಿಸಿದ್ರೆ ಇಸ್ರೇಲ್‌ ವಿರುದ್ಧ ಇರಾನ್‌ ಯುದ್ಧ ? ಇಸ್ರೇಲ್‌ ಬಳಿ ಇರುವ ಆಯ್ಕೆಗಳೇನು ?

Related Video