
ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ತನ್ನ ಅಪಾರ ಖನಿಜ ಸಂಪತ್ತಿನ ಗಣಿಗಾರಿಕೆಗಾಗಿ ಅಮೆರಿಕದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಪಾಕಿಸ್ತಾನ-ಅಮೆರಿಕ ಸಂಬಂಧವನ್ನು ಬಲಪಡಿಸಿದರೆ, ಅಮೆರಿಕದ ಹೆಚ್ಚಿದ ಉಪಸ್ಥಿತಿಯು ಭಾರತದ ಭದ್ರತೆಗೆ ಕಂಟಕವಾಗುವ ಸಾಧ್ಯತೆ ಇದೆ.
ಬೆಂಗಳೂರು (ಅ.10): ಪಾಕಿಸ್ತಾನ ಮತ್ತು ಅಮೆರಿಕಾದ ನಡುವೆ ನಡೆದಿರುವ ಒಂದು ಮಹತ್ವದ ವ್ಯಾಪಾರ ಒಪ್ಪಂದವು ಪ್ರಾದೇಶಿಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಆರ್ಥಿಕವಾಗಿ ಭಿಕಾರಿ ಸ್ಥಿತಿಯಲ್ಲಿರುವ ಪಾಕಿಸ್ತಾನ, ತನ್ನ ದೇಶದ ಭೂಗರ್ಭದಲ್ಲಿರುವ ಅಪಾರ ಖನಿಜ ಸಂಪತ್ತಿನ ಗಣಿಗಾರಿಕೆಗಾಗಿ ಅಮೆರಿಕಾದ ಅಧ್ಯಕ್ಷರ ಪಡೆಗೆ ಪ್ರವೇಶ ನೀಡಲು ಮುಂದಾಗಿದೆ.
ಈ $500 ಮಿಲಿಯನ್ ಮೌಲ್ಯದ ಒಪ್ಪಂದವು ಪಾಕಿಸ್ತಾನದ ಆರ್ಥಿಕತೆಗೆ ತಾತ್ಕಾಲಿಕ ಮದ್ದು ನೀಡುವ ಪ್ರಯತ್ನವಾದರೆ, ಪಾಕಿಸ್ತಾನದ ಒಡಲಲ್ಲಿರುವ ಅಂದಾಜು $6 ಟ್ರಿಲಿಯನ್ ಮೌಲ್ಯದ ಸಂಪತ್ತಿನ ಮೇಲೆ ಅಮೆರಿಕಾ ಕಣ್ಣಿಟ್ಟಿದೆ.
ಔರಂಗಜೇಬ್ ಕಾಲದಲ್ಲಿ ಮಾತ್ರ ಭಾರತ ಒಗ್ಗಟ್ಟಾಗಿತ್ತು, ಪಾಕ್ ರಕ್ಷಣಾ ಸಚಿವನ ಮತ್ತೊಂದು ವಿವಾದ
ಅಮೆರಿಕಾದಿಂದ ಸಿಗುವ ಈ ಭದ್ರತಾ ಸಹಕಾರವು ಭಾರತದ ಹಿತಾಸಕ್ತಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಪಾಕಿಸ್ತಾನದ ಬಂದರುಗಳಲ್ಲಿ ಅಮೆರಿಕಾದ ಅಟ್ಟಹಾಸ ಹೆಚ್ಚಾದರೆ, ಅದು ಭಾರತದ ಭದ್ರತೆ ಮತ್ತು ನೆರೆಹೊರೆಯ ರಾಜಕೀಯ ಸಮತೋಲನಕ್ಕೆ ಕಂಟಕವಾಗಬಹುದು. ಈ ಹೊಸ ಒಪ್ಪಂದವು ಪಾಕಿಸ್ತಾನ ಮತ್ತು ಅಮೆರಿಕಾದ ಸಂಬಂಧವನ್ನು ಗಟ್ಟಿಗೊಳಿಸಲಿದ್ದು, ಪಾಕಿಸ್ತಾನಕ್ಕೆ ಅಮೆರಿಕಾದ ಭದ್ರತಾ ಸಹಕಾರ ಲಭಿಸುವ ಸಾಧ್ಯತೆ ಇದೆ.