ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?

ಅದೆಷ್ಟೋ ಹುಡುಗರ ಮನದಲ್ಲಿ ಕ್ವೀನ್ ರಶ್ಮಿಕಾ ಮಂದಣ್ಣ ಈಗ ಪಾರ್ಟಿ ಮೂಡ್ನಲ್ಲಿದ್ದಾರೆ. ಅರೇ ಇದೇನ್ರಿ ಮೊನ್ನೆ ಮೊನ್ನೆಯಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡು ಸಂಸಾರಿ ಆಗೋಕೆ ಮೊದಲ ಸಹಿ ಹಾಕಿರೋ ರಶ್ಮಿಕಾ ಈಗ್ಯಾಕ್ ಪಾರ್ಟಿ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಅದೆಷ್ಟೋ ಹುಡುಗರ ಮನದಲ್ಲಿ ಗರ್ಲ್ ಫ್ರೆಂಡ್ ಆಗಿರೋ ಕ್ವೀನ್ ರಶ್ಮಿಕಾ ಮಂದಣ್ಣ ಈಗ ಪಾರ್ಟಿ ಮೂಡ್ನಲ್ಲಿದ್ದಾರೆ. ಅರೇ ಇದೇನ್ರಿ ಮೊನ್ನೆ ಮೊನ್ನೆಯಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡು ಸಂಸಾರಿ ಆಗೋಕೆ ಮೊದಲ ಸಹಿ ಹಾಕಿರೋ ರಶ್ಮಿಕಾ ಈಗ್ಯಾಕ್ ಪಾರ್ಟಿ ಮಾಡುತ್ತಿದ್ದಾರೆ ಅಂತೀರಾ..? ಅದಕ್ಕೂ ಕಾರಣ ಇದೆ. ಹಾಗಾದ್ರೆ ರಶ್ಮಿಕಾ ಪಾರ್ಟಿ ಎಲ್ಲಾಯ್ತು..? ಯಾಕಾಯ್ತು. ಈ ಪಾರ್ಟಿಯಲ್ಲಿ ಯಾರೆಲ್ಲಾ ಇದ್ರು? ರಶ್ಮಿಕಾ ಮಂದಣ್ಣ.. ಬಣ್ಣದ ಜಗತ್ತಿನ ಹಾಟ್ ಟಾಪಿಕ್.. ಪಡ್ಡೆ ಹುಡುಗರಿಗೆ ಕಿಕ್ ಕೊಡೋ ಟಾನಿಕ್.. ಅದೆಷ್ಟೋ ಗಂಡ್ ಹೈಕ್ಳ ಎದೆಯಲ್ಲಿ ಇವಳೇ ನನ್ನ ಗರ್ಲ್ ಫ್ರೆಂಡ್ ಅನ್ನೋ ಭಾವನೆ ಮೂಡಿಸಿರೋ ಭವನ ಸುಂದರಿ.. ಹಾಗಂತ ಈಗ ಈಕೆಯನ್ನ ಮನದಲ್ಲಿಟ್ಟುಕೊಂಟ್ರೆ ಹುಷಾರ್.. ಯಾಕಂದ್ರೆ ರಶ್ಮಿಕಾ ಈಗ ಬ್ಯಾಚ್ಯುಲರ್ ಅಲ್ಲ ಕಮೀಟೆಡ್.

ಯೆಸ್, ಡಿ ಗ್ರೇಟ್ ಹ್ಯಾಂಡ್ಸಮ್ ಹಂಕ್ ವಿಜಯ್ ದೇವರಕೊಂಡ ಜೊತೆ ಶ್ರೀವಲ್ಲಿ ರಶ್ಮಿಕಾ ಕಮೀಟ್ ಆಗಿದ್ದಾರೆ. ಇದ್ದ ಬದ್ದ ಗಾಸಿಪ್ಗೆಲ್ಲಾ ತೆರೆ ಎಳೆದಿರೋ ರಶ್ಮಿಕಾ ವಿಜಯ್ ಎಂಗೇಜ್ಮೆಂಟ್ ಮಾಡಿಕೊಂಡು ಹಸೆಮಣೆ ಏರಲು ಅಣಿ ಆಗುತ್ತಿದ್ದಾರೆ. ಆದವ್ರೆ ಅದರ ಪಡೀಗೆ ಅದು ನಡೀಲಿ ಅಂತ ರಶ್ಮಿಕಾ ತನ್ನ ಡಿಸೆಂಬರ್ ರಜೆಯ ಮಜದಲ್ಲಿ ಫುಲ್ ಪಾರ್ಟಿ ಮಾಡಿದ್ದಾರೆ. ಹಾಗಂತ ಅದು ಭಾವಿ ಪವಿ ವಿಜಯ್ ದೇವರಕೊಂಡ ಜೊತೆ ಅಲ್ಲವೇ ಅಲ್ಲ. ತನ್ನ ಜೀವದ ಗೆಳತಿಯರ ಜೊತೆ ಪಾರ್ಟಿ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಜೀವನದಲ್ಲಿ ಈ ವರ್ಷ ಸುಖ ಶಾಂತಿ, ಸಂಭ್ರಮದ ಕಡಲಲ್ಲಿ ತೇಲಿಸಿದೆ. ಯಾಕಂದ್ರೆ ಮೂರು ಬಿಗ್ ಹಿಟ್ ಸಿನಿಮಾಗಳು ಒಂದು ಕಡೆ ಆದ್ರೆ, ಇಷ್ಟ ಪಟ್ಟ ಹುಡುಗನ ಜೊತೆ ದಾಂಪತ್ಯ ಶುರು ಮಾಡಲು ನಿಶ್ಚಿತಾರ್ಥ ಮಾಡಿಕೊಂಡ್ರು. ಈಗ ಆ ಮದುವೆ ಮೊದಲು ಕೆಲಸಕ್ಕೆ ಎರಡು ದಿನ ರಜೆ ಹಾಕಿ ತನ್ನ ಗೆಳತಿಯರ ಗ್ಯಾಂಗ್ ಕಟ್ಟಿಕೊಂಡು ಶ್ರೀಲಂಕಾದಲ್ಲಿ ಪಾರ್ಟಿ ಮಾಡಿದ್ದಾರೆ.

ಈ ಪಾರ್ಟಿ ಫೊಟೋಗಳನ್ನ ಎಲ್ಲರೂ ಶೇರ್ ಮಾಡುತ್ತಿದ್ದು ಇದು ರಶ್ಮಿಕಾ ಬ್ಯಾಚ್ಯೂಲರ್ ಪಾರ್ಟಿ ಅಂತ ಹೇಳಲಾಗ್ತಿದೆ. ರಶ್ಮಿಕಾ ಕಂದಣ್ಣ ತನ್ನ ಸಿಂಗಲ್ ಸ್ಟೇಟಸ್‌ಗೆ ಗುಡ್ ಬೈ ಹೇಳಿ ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಫೆಬ್ರವರಿ 26ರಕ್ಕೆ ರಶ್ಮಿಕಾ ವಿಜಯ್ ದೇವರಕೊಂಡ ಸತಿ ಪತಿ ಅನ್ನೋದು ಅಧಿಕೃತ ಆಗುತ್ತೆ. ಇವರಿಬ್ಬರದ್ದು ಡೆಸ್ಟಿನೇಷನ್ ವೆಡ್ಡಿಂಗ್ ಅಂತ ಹೇಳಲಾಗಿದೆ. ಆದ್ರೆ ಅದಕ್ಕೂ ಮೊದಲು ಶ್ರೀಲಂಕಾದಲ್ಲಿ ಡೆಸ್ಟಿನೇಷನ್ ಬ್ಯಾಚ್ಯೂಲರ್ ಪಾರ್ಟಿ ಮಾಡಿದ್ದಾರೆ ರಶ್ಮಿಕಾ ಗ್ಯಾಂಗ್. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಯಾವ ಊರು ..? ಯಾವ ರಾಜ್ಯ ..? ಯಾವ ದೇಶ..? ಸಾಕ್ಷಿಯಾಗಲಿದೆ ಎನ್ನುವುದು ಸದ್ಯ ಗೊತ್ತಿಲ್ಲ. ಆದ್ರೆ ರಾಜಸ್ಥಾನದ ಉದಯಪುರದಲ್ಲಿ ವೈಭವೋಪೇತವಾಗಿ ಇಬ್ಬರ ಮದುವೆ ನಡೆಯಲಿದೆ ಅಂತ ಹೇಳಲಾಗಿದೆ. ಸದ್ಯಕ್ಕಂತೂ ಮದುವೆಗೆ ಮುನ್ನ ಗೆಳತಿಯರೊಂದಿಗೆ ರಶ್ಮಿಕಾ ಮಾಡಿರೋ ಬ್ಯಾಚುಲರ್ ಪಾರ್ಟಿ ಸದ್ದು ಸುದ್ದಿ ಮಾಡ್ತಾ ಇದೆ.

Related Video