24 ಗಂಟೆಯಲ್ಲಿ ನಾಶವಾಗಿದ್ದು, 2 ದೇಗುಲಗಳು: ಪಾಕಿಸ್ತಾನದ ಹಿಂದೂಗಳಿಗೆ ಹೊಸ ಕಂಟಕ..?
ಪಾಪಿ ದೇಶದಲ್ಲಿ ನೆಲಸಮವಾಗುತ್ತಿವೆ ಮಂದಿರಗಳು!
ಕರಾಚಿ ದೇವಸ್ಥಾನ ಕೆಡವಲು ಬಂತು ಬುಲ್ಡೋಜರ್!
150 ವರ್ಷಗಳ ಹಿಂದಿನ ಮಂದಿರ ಈಗ ಸರ್ವನಾಶ!
ಸುಮಾರು 150 ವರ್ಷಗಳ ಹಿಂದಿನ ದೇವಾಲಯ(Temples). 4500 ಚದರ ಅಡಿಗಳಷ್ಟು ವಿಶಾಲವಾದ ಜಾಗ ಅದು. ಆ ಜಾಗದ ಮೇಲೆ ಮುಂಚಿನಿಂದಲೂ ಒಂದಷ್ಟು ಮಂದಿ ಕಣ್ಣಿಟ್ಟಿದ್ದರು. 7 ಕೋಟಿಗೆ ಆ ಜಾಗ ಕೊಂಡುಕೊಂಡು, ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲು ನೋಡುತ್ತಿದ್ದರು. ಪದೇ ಪದೇ ಆ ದೇವಸ್ಥಾನದ ಮೇಲೆ ದಾಳಿ(Attack) ಮಾಡುವ ಪ್ರಯತ್ನ ನಡೆದಿತ್ತು. ಆ ದೇವಾಲದ ಅಡಿಯಲ್ಲಿ ಸಂಪತ್ತು ಇದೆ ಅನ್ನೋ ಮಾತು ಸಹ ಇದೆ. ಇನ್ನೂ ಮತ್ತೊಂದು ಕಡೆ ಪಾಕಿಸ್ತಾನದ(Pakisthan) ಸಿಂಧ್ ಪ್ರಾಂತ್ಯದಲ್ಲಿರೋ ಕಾಶ್ಮೋರ್ ಅನ್ನೋ ಪ್ರದೇಶದಲ್ಲಿ, ಕೆಲವು ಹಿಂದೂಗಳಿದ್ದಾರೆ. ಅಲ್ಲಿ ಅವರೇ ಒಂದು ಸಣ್ಣ ಮಂದಿರವನ್ನೂ ನಿರ್ಮಿಸಕೊಂಡಿದ್ದಾರೆ. ಆ ಮಂದಿರದ ಮೇಲೆ ದಾಳಿ ನಡೆದಿದೆ. ಡಕಾಯಿತರು ಹಾಗೂ ದರೋಡೆಕೋರರ ವೇಷದಲ್ಲಿ ಬಂದಿದ್ದ ಕಡುಪಾಪಿಗಳು ಇಂಥದ್ದೊಂದು ದಾಳಿ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಮೋದಿ ಸೋಲಿಸುವುದೊಂದೇ ಮಹಾಘಟಬಂಧನ್ ಗುರಿ: ಸೋಲ್ತಾರಾ..? ಗೆಲ್ತಾರಾ..? ಏನ್ ಹೇಳುತ್ತೆ ಚರಿತ್ರೆ..?