Asianet Suvarna News Asianet Suvarna News

ಮೋದಿ ಸೋಲಿಸುವುದೊಂದೇ ಮಹಾಘಟಬಂಧನ್‌ ಗುರಿ: ಸೋಲ್ತಾರಾ..? ಗೆಲ್ತಾರಾ..? ಏನ್ ಹೇಳುತ್ತೆ ಚರಿತ್ರೆ..?

ಘಟಬಂಧನ ವ್ಯೂಹ ಭೇದಿಸಲು ಮೋದಿ ಬಳಿ ಇರುವ ಅಸ್ತ್ರವೇನು..? 
ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿತಾ ಇಂದಿನ ಸಭೆ
ಮಹಾ ಘಟಬಂಧನದಿಂದ ಜೆಡಿಎಸ್ ಪಕ್ಷ ಔಟ್ ಆಗಿದ್ದು ಏಕೆ..? 
 

ಮೋದಿ ಮಿಂಚಿನೋಟಕ್ಕೆ ಬ್ರೇಕ್ ಹಾಕಲು ಮತ್ತೊಮ್ಮೆ ಮಹಾಘಟಬಂಧನ್(Mahaghatabandhan) ಯಾತ್ರೆ ಶುರುವಾಗಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್(Congress) ಪಕ್ಷದೊಂದಿಗೆ ಒಟ್ಟು 23 ಪ್ರಾದೇಶಿಕ ಪಕ್ಷಗಳು (Regional parties)ಈಗ ಮೋದಿ ವಿರುದ್ಧ ಸಡ್ಡು ಹೊಡೆದಿವೆ. ಮೋದಿ(Modi) ಮಿಂಚಿನೋಟಕ್ಕೆ ಬ್ರೇಕ್ ಹಾಕಲು, ಬೆಂಗಳೂರಿನಲ್ಲಿ ಮಹಾ ಘಟಬಂಧನದ ಹಬ್ಬವೇ ನಡೆದಿದೆ. 2024ರಲ್ಲಿ ಲೋಕಸಭಾ ಎಲೆಕ್ಷನ್ ನಡೆಯಲಿದೆ. ಈ ಎಲೆಕ್ಷನ್‌ಗಾಗಿ ದೇಶದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿವೆ. ಮೊನ್ನೆ, ರಾಜ್ಯದಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಭಯಗೊಂಡು ಈಗಿನಿಂದಲೇ ಲೋಕಸಭಾ ಚುನಾವಣಾ ಸಿದ್ಧತೆಯಲ್ಲಿ ಮುಳುಗಿದೆ. ಪ್ರಧಾನಿ ನರೇಂದ್ರ ಮೋದಿ ಅವ್ರ 3ನೇ ಅಶ್ವಮೇಧ ಯಾತ್ರೆಗೆ, ಬಿಜೆಪಿ ಸೈಲೆಂಟಾಗಿ ಸಿದ್ಧಗೊಳ್ಳುತ್ತಿದೆ. 

ಇದನ್ನೂ ವೀಕ್ಷಿಸಿ:  ಕೃಷ್ಣನ ಪಾತ್ರದಲ್ಲಿ ಕುರಿಬಾಯ್‌ ಹನುಮಂತ: ಭರ್ಜರಿ ಬ್ಯಾಚುಲರ್‌ನಲ್ಲಿ ಮಸ್ತ್‌ ಡ್ಯಾನ್ಸ್‌..!