ಕಲ್ಲು ಹೊಡೆದ್ರು..ಆವಾಜ್ ಹಾಕಿದ್ರು..ಪೊಲೀಸರಿಗೇ ಹೆದರಿಸಿದ್ರು: ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ನಿಜಕ್ಕೂ ಆಗಿದ್ದೇನು ?
ಒಂದೋ ಅವ್ರು ಸಾಯ್ಬೇಕು..ಇಲ್ಲಾ ನಾವ್ ಸಾಯ್ಬೇಕು..?
ನಾವು ಸಾಬ್ರು.. ಗೊತ್ತಲ್ಲಾ ಎಂಥಾ ನನ್ ಮಕ್ಳು ಅಂತ..!
ಕೈಯಲ್ಲಿ ದೊಣ್ಣೆ, ಕಲ್ಲು, ಸಿಕ್ಕ ಸಿಕ್ಕ ಮನೆಗಳ ಅಟ್ಯಾಕ್..!
ಮಲೆನಾಡು ಶಿವಮೊಗ್ಗದಲ್ಲಿ ತಾಲಿಬಾನ್ ಸಂಸ್ಕೃತಿಯ ಅನಾವರಣ. ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ಮತಾಂಧರ ಅಟ್ಟಹಾಸ. ಧರ್ಮಾಂಧರ ವಿಕೃತಿಗೆ ಸಾಕ್ಷಿಯಾಯ್ತು ರಾಗಿಗುಡ್ಡ(Ragigudda) 8th ಕ್ರಾಸ್. ಹಿಂದೂಗಳ ಮನೆಗಳನ್ನೇ ಟಾರ್ಗೆಟ್(Target) ಮಾಡಿ ಕಲ್ಲು ಹೊಡೆದ್ರು. "ನಾವ್ ಗೊತ್ತಲ್ಲಾ" ಅಂತ ಬೆದರಿಕೆ ಹಾಕಿದ್ರು. ಇದು ರಾಗಿಗುಡ್ಡ ಅಗ್ನಿಕುಂಡದಿಂದ ಹೊರ ಬಿದ್ದ ಸ್ಫೋಟಕ ರಹಸ್ಯ. ಮತಾಂಧರ ಅಟ್ಟಹಾಸದ ಅಸಲಿ ಚಿತ್ರಣ. ಮತಿಗೇಡಿಗಳ ದರ್ಪ, ದಾರ್ಷ್ಯತನವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ ದೃಶ್ಯಗಳು. ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದ(Shivamogga) ರಾಗಿಗುಡ್ಡದ 8ನೇ ಕ್ರಾಸ್'ನಲ್ಲಿ ನಡೆದ ಕಲ್ಲುತೂರಾಟ, ಗಲಭೆಯ ಮತ್ತೊಂದು ಮುಖದ ಅನಾವರಣವಾಗಿದೆ. ಈದ್ ಮಿಲಾದ್ ಅನ್ನೋದು ಇಸ್ಲಾಂ ಧರ್ಮ ಅತ್ಯಂತ ಪ್ರಮುಖ ಹಬ್ಬ. ಅದಕ್ಕೆ ತನ್ನದೇ ಆದ ಪ್ರಾಮುಖ್ಯತೆಯೂ ಇದೆ. ಶಾಂತಿಯನ್ನೇ ಪ್ರತಿಪಾದಿಸಿದ ಪ್ರವಾದಿ ಮಹಮ್ಮದರ ಜನ್ಮದಿನವನ್ನು ಈದ್ ಮಿಲಾದ್(Eid Milad) ಹಬ್ಬವಾಗಿ ಮುಸ್ಲಿಮರು ಆಚರಿಸ್ತಾರೆ. ಈ ಹಬ್ಬವನ್ನು ಜಗತ್ತಿನ ಬೇರೆ ಬೇರೆ ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ಆದ್ರೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಆಚರಣೆಯನ್ನು ನೋಡಿದ್ರೆ, ಎಂಥವರಿಗಾದ್ರೂ ರಕ್ತ ಕುದಿಯತ್ತೆ. ಅಲ್ಲಿ ಮನುಷ್ಯ ಜನ್ಮಕ್ಕೇ ಅವಮಾನ ಎಂಬಂತಿರೋ ಮೊಘಲ್ ದೊರೆ ಔರಂಗಜೇಬನ ದೊಡ್ಡ ಕಟೌಟ್ ಹಾಕಲಾಗಿತ್ತು. ಔರಂಗಜೇಬನನ್ನು ಆರಾಧಿಸೋ ಧರ್ಮಾಂಧರಿಂದ, ಮತಾಂಧರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಈದ್ ಮಿಲಾದ್ ಮೆರವಣಿಗೆಯ ಮಧ್ಯೆ ಸೇರಿಕೊಂಡಿದ್ದ ಮತಿಗೇಡಿಗಳ ಅಟ್ಟಹಾಸದಿಂದ ರಾಗಿಗುಡ್ಡ ಅಕ್ಷರಶಃ ಅಗ್ನಿಕುಂಡವಾಗಿ ಬಿಡ್ತು.
ಇದನ್ನೂ ವೀಕ್ಷಿಸಿ: ಮಂಡ್ಯದಿಂದ ಮತ್ತೆ ಕಣಕ್ಕಿಳೀತಾರಾ ನಿಖಿಲ್ ಕುಮಾರಸ್ವಾಮಿ ?