ಮಂಡ್ಯದಿಂದ ಮತ್ತೆ ಕಣಕ್ಕಿಳೀತಾರಾ ನಿಖಿಲ್ ಕುಮಾರಸ್ವಾಮಿ ?

ಸ್ಥಳೀಯ ಅಭ್ಯರ್ಥಿ ಸ್ಪರ್ಧೆಗೆ ಸಭೆಯಲ್ಲಿ ಎಚ್ಡಿಕೆ ಹೆಚ್ಚಿನ ಒಲವು 
ಸ್ಥಳೀಯ ಜೆಡಿಎಸ್ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಆತಂಕ 
ವಿರೋಧಿಗಳು ಒಡಕಿನ ಲಾಭ ಪಡೆಯದಂತೆ ತಡೆಯುವ ಪ್ಲಾನ್

Share this Video
  • FB
  • Linkdin
  • Whatsapp

ಮಂಡ್ಯದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳೀತಾರಾ ಎಂಬ ಪ್ರಶ್ನೆ ಈಗ ಮೂಡಿದೆ. 2ನೇ ಬಾರಿ ‘ಲೋಕ’ ಅಗ್ನಿ ಪರೀಕ್ಷೆಗೆ ನಿಖಿಲ್ ಮುಂದಾಗುವ ಸಾಧ್ಯತೆ ಇದೆ. ಬಿಜೆಪಿ(BJP), ಜೆಡಿಎಸ್(JDS) ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ(Nikhil Kumaraswamy) ಮಂಡ್ಯದಿಂದ ಕಣಕ್ಕೆ ಇಳಿಯುವಂತೆ ಒತ್ತಾಯ ಸಹ ಕೇಳಿಬರುತ್ತಿದೆಯಂತೆ. ಮಂಡ್ಯ ಜೆಡಿಎಸ್ ನಾಯಕರಿಂದಲೇ ನಿಖಿಲ್ ಸ್ಪರ್ಧೆಗೆ ಒಲವು ಕೇಳಿಬರುತ್ತಿದೆ. ಬಿಡದಿಯಲ್ಲಿ ನಡೆದ ಸಭೆ ವೇಳೆ ಎಚ್‌ಡಿಕೆ(HDK) ಎದುರು ಈ ವಿಷಯವನ್ನು ಪ್ರಸ್ತಾಪ ಮಾಡಲಾಗಿದೆಯಂತೆ. ಸ್ಥಳೀಯ ಅಭ್ಯರ್ಥಿ ಸ್ಪರ್ಧೆಗೆ ಸಭೆಯಲ್ಲಿ ಎಚ್‌ಡಿಕೆ ಒಲವು ತೋರಿದ್ದಾರೆ ಎನ್ನಲಾಗ್ತಿದೆ. ಮಂಡ್ಯ ಲೋಕಸಭೆ (Loksabhe) ಅಭ್ಯರ್ಥಿಯ ಬಗ್ಗೆಯೂ ಅಭಿಪ್ರಾಯ ಸಂಗ್ರಹವಾಗಿದೆ. ನಿಖಿಲ್ ಸ್ಪರ್ಧಿಸಿದ್ರೆ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸುವ ಭರವಸೆ ನೀಡಲಾಗಿದೆಯಂತೆ. ಮಂಡ್ಯ ನಾಯಕರಿಂದ ಮಾಜಿ ಸಿಎಂ ಎಚ್‌ಡಿಕೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇತ್ತ ಸ್ಪರ್ಧೆ ಬಗ್ಗೆ ಕಾರ್ಯಕರ್ತರು ನಿರ್ಧರಿಸ್ತಾರೆ ಎಂದು ನಿಖಿಲ್ ಹೇಳಿದ್ದಾರೆ. ನಿಖಿಲ್‌ಗೆ ಪಟ್ಟ ಕಟ್ಟುವ ಮೂಲಕ ಒಗ್ಗಟ್ಟು ಪ್ರದರ್ಶನಕ್ಕೆ ದಳಪತಿ ಪ್ಲ್ಯಾನ್‌ ಮಾಡಿದಂತೆ ಕಾಣುತ್ತಿದೆ. 

ಇದನ್ನೂ ವೀಕ್ಷಿಸಿ: ಸಿಎಂ ವರ್ಸಸ್ ಡಿಸಿಎಂ ವಾರ್: ಶಾಸಕರ ಪರ ಸಿಎಂ, ಕಾರ್ಯಕರ್ತರ ಪರ ಡಿಸಿಎಂ ಬ್ಯಾಟಿಂಗ್ !

Related Video