Sachin Sanghe: ಪೆನ್ಸಿಲ್ ತುದಿಯಲ್ಲೂ ರಾಮನನ್ನು ಅರಳಿಸಿರುವ ಕಲಾವಿದ: ಗಣ್ಯರಿಗೆ ಕರ್ನಾಟಕದಿಂದ ಉಡುಗೊರೆ !
ಅರುಣ್ ಯೋಗಿರಾಜ್ ರೀತಿಯಲ್ಲೇ ತನ್ನ ಕಲ್ಪನೆಯ ಬಾಲರಾಮನನ್ನು ಸಚಿನ್ ಸಂಘೆ ಚಾಕ್ ಪೀಸ್‌ನಲ್ಲಿ ಸೃಷ್ಟಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಕರ್ನಾಟಕದಿಂದ(Karnataka) ಉಡುಗೊರೆ ತಲುಪುತ್ತಿದೆ. ಖ್ಯಾತ ಚಾಕೃತಿ ಕಲಾವಿದ ಸಚಿನ್ ಸಂಘೆ(Sachin Sanghe) ಕೈಯಲ್ಲರಳಿದ ರಾಮಲಲ್ಲಾ ಮೂರ್ತಿಗಳು. ಕೇವಲ ಮುಕ್ಕಾಲು ಇಂಚು ದೊಡ್ಡದಾಗಿರುವ ಮೂರ್ತಿಗಳು. ಇಂದು ಆರು ಮೂರ್ತಿಗಳನ್ನು ಅಯೋಧ್ಯೆಗೆ ಸಚಿನ್ ಕಳುಹಿಸಲಿದ್ದಾರೆ. ಅರುಣ್ ಯೋಗಿರಾಜ್ ರೀತಿಯಲ್ಲೇ ತನ್ನ ಕಲ್ಪನೆಯ ಬಾಲರಾಮನನ್ನು ಸಚಿನ್ ಸಂಘೆ ಸೃಷ್ಟಿಸಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿಗೂ ಯೋಗಾಸನದ ವಿವಿಧ ಭಂಗಿಗಳನ್ನು ಚಾಕ್ ಪೀಸ್‌ನಲ್ಲಿ(Chalk Pieces) ಬಿಡಿಸಿ ಗಿಫ್ಟ್ ಮಾಡಿದ್ದ ಸಚಿನ್. ಪೆನ್ಸಿಲ್ ತುದಿಯಲ್ಲೂ ರಾಮನನ್ನು(Balarama) ಅರಳಿಸಿರುವ ಕಲಾವಿದ ಸಚಿನ್ ಸಂಘೆ. ಸಚಿನ್ ಪ್ರತಿಭೆಯನ್ನು ಗುರುತಿಸಿ ಕಲಾಕೃತಿ ಕಳುಹಿಸುವಂತೆ ತಿಳಿಸಿರುವ ಟ್ರಸ್ಟ್. ಈಗಾಗಲೇ ಹಲವು ಗಣ್ಯರ ಕಲಾಕೃತಿಯನ್ನು ಚಾಕ್ ಪೀಸ್‌ನಲ್ಲಿ ಸಚಿನ್ ಸಂಘೆ ಬಿಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: Fraud in Name of Ayodhya: ಅಯೋಧ್ಯೆ ರಾಮನ ಹೆಸರಲ್ಲಿ ವಂಚಕರ ಜಾಲ ಆ್ಯಕ್ಟೀವ್: ಈ ಫ್ರಾಡ್‌ಗಳಿಂದ ದೂರವಿರೋದು ಹೇಗೆ ?