Fraud in Name of Ayodhya: ಅಯೋಧ್ಯೆ ರಾಮನ ಹೆಸರಲ್ಲಿ ವಂಚಕರ ಜಾಲ ಆ್ಯಕ್ಟೀವ್: ಈ ಫ್ರಾಡ್‌ಗಳಿಂದ ದೂರವಿರೋದು ಹೇಗೆ ?

ಅಯೋಧ್ಯೆ ವಿಚಾರ ಸದ್ಯ ಟ್ರೆಂಡ್ ಇರೋದ್ರಿಂದ ಇದೇ ವಿಚಾರದಲ್ಲಿ ಮೋಸ ಮಾಡೋಕೆ ಟ್ರೈ ಮಾಡ್ತಿದಾರೆ ಎಂದು ಕಾರ್ತಿಕ್ ರಾವ್ ಬಪ್ಪನಾಡು ಹೇಳುತ್ತಾರೆ.

First Published Jan 21, 2024, 4:37 PM IST | Last Updated Jan 21, 2024, 4:37 PM IST

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ (Shri Ramalalla) ವಿಗ್ರಹ ಪ್ರಾಣಪ್ರತಿಷ್ಠಾಪನೆ ಬೆನ್ನಲ್ಲೇ ಸೈಬರ್ ವಂಚಕರ (Cyber Fraud) ಜಾಲ ಆ್ಯಕ್ಟೀವ್ ಆಗಿದೆ. ರಾಮನಂಬಿಕೆಯನ್ನು ಬಳಸಿಕೊಂಡು ಸೈಬರ್ ವಂಚನೆಗೆ ವಂಚಕರು ಮುಂದಾಗುತ್ತಿದ್ದಾರೆ. ಸೈಬರ್ ಫ್ರಾಡ್‌ಗಳಿಂದ ಹೇಗೆ ಎಚ್ಚರವಿರಬೇಕು ಎಂಬ ಬಗ್ಗೆ ಸೈಸೆಕ್ ಸೈಬರ್ ಸೆಕ್ಯುರಿಟಿ ಕರ್ನಾಟಕ ಸೆಂಟರ್ ಹೆಡ್ ಕಾರ್ತಿಕ್ ರಾವ್ ಬಪ್ಪನಾಡು ಮಾಹಿತಿ ನೀಡಿದ್ದಾರೆ. ಅಯೋಧ್ಯೆ(Ayodhya) ವಿಚಾರ ಸದ್ಯ ಟ್ರೆಂಡ್ ಇರೋದ್ರಿಂದ ಇದೇ ವಿಚಾರದಲ್ಲಿ ಮೋಸ ಮಾಡೋಕೆ ಟ್ರೈ ಮಾಡ್ತಿದಾರೆ. ಅಯೋಧ್ಯೆ ಒಂದು ಒಳ್ಳೆ ಕಾರಣವಾಗಿ ಸಿಕ್ಕಿದೆ. ಯಾರನ್ನೂ ಸುಲಭವಾಗಿ ನಂಬಲು ಹೋಗದಿರಿ. ನಂಬಿಕೆ ಬರದೇ ಇದ್ರೆ ಅಂತವರ ಜೊತೆ ಇಂಟರ್ಯಾಕ್ಟ್ ಮಾಡದಿರಿ. ಇಂತಹ ಜಾಲಕ್ಕೆ ಬಿದ್ದರೆ ಕೂಡಲೇ ನ್ಯಾಷನಲ್ ಸೈಬರ್ ಕ್ರೈಮ್ ಹೆಲ್ಪ್ ಲೈನ್ 1930ಗೆ ಕಾಲ್ ಮಾಡಿ, ದೂರು ದಾಖಲು ಮಾಡುವಂತೆ ಕಾರ್ತಿಕ್ ರಾವ್ ಬಪ್ಪನಾಡು ಸೂಚಿಸಿದ್ದಾರೆ. ಇದರಿಂದ ನೀವು ಕಳುಹಿಸಿದ ಅಕೌಂಟ್ ಬ್ಲಾಕ್ ಆಗಿ ನಿಮ್ಮ ಹಣ ಹಿಂದೆ ಬರೋ ಸಾಧ್ಯತೆ ಇದೆ. ವಾಟ್ಸಾಪ್ ಮೆಸೇಜ್ ಬಂದ್ರೆ ಸುಲಭವಾಗಿ ನಂಬಬೇಡಿ.

ಇದನ್ನೂ ವೀಕ್ಷಿಸಿ: Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

Video Top Stories