ಬೆಳಗಾವಿ, ಕಾರವಾರ ನಮ್ದು ಎಂದು 'ಮಹಾ' ಡಿಸಿಎಂ ಹೇಳಲು ಬಿಎಸ್‌ವೈ ನೇರ ಕಾರಣ: ಸಾರಾ ಗೋವಿಂದು

ಬೆಳಗಾವಿ, ಕಾರವಾರ ನಮ್ದು ಎಂದು ಹೇಳಿಕೆ ಕೊಟ್ಟು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಕನ್ನಡಿಗರನ್ನು ಕೆರಳಿಸಿದ್ದಾರೆ. 

First Published Nov 18, 2020, 11:19 AM IST | Last Updated Nov 18, 2020, 11:19 AM IST

ಬೆಂಗಳೂರು (ನ. 18): ಬೆಳಗಾವಿ, ಕಾರವಾರ ನಮ್ದು ಎಂದು ಹೇಳಿಕೆ ಕೊಟ್ಟು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಕನ್ನಡಿಗರನ್ನು ಕೆರಳಿಸಿದ್ದಾರೆ. 

ಇಂದು ಬಿಎಸ್‌ವೈ ಸಂಪುಟದ ಕೆಲ ಸಚಿವರಿಗೆ ಕೊನೆಯ ಕ್ಯಾಬಿನೆಟ್ ಸಭೆ?

ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸಿ, ಸಾರಾ ಗೋವಿಂದು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಇದಕ್ಕೆ ನಾವ್ಯಾಕೆ ಉತ್ತರ ಕೊಡಬೇಕು? ಮುಖ್ಯಮಮತ್ರಿಗಳು ಮರಾಠಾ ನಿಗಮ ಮಾಡಿದ್ದಾರಲ್ಲ, ಅವರೇ ಉತ್ತರ ಕೊಡಲಿ. ಅವರೇ ಇದಕ್ಕೆ ನೇರವಾಗಿ ಹೊಣೆಯಾಗುತ್ತಾರೆ. ಕರ್ನಾಟಕದಲ್ಲಿರುವವರಿಗೆ ಯಾರಿಗೆ ನಿಗಮ ಮಾಡಿದರೂ ವಿರೋಧ ಇಲ್ಲ. ಆದರೆ ಮರಾಠಿಗರಿಗೆ ನಿಗಮ ಮಾಡಿ ಮೈಮೇಲೆ ಎಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಸರ್ಕಾರ, ಮುಖ್ಯಮಂತ್ರಿಗಳು ಹೊಣೆಯಾಗುತ್ತಾರೆ. ಅವರೇ ಉತ್ತರಿಸಬೇಕು' ಎಂದು ಹೇಳಿದ್ದಾರೆ. 

Video Top Stories