
ಜನವರಿ 8ಕ್ಕೆ ಕಾದಿದೆಯಾ Toxic Movie ಸೂಪರ್ ಸರ್ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
ಹೊಸ ವರ್ಷ ಆರಂಭ ಆಗಿದೆ. ಕಣ್ ಬಿಟ್ಟು ಕಣ್ಣು ಮುಚ್ಚೋದ್ರೊಳಗೆ ದಿನಗಳು ಉರುಳುತ್ತೆ. ಈ ವರ್ಷ ಬಣ್ಣದ ಜಗತ್ತಲ್ಲಿ ಏನೆಲ್ಲಾ ನಡೆಯುತ್ತೆ ಅಂತ ಒಮ್ಮೆ ನೋಡಿದ್ರೆ ಕಣ್ಣಿಗೆ ಬೀಳೋದೇ ರಾಕಿಂಗ್ ಸ್ಟಾರ್ ಯಶ್. ಅದಕ್ಕೆ ಕಾರಣ ರಾಕಿಯ ಟಾಕ್ಸಿಕ್..
ನ್ಯೂ ಇಯರ್ ಸೆಲೆಬ್ರೇಷನ್ನಲ್ಲಿರೋ ರಾಕಿಂಗ್ ಸ್ಟಾರ್ ಹಳೇ ವರ್ಷದಿಂದ ಟಾಕ್ಸಿಕ್ನ ಒಂದೊಂದೇ ಸರ್ಪ್ರೈಸ್ಗಳನ್ನ ಕೊಡುತ್ತಿದ್ದಾರೆ. ಹಾಹಾದ್ರೆ ಮುಂದೇನು ನೋಡೋಣ ಬನ್ನಿ.. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನಿಂದ ತುಂಬಾ ಮುಂದೆ ಬಂದಿದ್ದಾರೆ. ಈಗ ಯಶ್ ಚಿತ್ತ ಏನಿದ್ರು ಟಾಕ್ಸಿಕ್ನತ್ತ. ಅದಕ್ಕಾಗೆ ಹಗಲು ರಾತ್ರಿ ಎರಡುವರೆ ವರ್ಷ ಶ್ರಮಿಸಿರೋ ಯಶ್ ಆ ಫಲವನ್ನ ಅನುಭವಿಸೋಕೆ ದಿನ ಎಣಿಸುತ್ತಿದ್ದಾರೆ. ಆ ದಿನ ಮಾರ್ಚ್ 19 ಅನ್ನೋದು ಅಷ್ಟೇ ಸತ್ಯ. ಅದಕ್ಕಾಗಿ ಪೂರ್ವ ತಯಾರಿಯಲ್ಲಿರೋ ಯಶ್ ಕಳೆದ ಡಿಸೆಂಬರ್ನಿಂದಲೇ ಒಂದೊಂದೇ ಸರ್ಪ್ರೈಸ್ಗಳನ್ನ ಕೊಡುತ್ತಾ ಬಂದಿದ್ದಾರೆ. ಈಗ ಮುಂದೇನು ಅಂದ್ರೆ ಅದು ಯಶ್ ಬರ್ತ್ಡೇ..