
ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
ರಾಕಿಂಗ್ ಸ್ಟಾರ್ ಯಶ್ ದೊಡ್ಡ ಕೋಟೆ ಕಟ್ಟಿಕೊಂಡಿದ್ದಾರೆ. ರಾಕಿಯ ಎಂಪೆರರ್ ಒಳಗೆ ಯಾವ ಸೂಪರ್ ಸ್ಟಾರ್ಗಳು ಹೋದ್ರು ಮಣ್ಣು ಮುಕ್ಕಿ ಹೊರ ಬರೋದಂತು ಗ್ಯಾರಂಟಿ. ಆದ್ರೆ ಇದೇ ಯಶ್ ಅವರಿಗೆ ಈಗ ಎರಡು ದೊಡ್ಡ ತಲೆ ಬೇನೆ ಶುರುವಾಗಿದೆ.
ಒಂದ್ ಕಡೆ ಅಮ್ಮನ ರಾಂಗ್ ನಿರ್ಧಾರಗಳಾದ್ರೆ, ಮತ್ತೊಂದ್ ಕಡೆ ಸಿನಿ ಮಾರ್ಕೆಟ್ನಲ್ಲಿ ರಣ್ವೀರ್ ಸಿಂಗ್ ಬೆಜಾನ್ ಕೂಳೆ ಕೊಡುತ್ತಿದ್ದಾರೆ. ಹಾಗಾದ್ರೆ ಏನಿದು ರಾಕಿಯ ರಣ ಕಂಟಕ ನೋಡೋಣ ಬನ್ನಿ...ಸ್ಯಾಂಡಲ್ವುಡ್ ರಾಮಾಚಾರಿ ಯಶ್ ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ ಸ್ಟಾರ್.. ನಮ್ಮ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತೇ ತಿರುಗಿ ನೋಡೋ ಹಾಗೆ ಮಾಡುತ್ತೇನೆ ಎಂದಿದ್ದ ಯಶ್ ಕೆಜಿಎಫ್ನಿಂದ ಅದನ್ನ ಸಾಧಿಸಿದ್ದೂ ಆಗಿದೆ. ಮುಂದೆ ಅದನ್ನ ಕಾಪಾಡೋಕೆ ದೊಡ್ಡ ಕೋಟೆ ಕಟ್ಟಿದ್ದಾರೆ. ಆದ್ರೆ ಮಗ ಕಟ್ಟಿದ ಕೋಟೆಗೆ ಬೀಗ ಹಾಕೋ ಕೆಲಸ ಅಮ್ಮನಿಂದ ಆಗುತ್ತಿದೆಯಾ..? ಹೀಗೆನ್ನುತ್ತಿದೆ ಸೋಷಿಯಲ್ ಮೀಡಿಯಾ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ