
ಈಗ ಮತ್ತೊಂದು ಸರ್ಪ್ರೈಸ್ ಕೊಟ್ಟ ಶಿವರಾಜ್‌ಕುಮಾರ್, ಉಪೇಂದ್ರ, ಅರ್ಜುನ್ ಜನ್ಯ 45 Movie!
ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ '45' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಹೊಸ ವರ್ಷದ ದಿನ ಪರಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಆದ್ರೆ '45' ಚಿತ್ರದಲ್ಲಿ ಯಾವುದೇ ಹಾಡು ಇರಲಿಲ್ಲ.
ಎರಡೂವರೆ ಗಂಟೆಗೆ ಚಿತ್ರದ ಕಾಲಾವಧಿಯನ್ನು ಇಳಿಸಲಾಗಿತ್ತು. ಆದ್ರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾ ಪ್ರಚಾರಕ್ಕಾಗಿಯೇ ಸ್ಪೆಷಲ್ ಸಾಂಗ್ ಶೂಟ್ ಮಾಡಿದ್ದರು. 'ಆಫ್ರೋ ಟಪಾಂಗ್' ಅನ್ನ ಸಿನಿಮಾದಲ್ಲಿ ಅಳವಡಿಸಲಾಗಿದೆ. ಈ ಹಾಡಿನಲ್ಲಿ ಶಿವಣ್ಣ, ಉಪ್ಪಿ ಹಾಗೂ ರಾಜ್ ಡ್ಯಾನ್ಸ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಈಗ ಸಿನಿಮಾದಲ್ಲೂ ಸೇರಿಸಿ ಬೆಳ್ಳಿತೆರೆ ಮೇಲೆ ತರಲಾಗ್ತಿದೆ.