BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?

ಬಿಗ್ ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತ ತಲುಪಿದ್ದು, ಕೊನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಧನುಷ್ ನಿಯಮ ಮುರಿದು ಗೆದ್ದಿದ್ದಾರೆ. ಈ ನಡುವೆ, ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿರುವ ಗಿಲ್ಲಿ ಮತ್ತು ಅಶ್ವಿನಿ ನಡುವಿನ ಜಗಳ ಮತ್ತೊಮ್ಮೆ ತಾರಕಕ್ಕೇರಿದೆ. ಇದು ವಿನ್ನರ್ ಯಾರು ಎಂಬ ಕುತೂಹಲವನ್ನು ಹೆಚ್ಚಿಸಿದೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಈ ಸೀಸನ್​ನ ಕೊನೆ ಕ್ಯಾಪ್ಟನ್ ಆಗಲಿಕ್ಕೆ ದೊಡ್ಡ ಜಟಾಪಟಿ ನಡೆದಿದೆ. ಅಷ್ಟೇ ಅಲ್ಲ ಕ್ಯಾಪ್ಟನ್ಸಿ ಟಾಸ್ಕ್ ಹೊರತಾಗಿ ಗೆಲ್ಲೋ ರೇಸ್​ನಲ್ಲಿ ಟಾಪ್ ನಲ್ಲಿರೋ ಗಿಲ್ಲಿ ಮತ್ತು ಅಶ್ವಿನಿ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ. ಕಳೆದ ವಾರದ ಕ್ಯಾಪ್ಟನ್ ಮತ್ತು ಧನುಷ್ ನಡುವೆ ದೊಡ್ಡ ಹಣಾಹಣಿ ನಡೆದಿದೆ. ಅಂತಿಮವಾಗಿ ಧನುಷ್ ಟಾಸ್ಕ್​ನಲ್ಲಿ ಗೆದ್ದಿದ್ದಾರೆ.ಇನ್ನೂ ಧನುಷ್ ಮತ್ತು ಅಶ್ವಿನಿ ನಡುವೆ ಅಂತಿಮ ಹಂತದ ಹಣಾಹಣಿ ನಡೆದಿದ್ದು ಅದ್ರಲ್ಲೂ ಧ್ರನುಷ್ ಗೆದ್ದಿದ್ದಾರೆ. ಆದ್ರೆ ಆಡುವ ವೇಗದಲ್ಲಿ ನಿಯಮವೊಂದನ್ನ ಮುರಿದಿದ್ದು, ಧನುಷ್ ಮೋಸದಿಂದ ಕ್ಯಾಪ್ಟನ್ ಆದಂತೆ ಆಗಿದೆ.

ಈ ವಾರ ಮತ್ತೆ ಗಿಲ್ಲಿ ಮತ್ತು ಅಶ್ವಿನಿ ನಡುವೆ ಮಾತಿನ ಸಮರ ನಡೆದಿದೆ. ಇಬ್ಬರೂ ಅಂತಿಮ ಹಣಾಹಣಿ ಅನ್ನುವಂತೆ ಕಿರುಚಾಡಿ ಅರಚಾಡಿ ಕಿತ್ತಾಡಿಕೊಂಡಿದ್ದಾರೆ. ಅಸಲಿಗೆ ಈ ಸೀಸನ್ ಆರಂಭದಿಂದಲೂ ಬಿಗ್ ಬಾಸ್​​ನಲ್ಲಿ ಹೆಚ್ಚು ಸುದ್ದಿ-ಸದ್ದು ಮಾಡಿದ್ದೇ ಗಿಲ್ಲಿ Vs ಅಶ್ವಿನಿ ವಾರ್. ವಾರ ವಾರವೂ ಇವರ ಕಿತ್ತಾಟದ ಚರ್ಚೆ ಮಾಡೋದೇ ಕಿಚ್ಚನ ಪಾಲಿಗೆ ಬಿಗ್ ಟಾಸ್ಕ್ ಆಗಿತ್ತು.ಹೇಗೆ ನೋಡಿದ್ರೂ ಈ ಸೀಸನ್​ನಲ್ಲಿ ಟಾಪ್ 1 & 2 ನಲ್ಲಿ ಅಶ್ವಿನಿ ಮತ್ತು ಗಿಲ್ಲಿ ಇದ್ದಾರೆ. ಅಂತಿಮವಾಗಿ ಯಾರು ತಮ್ಮತನ ಪ್ರೂವ್ ಮಾಡ್ತಾರೋ ಅವರು ಗೆದ್ದು ಬೀಗ್ತಾರೆ ಸೋ, ಕೊನೆ ವಾರವೂ ಇಬ್ಬರ ನಡುವೆ ಅಸ್ಥಿತ್ವದ ಕದನ ನಡೆದಿದೆ.ಒಟ್ಟಾರೆ ಬಿಗ್ ಬಾಸ್ ಅಂತಿಮ ಹಂತಕ್ಕೆ ಬಂದಿದೆ. ಕೊನೆ ವಾರ.. ಕೊನೆ ವಾರ್.. ಯಾರಾಗ್ತಾರೆ ವಿನ್ನರ್ ಅನ್ನೋ ಕುತೂಹಲ ಹೆಚ್ಚಾಗಿದೆ.

Related Video