ಕೊಲೆ ಉದ್ದೇಶಕ್ಕಾಗಿ ದರ್ಶನ್ ಕಿಡ್ನಾಪ್ ಮಾಡಿಸಿದ್ದ ನಟ ದರ್ಶನ್, ಚಾರ್ಜ್‌ಶೀಟ್‌ನಲ್ಲಿ ಬಹಿರಂಗ!

ರೇಣುಕಾಸ್ವಾಮಿ ಟ್ರಾಪ್ ಮಾಡಲು ಚಾಟಿಂಗ್ ಮಾಡಿದ್ದ ಪವಿತ್ರಾ ಗೌಡ, 3991 ಪುಟಗಳ ಚಾರ್ಜ್ ಶೀಟ್‌ನಲ್ಲಿದೆ ಕಂಡು ಕೇಳರಿಯದೆ ಕ್ರೌರ್ಯ, ಅಶ್ಲೀಲ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಕೊಲೆ ಉದ್ದೇಶದಿಂದಲೇ ಕಿಡ್ನಾಪ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್  ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ ಹಿಂದಿನ ಉದ್ದೇಶ ಹಲ್ಲೆ ಮಾತ್ರ ಆಗಿರಲಿಲ್ಲ. ಕೊಲೆ ಮಾಡುವ ಉದ್ದೇಶದಿಂದಲೇ ಈ ಕಿಡ್ನಾಪ್ ಮಾಡಲಾಗಿತ್ತು. ಇದಕ್ಕೆ ದರ್ಶನ್ ಸೂಚನೆ ನೀಡಿದ್ದ. ಇದು ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಇಂಚಿಂಚು ಮಾಹಿತಿ ಉಲ್ಲೇಖಿಸಲಾಗಿದೆ. ಇತ್ತ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ಗೆ ತಿರುಗೇಟು ನೀಡಲು ಪವಿತ್ರಾ ಚಾಟಿಂಗ್ ಆರಂಭಿಸಿದ್ದಳು. ಚಾಟಿಂಗ್ ಮೂಲಕ ರೇಣುಕಾಸ್ವಾಮಿ ನಂಬರ್ ಪಡೆದ ಪವಿತ್ರಾ ಗೌಡ, ಅದನ್ನು ದರ್ಶನ್ ಆಪ್ತರಿಗೆ ಕಳುಹಿಸಿದ್ದಾಳೆ. ಬಳಿಕ ಘನಘೋರ ದುರಂತವೇ ನಡೆದು ಹೋಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video