Asianet Suvarna News Asianet Suvarna News

News Hour: ಗ್ಯಾರಂಟಿ ಜಾರಿಯಿಂದಾಗಿ ಖಾಲಿಯಾಯ್ತಾ ಸರ್ಕಾರದ ಖಜಾನೆ?


ಗ್ಯಾರಂಟಿ ಜಾರಿಯಿಂದಾಗಿ ಸರ್ಕಾರದ ಖಜಾನೆ ಖಾಲಿಯಾಯ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಸಾರಿಗೆ ನೌಕರರಿಗೆ ಅರ್ಧ ಸಂಬಳ, ಪೊಲೀಸರಿಗೆ ಸ್ಯಾಲರಿ ಲೇಟ್‌ ಆಗಿದೆ. ಈ ನಡುವೆ ಇದನ್ನೇ ಇರಿಸಿಕೊಂಡು ಮೋದಿ ಮಾತು ನಿಜವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಬೆಂಗಳೂರು (ಆ.3): ರಾಜ್ಯ ಸರ್ಕಾರಕ್ಕೆ ಅನುದಾನದ ಕೊರೆತೆ ಎದುರಾಗಿದೆಯೇ ಎನ್ಜುವ ಅನುಮಾನ ಕಾಡಿದೆ. ಗ್ಯಾರಂಟಿ ಜಾರಿಯಿಂದಾಗಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವ ಸೂಚನೆ ಸಿಕ್ಕಿದೆ. ಯಾದಗಿರಿ ಪೋಲಿಸರಿಗೆ ಜುಲೈ ತಿಂಗಳ ಸಂಬಳ ವಿಳಂಬವಾಗಿದೆ. ಸಂಬಳ ವಿಳಂಬದ ಬಗ್ಗೆ ಪೊಲೀಸರಿಗೆ ಎಸ್‌ಪಿ ಮಾಹಿತಿ ನೀಡಿದ್ದಾರೆ.

‘ಜುಲೈ ತಿಂಗಳ ಸಂಬಳ ನಿಗದಿತ ಸಮಯದಲ್ಲಿ ಸಿಗಲ್ಲ. ಅನುದಾನ ಕೊರತೆ ಕಾರಣ ಎಂದು ಎಸ್‌ಪಿ ವೇದಮೂರ್ತಿ ಹೇಳಿದ್ದಾರೆ. ಎಸ್ಪಿ ಪತ್ರದ ಬೆನ್ನಲ್ಲೇ ಸರ್ಕಾರದ ಮೇಲೆ ಬಸವನಗೌಡ ಪಾಟೀಲ್‌ ಯತ್ನಾಳ್‌ ಮುಗಿಬಿದ್ದಿದ್ದಾರೆ. ಗ್ಯಾರಂಟಿಯಿಂದಾಗಿ ಆರ್ಥಿಕ ಸಂಕಷ್ಟ ಎಂದು ವಾಗ್ದಾಳಿ ಮಾಡಿದ್ದಾರೆ.

ಸುಳ್ಳು ಜಾತಿ, ಶೈಕ್ಷಣಿಕ ಪ್ರಮಾಣಪತ್ರ ಆರೋಪ; ಪ್ರಿಯಾಂಕ್‌ ಖರ್ಗೆ ಆಯ್ಕೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ

ಬಿಜೆಪಿ ಟೀಕೆಯ ಬಳಿಕ, ತನ್ನ ಆದೇಶವನ್ನು ಯಾದಗಿರಿ ಎಸ್‌ಪಿ ಹಿಂಪಡೆದಿದ್ದಾರೆ.  HRMS ತಾಂತ್ರಿಕ ದೋಷದಿಂದಾಗಿ ವೇತನ ವಿಳಂಬಬವಾಗಿದೆ. ಅನುದಾನ ಕೊರತೆ ವಿಚಾರ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಬಿಜೆಪಿ ಆರೋಪವನ್ನೂ ಗೃಹ ಸಚಿವ ಪರಮೇಶ್ವರ್‌ ಅಲ್ಲಗಳೆದಿದ್ದಾರೆ. ಸಂಬಳ‌ ನಿಲ್ಲಿಸಿ ಗ್ಯಾರಂಟಿಗೆ ಹಣ ನೀಡಿಲ್ಲ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.