Sania Mirza: ಟೆನ್ನಿಸ್ ತಾರೆಯ ಬದುಕಿನಲ್ಲಿ ಆಗಿರೋದೇನು..? ಸಾನಿಯಾ ಮಿರ್ಜಾ ಜೀವನದ ರಹಸ್ಯವೇನು..?

ಪಾಕ್ ಕ್ರಿಕೆಟಿಗನ ಮೂರನೇ ಇನ್ನಿಂಗ್ಸ್..!
ಇಬ್ಬರ ನಡುವೆ ಹುಳಿ ಹಿಂಡಿದ್ಯಾರು..?
ಫಿಕ್ಸಿಂಗ್ ಆರೋಪದಲ್ಲಿ ಶೋಯೆಬ್..!

Share this Video
  • FB
  • Linkdin
  • Whatsapp

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಕಳೆದ ಒಂದು ವಾರದಿಂದ ಭಾರಿ ಸುದ್ದಿಯಲ್ಲಿದ್ದಾರೆ. ಪಾಕ್ ಮಾಜಿ ಕ್ರಿಕೆಟರ್ ಶೋಯೇಬ್ ಮಲ್ಲಿಕ್(Shoaib Malik) ಜೊತೆಗಿನ ಮದುವೆಯ ಸಂಬಂಧವನ್ನ ಕಡಿದುಕೊಂಡ ಬೆನ್ನಲ್ಲೇ ಹೊಸ ಪೋಟೋವನ್ನ(Photo) ಅಪ್ಲೋಡ್ ಮಾಡಿ ಹೊಸ ಸೂಚನೆ ನೀಡಿದ್ದಾರೆ. ಸಾನಿಯಾ ಮಿರ್ಜಾ..ಭಾರತದ ಖ್ಯಾತ ಟೆನ್ನಿಸ್(Tennis) ತಾರೆ. ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್, ಸಾನಿಯಾ ಮಿರ್ಜಾ 2003 ರಿಂದ 2023 ರವರೆಗಿನ ತನ್ನ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಭಾರತೀಯ ಟೆನಿಸ್ ಕ್ಷೇತ್ರದಲ್ಲಿ ಹೊಸ ಶಿಖರವನ್ನ ಏರಿದವರು. 43 ಡಬ್ಲ್ಯುಟಿಎ ಡಬಲ್ಸ್ ಪ್ರಶಸ್ತಿಗಳು ಮತ್ತು ಸಿಂಗಲ್ಸ್ ಪ್ರಶಸ್ತಿಯನ್ನು ತನ್ನ ಹೆಸರಿಗೆ ಹೊಂದಿದ್ದು, ರಿಯೊ 2016 ರ ಒಲಿಂಪಿಕ್ಸ್ ಸೆಮಿ-ಫೈನಲಿಸ್ಟ್ ಭಾರತದ ಸಾರ್ವಕಾಲಿಕ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ. ಸಾನಿಯಾ ಮಿರ್ಜಾ ಒಬ್ಬ ಟೆನ್ನಿಸ್ ತಾರೆ ಅನ್ನೋದು ಗೊತ್ತಿಲ್ದೇ ಇರೋರು ಅವರನ್ನ ನೋಡಿದ್ರೆ ಸಿನಿಮಾ ತಾರೆಯೋ ಅಥವಾ ರೂಪದರ್ಶಿಯೋ ಅಂದ್ಕೊಳ್ಳೋದ್ರಲ್ಲಿ ಅನುಮಾನವಿಲ್ಲ. ಅವರ ಅಂದವೇ ಹಾಗಿದೆ. ನೋಡಿದ್ರೆ ನೋಡುತ್ತಲೇ ಇರೋ ಥರ ಆಕರ್ಷಕ ಮುಖ. ಮುತ್ತು ಉದುರುವುದೇನೋ ಅಂತೆನಿಸೋ ಮೋಹಕ ನಗು. ಮಗ ಹುಟ್ಟಿದ ಬಳಿಕ ಸಾನಿಯಾ ಹಾಗೂ ಶೋಯೆಬ್‌ ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಅವರ ಡಿವೋರ್ಸ್‌ ಬಗ್ಗೆ ದಿನಕ್ಕೊಂದು ವರದಿಗಳು ಬರುತ್ತಿದ್ದವು. ಡಿವೋರ್ಸ್‌ ಸುದ್ದಿ ಬರುವ ಮುನ್ನವೇ ಶೋಯೆಬ್‌ ಮಲೀಕ್‌ ಮತ್ತೊಂದು ವಿವಾಹವಾಗಿರುವ ಸುದ್ದಿ ಹೊರಬಿದ್ದಿದೆ.

ಇದನ್ನೂ ವೀಕ್ಷಿಸಿ:  ಇತಿಹಾಸಕಾರರಾಗಿ ರಾಮಮಂದಿರವನ್ನ ಹೇಗೆ ನೋಡ್ತಿರಿ..? ಮಸೀದಿ ಕೆಳಗೆ ಮಂದಿರವಿತ್ತು? ಅದು ಯಾವುದು ?

Related Video