ಇತಿಹಾಸಕಾರರಾಗಿ ರಾಮಮಂದಿರವನ್ನ ಹೇಗೆ ನೋಡ್ತಿರಿ..? ಮಸೀದಿ ಕೆಳಗೆ ಮಂದಿರವಿತ್ತು? ಅದು ಯಾವುದು ?

ಇತಿಹಾಸದಲ್ಲಿ ಏನೇನೋ ನಡೆದು ಹೋಗಿದೆ. ಅದನ್ನು ಸರಿ ಮಾಡಲು ಹೋದ್ರೆ ಸಮಾಜದ ಸ್ವಾಸ್ಥ್ಯಯ ಹಾಳಾಗುತ್ತಾ ? ಹೀಗೆ ಹಲವಾರು ವಿಷಯಗಳ ಬಗ್ಗೆ ಇತಿಹಾಸಕಾರ ವಿಕ್ರಂ ಸಂಪತ್‌ ಏನ್‌ ಹೇಳ್ತಾರೆ ಕೇಳಿ..

First Published Jan 28, 2024, 6:59 PM IST | Last Updated Jan 28, 2024, 7:00 PM IST

ಪ್ರತಿಯೊಬ್ಬ ಇತಿಹಾಸಕಾರ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಂಡು ವರದಿ ನೀಡುವುದು ಉತ್ತಮ. ರಾಮ ಒಂದು ರಾಷ್ಟ್ರ ಪುರುಷ. ಅವರು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಇವತ್ತಿನ ಯಾವುದೇ ಕಮ್ಯೂನಿಟಿಗಳು ಆ ಕಾಲದ ಹೀರೋಗಳನ್ನು ಹೊಗಳುವುದು ಸರಿಯಲ್ಲ. ರಾಮನನ್ನು ಕೆಲವರು ದೇವರಾಗಿ ಪೂಜಿಸಿದ್ರೆ, ಕೆಲವರು ಅವರ ತತ್ವಗಳನ್ನು ಮಾತ್ರ ಪಾಲಿಸುತ್ತಾರೆ. ನಮ್ಮ ಇತಿಹಾಸವನ್ನು ಹೇಳಬೇಕಾದ ರೀತಿಯಲ್ಲಿ ಹೇಳಲಿಲ್ಲ. ಇತಿಹಾಸ ಯಾವಾಗಲೂ ಯಾರು ಆಡಳಿತ ಮಾಡುತ್ತಾರೋ, ಅವರ ಕೈಯಲ್ಲಿ ಇರುತ್ತದೆ. ಇತಿಹಾಸದ ಸತ್ಯವನ್ನು ಹೇಳಲು ನಾವು ಹೆದರಬಾರದು ಎಂದು ಇತಿಹಾಸಕಾರ ವಿಕ್ರಂ ಸಂಪತ್‌ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  ಹಿಂದೂ ರಾಷ್ಟ್ರ ಮಾಡೋದು ಅಂದ್ರೆ ಏನು ? ಅಯೋಧ್ಯೆಯಲ್ಲಿ ದಲಿತರಿಗೆ ಪೂಜೆ ಸಲ್ಲಿಸೋಕೆ ಅವಕಾಶ ಇದೆಯಾ?