ಮತ್ತೆ ಬಣ್ಣ ಹಚ್ಚಲು ಬಂದ ಝಮೀರ್ ಪುತ್ರ..! ಝೈದ್ ಖಾನ್ ಎರಡನೇ ಸಿನಿಮಾ ಅನೌನ್ಸ್..!

ವಸತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ 2022ರಲ್ಲಿ 'ಬನಾರಸ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ರು. ಈಗ ಝೈದ್ ಖಾನ್ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
 

Share this Video
  • FB
  • Linkdin
  • Whatsapp

ಇತ್ತೀಚೆಗಷ್ಟೆ ಉಪಾಧ್ಯಕ್ಷ ಸಿನಿಮಾ(Upadhyaksha Movie) ತೆರೆ ಕಂಡಿತ್ತು. ಕಾಮಿಡಿ ಸ್ಟಾರ್ ಚಿಕ್ಕಣ್ಣ ಉಪಾಧ್ಯಕ್ಷನಾಗಿ ಪ್ರೇಕ್ಷಕರಿಗೆ ಒಂದಿಷ್ಟು ಕಾಮಿಡಿ ಕಿಕ್ ಕೊಟ್ಟಿದ್ರು. ಚಿಕ್ಕಣ್ಣನಿಗೆ ಉಪಾಧ್ಯಕ್ಷ ಪಟ್ಟ ಕಟ್ಟಿದ್ದು ನಿರ್ದೇಶಕ ಅನಿಲ್ ಕುಮಾರ್(Director Anil Kumar). ಈಗ ಇದೇ 'ಉಪಾಧ್ಯಕ್ಷ' ಡೈರೆಕ್ಟರ್ ಜೊತೆ ಝೈದ್ ಖಾನ್‌(Zaid Khan) ಎರಡನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ.'ಬನಾರಸ್' ಸಿನಿಮಾ(Banaras Movie) ನಂತರ ನಟ ಝೈದ್ ಖಾನ್ ಕೇಳಿದ್ದು ಹತ್ತಾರು ಕತೆಗಳನ್ನ. ಆದ್ರೆ ಝೈದ್ ಖಾನ್‌ಗೆ ಆ ಸ್ಟೋರಿಗಳು ಇಷ್ಟ ಆಗಿರಲಿಲ್ಲ. ಅದ್ರೆ ಅನಿಲ್ ಕುಮಾರ್ ಹೇಳಿದ ಕಥೆಗೆ ಝೈದ್ ಖಾನ್‌ ಲಾಕ್ ಆಗಿದ್ದಾರೆ. ಈ ಸಿನಿಮಾ ಕ್ಲಾಸ್ ಮತ್ತು ಮಾಸ್ ಎರಡೂ ಆಡಿಯೆನ್ಸ್‌ಗೆ ಇಷ್ಟವಾಗುತ್ತಂತೆ. ಈ ಸಿನಿಮಾವನ್ನ ಬಿಗ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿದೆ. ಸಧ್ಯದಲ್ಲೇ ಸಿನಿಮಾ ಮಹೂರ್ಥ ಕೂಡ ಆಗಲಿದೆ. 

ಇದನ್ನೂ ವೀಕ್ಷಿಸಿ: Kere bete movie: ಸಿನಿ ಅಭಿಮಾನಿಗಳ ಮನಸ್ಸು ಗೆದ್ದ ಕೆರೆ ಬೇಟೆ ಕಥೆ..! 3ನೇ ದಿನವೂ ಸಿನಿಮಾದಲ್ಲಿ ಮುಳುಗಿದ ಪ್ರೇಕ್ಷಕ..!

Related Video