Kere bete movie: ಸಿನಿ ಅಭಿಮಾನಿಗಳ ಮನಸ್ಸು ಗೆದ್ದ ಕೆರೆ ಬೇಟೆ ಕಥೆ..! 3ನೇ ದಿನವೂ ಸಿನಿಮಾದಲ್ಲಿ ಮುಳುಗಿದ ಪ್ರೇಕ್ಷಕ..!
ಈಗ ಸಿನಿಮಾ ಟ್ರೆಂಡ್ ಬದಲಾಗಿದೆ. ಹೀರೋಯಿಸಂ ಜತೆ ಅದ್ಧುತ ಸ್ಟೋರಿ ಇದ್ರೆ ಮಾತ್ರ ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತವೆ. ಕಲೆಕ್ಷನ್ ಕೂಡ ಮಾಡುತ್ವೆ. ಈಗ ಅದೇ ಹಾದಿಯಲ್ಲಿ ಅಪ್ಪ ಕನ್ನಡ ಸೊಗಡಿನ ಸಿನಿಮಾ ಇದೆ. ಆ ಸಿನಿಮಾವೇ ಕೆರೆಬೇಟೆ. ಮಲೆನಾಡಿನ ಸ್ಟೋರಿ ಬೇಸ್ಡ್ ಕೆರೆಬೇಟೆ ಸಿನಿಮಾ ಇದೇ ವಾರ ಬಿಡುಗಡೆ ಆಗಿತ್ತು. ಈಗ ಕೆರೆಬೇಟೆ ಬಗ್ಗೆ ಸಿನಿ ಅಭಿಮಾನಿ ಬಳಗದಲ್ಲಿ ಟಾಕ್ ಎದ್ದಿದೆ.
ಯಾವುದೇ ಸಿನಿಮಾ ಆಗ್ಲಿ ಆ ಸಿನಿಮಾ ರಿಲೀಸ್‌ಗೂ ಮೊದಲು ಬರೋ ಸ್ಯಾಂಪಲ್‌ಗಳು ಚಿತ್ರಮಂದಿರಕ್ಕೆ ಪ್ರೇಕ್ಷರನ್ನ ಸೆಳೆಯುವಲ್ಲಿ ಯಶಸ್ವಿ ಆಗಬೇಕು. ಈ ವಿಷಯದಲ್ಲಿ ಕೆರೆ ಬೇಟೆ ಸಿನಿಮಾ ಸಕ್ಸಸ್ ಆಗಿತ್ತು. ಕೆರೆ ಬೇಟೆಯ(Kere bete movie) ಟ್ರೈಲರ್ ಸಾಂಗ್ಸ್ ಟೀಸರ್‌ಗಳು ಈ ಸಿನಿಮಾ ವಿಶೇಷವಾಗಿದೆ ಅಂತ ಹೇಳಿದ್ವು. ಅದು ನಿಜ ಆಗಿದೆ. ಕೆರೆ ಬೇಟೆ ಫ್ರೆಶ್ ಕಂಟೆಂಟ್ ಸಿನಿಮಾ. ಈ ಹಿಂದೆ ಯಾವ್ ಸಿನಿಮಾದಲ್ಲೂ ನೋಡಿರದ ಕಥೆ ಕೆರೆ ಬೇಟೆಯಲ್ಲಿದೆ. ಹೀಗಾಗಿ ಕೆರೆ ಬೇಟೆ ಸಿನಿ ಅಭಿಮಾನಿಗಳ(Fans) ಮನಸ್ಸು ಗೆಲ್ಲುವಲ್ಲಿ ಸಕ್ಸಸ್ ಆಗಿದೆ. ಕೆರೆ ಬೇಟೆ ಮಲೆನಾಡ ಕಥೆಯ ಸಿನಿಮಾ. ಮಲೆನಾಡಿನ ಸೊಗಡು, ಹಸಿರಿನ ಸೊಬಗು, ಕೆರೆ ಬೇಟೆ ಅನ್ನೋ ಗ್ರಾಮೀಣ ಸಂಸ್ಕೃತಿ, ಅಂಟಿಂಗೆ ಪಿಂಟಿಂಗೆ ಆಚರಣೆ ಜೊತೆ ಕ್ರೌರ್ಯದ ಅಟ್ಟಹಾಸ, ಬಡಜೀವಗಳ ವೇದನೆ, ಜಾತಿ ವೈಷಮ್ಯದ ಜೊತೆ ಪ್ರೀತಿಯ ಘಮಲು ಇರೋ ಸಿನಿಮಾ ಇದು. ಕಾಂತಾರ ಸಿನಿಮಾದಲ್ಲಿ ಕೋಣಗಳ ಮೇಳದ ಜೊತೆ ದೈವಾರಾಧನೆಯನ್ನ ಹೇಗೆ ತೋರಿಸಿದ್ರೋ ಕೆರೆಬೇಟೆ ಸಿನಿಮಾದಲ್ಲಿ ಮಲೆನಾಡಿನಲ್ಲಿ ಇಂದಿಗೂ ಆಚರಣೆಯಲ್ಲಿರೋ ಗ್ರಾಮೀಣ ಕ್ರೀಡೆ ಕೆರೆಬೇಟೆಯನ್ನ ಮೂಲಕ ಈ ಸಿನಿಮಾ ತೆರೆದುಕೊಳ್ಳುತ್ತೆ. ಕನ್ನಡ ಸಿನಿ ಪ್ರೇಕ್ಷಕರಿಗೆ ಇದು ಫ್ರೆಶ್ ಕಂಟೆಂಟ್ ಸಿನಿಮಾ.
ಇದನ್ನೂ ವೀಕ್ಷಿಸಿ: ಮೊಬೈಲ್ ಶಾಪ್‌ನಲ್ಲಿ ಭಕ್ತಿಗೀತೆ ಹಾಕಿದ್ದೇ ತಪ್ಪಾ? ಮುಸ್ಲಿಂ ಯುವಕರಿಂದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ !