
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
ದಿ ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ ಆಗಿ ಕಾಣಿಸಿಕೊಂಡಿರೋದು ಗೊತ್ತೇ ಇದೆ. ಈ ನಡುವೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡ್ತಾ ಕಿಚ್ಚ ಸುದೀಪ್ ಕೂಡ ರಾಜಕೀಯ ಎಂಟ್ರಿ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ, ಸಿಎಂ ಆಗೋ ಕನಸಿನ ಬಗ್ಗೆನೂ ಮಾತನಾಡಿದ್ದಾರೆ.
ಸಿನಿಮಾನಟರು ರಾಜಕೀಯಕ್ಕೆ ಬರೋದು ಹೊಸತೇನೂ ಅಲ್ಲ. ಸದ್ಯ ಕರ್ನಾಟಕದಲ್ಲಿ ಸಿನಿಪಾಲಿಟಿಕ್ಸ್ ಚರ್ಚೆ ನಡೆಯೋದಕ್ಕೆ ಕಾರಣ ದಿ ಡೆವಿಲ್ ಸಿನಿಮಾ. ಈ ಚಿತ್ರದಲ್ಲಿ ರಾಜಕೀಯದ ಎಳೆ ಇದೆ. ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕತೆ ಇದೆ. ಈ ಸಿನಿಮಾನಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದು, ಅದ್ರಲ್ಲಿ ಒಂದು ಸಿಎಂ ಪುತ್ರನ ಪಾತ್ರ. ರಾಜಕಾರಣಿಯಾಗಿ ಕಾಣಿಸಿಕೊಂಡಿರೋ ದಾಸ ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕದ ಸಿಎಂ ಸಹ ಆಗೋ ಕಥೆ ಇದೆ.