'ಯುವ' ಅಸಲಿ ಆಟ ಈಗ ಆರಂಭ..! ದೊಡ್ಮನೆ ಫ್ಯಾನ್ಸ್‌ಗೆ ಕಿಕ್ಕು ಹೆಚ್ಚಿಸಿ ಟ್ರೈಲರ್!

ಅಂತೂ ಇಂತೂ ಅಭಿಮಾನಿಗಳ ಕಾಯುವಿಕೆ ಮುಗಿದಿದೆ. ದೊಡ್ಮನೆ ಕುಡಿ ಯುವರಾಜ್ ಕುಮಾರ್ ನಟನೆಯ 'ಯುವ' ಟ್ರೈಲರ್ ರಿಲೀಸ್ ಆಗಿದೆ. ಅಣ್ಣಾವ್ರ ಮೊಮ್ಮಗನ ಚೊಚ್ಚಲ ಸಿನಿಮಾ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

Share this Video
  • FB
  • Linkdin
  • Whatsapp


'ಯುವ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ರಾಘಣ್ಣನ ಕಿರಿಮಗನ ಸಿನಿ ಆರಂಗೇಟ್ರಂ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಪೋಸ್ಟರ್ಸ್, ಟೀಸರ್(Teaser) ಹಾಗೂ ಸಾಂಗ್ಸ್‌ನಿಂದ 'ಯುವ' ಕಿಚ್ಚು ಹಚ್ಚಿಸಿದೆ. ಇದೀಗ ಅಸಲಿ ಆರ್ಭಟ ಶುರುವಾಗಿದೆ. ಸೆಟ್ಟೇರುವ ಮುನ್ನವೇ 'ಯುವ'(Yuva Movie) ಅಬ್ಬರ ಶುರುವಾಗಿತ್ತು. ಆದ್ರೆ ಸಿನಿಮಾ ಕಥೆ ಏನು? ಅನ್ನೊ ಬಗ್ಗೆ ಭಾರೀ ಕುತೂಹಲವಿತ್ತು. ಟ್ರೈಲರ್‌ನಲ್ಲಿ ಅದಕ್ಕೆ ತೆರೆ ಬಿದ್ದಿದೆ. ಮಧ್ಯಮ ವರ್ಗದ ಯುವಕನ ಏಳುಬೀಳಿನ ಕಥೆ 'ಯುವ' ಚಿತ್ರದಲ್ಲಿದೆ. ಮಂಗಳೂರಿನ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ 'ಯುವ' ಸಿಕ್ಕಾಪಟ್ಟೆ ರಗಡ್. ಕಾಲೇಜಿನಲ್ಲಿ ತನ್ನವರಿಗಾಗಿ ಯಾವುದೇ ಹಂತಕ್ಕೆ ಹೋಗುವ ಹುಂಬ. ಈ ಹಾದಿಯಲ್ಲಿ ಒಂದು ಸಮಸ್ಯೆಗೆ ಸಿಲುಕುತ್ತಾನೆ. ತಂದೆ-ತಾಯಿ ದೃಷ್ಟಿಯಲ್ಲಿ ತಪ್ಪಿತಸ್ಥನಾಗಿ ನಿಲ್ಲುವಂತಾಗುತ್ತದೆ. ಬಳಿಕ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು 'ಯುವ' ನಡೆಸುವ ಹೋರಾಟದ ಕಥೆಯೇ ಸಿನಿಮಾ ಅನ್ನೋದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತದೆ. ಯುವ ಟ್ರೈಲರ್‌ನ ಮೊದಲಾರ್ಧ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಕಥೆ ಇದೆ. ಬಳಿಕ 'ಯುವ' ಡೆಲಿವರಿ ಬಾಯ್ ಆಗಿ ಕುಟುಂಬದ ಸಮಸ್ಯೆ ಪರಿಹರಿಸಲು ನಿಲ್ಲುತ್ತಾನೆ ಅನ್ನೋದು ಗೊತ್ತಾಗುತ್ತೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Today Horoscope: ಇಂದಿನ ಪಂಚಾಂಗ ಫಲಗಳು ಹೇಗಿವೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Related Video