Asianet Suvarna News Asianet Suvarna News
breaking news image

Yash: ಛತ್ರಪತಿ ಶಿವಾಜಿ ಆಗ್ತಾರಾ ಯಶ್..? ರಾಕಿಂಗ್‌ ಸ್ಟಾರ್‌ ರಾಮಾಯಣ ಯಾವಾಗ ಶುರು..?

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನಂತರ  ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಇದೀಗ ಯಶ್ 19ನೇ ಚಿತ್ರ  ಟಾಕ್ಸಿಕ್ ಸಿನಿಮಾದಲ್ಲೇ ಬಹಳ ಬ್ಯೂಜಿಯಾಗಿದ್ದಾರೆ.ಈ ನಡುವೆ ಯಶ್ ಶಿವಾಜಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆದಂತೆ ಮತ್ತೆ ಇದೀಗ ಹೊಸ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.

ಯಶ್ ಛತ್ರಪತಿ ಶಿವಾಜಿ ಸಿನಿಮಾ ಮಾಡ್ತಾರಾ ? ಈ ಫೋಟೋಗಳ ಅಸಲಿಯತ್ತೇನು..? 'ಛತ್ರಪತಿ ಶಿವಾಜಿ ಮಹಾರಾಜ್' ಬಯೋಪಿಕ್ ಕಳೆದ ಕೆಲವು ದಿನಗಳಿಂದ ಛತ್ರಪತಿ ಶಿವಾಜಿ(Shivaji Maharaj) ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಕೊನೆಗೂ ಈ ಶಿವಾಜಿ ಬಯೋಪಿಕ್(Shivaji biopic) ಸೆಟ್ಟೇರಿದೆ. ಹಿಂದಿ ಹಾಗೂ ಮರಾಠಿ ಚಿತ್ರರಂಗದ ಜನಪ್ರಿಯ ನಟ ರಿತೇಶ್ ದೇಶಮುಖ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರಂತೆ. ಈ ಸಿನಿಮಾದಲ್ಲಿ ನಟನೆಯನ್ನೂ ಮಾಡುತ್ತಿದ್ದಾರೆ. ಆದರೂ, ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ಯಶ್ (Yash) ನಟಿಸುತ್ತಿದ್ದಾರೆ. ಇದು ಅವರ 20ನೇ ಸಿನಿಮಾ ಅಂತೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಸ್ವತಃ ಯಶ್ ಈ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ. ಯಶ್ ಶಿವಾಜಿ ಲುಕ್ ವೈರಲ್ ಆಗೋಕೂ ಮೊದಲು ಟಾಕ್ಸಿಕ್ ಸಿನಿಮಾ ಯಶ್ ಅನೌನ್ಸ್ ಮಾಡೋಕೂ ಮೊದಲು ಹೀಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಯಶ್ ರಾವಣನ ಲುಕ್. ಬಾಲಿವುಡ್‌ನಿಂದ ರಾಮಾಯಣ ಸಿನಿಮಾ (Ramayana Movie) ಆಗುತ್ತಿದ್ದು. ರಣ್ಬೀರ್ ಕಪೂರ್ , ಸಾಯಿ ಪಲ್ಲವಿ ರಾಮ ಸೀತೆಯಾಗಿ ನಟಿಸುತ್ತಾರೆನ್ನಲಾಗಿದೆ. ಈ ಸಿನಿಮಾದಲ್ಲಿ ರಾವಣನಾಗಲು ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನಲಾಗಿದ್ದು. ಯಶ್ ಅದಕ್ಕಾಗಿ ವೈಟ್ ಗೈನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ  ಯಶ್ ಹನುಮಾನ್ 2 ಸಿನಿಮಾದಲ್ಲಿ ನಟಿಸುತ್ತಾರೆಂಬ ಬಗ್ಗೆಯೂ ಸುದ್ದಿಗಳು ಓಡಾಡುತ್ತಿವೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಹರಿ-ಹರರ ಪ್ರಾರ್ಥನೆ ಮಾಡಿ..ಇದರಿಂದ ಸಿಗುವ ಫಲವೇನು ಗೊತ್ತಾ?

Video Top Stories