Asianet Suvarna News Asianet Suvarna News

Today Horoscope: ಇಂದು ಹರಿ-ಹರರ ಪ್ರಾರ್ಥನೆ ಮಾಡಿ..ಇದರಿಂದ ಸಿಗುವ ಫಲವೇನು ಗೊತ್ತಾ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಮಂಗಳವಾರ, ಏಕಾದಶಿ ತಿಥಿ, ಆರಿದ್ರಾ ನಕ್ಷತ್ರ.

ಈ ದಿನ ಹರಿ-ಹರರ ಸ್ಮರಣೆಗೆ ತುಂಬಾ ಒಳ್ಳೆಯ ದಿನವಾಗಿದೆ. ಏಕಾದಶಿ ವಿಷ್ಣುವಿಗೆ ಪ್ರಿಯವಾದದ್ದು ಆಗಿದ್ದು, ಆರಿದ್ರಾ ಶಿವನಿಗೆ ಇಷ್ಟವಾದದ್ದು ಆಗಿದೆ. ನಾವು ಗಳಿಸಿದನ್ನು ಉಳಿಸಿಕೊಳ್ಳುವುದೇ ಕ್ಷೇಮವಾಗಿದೆ. ಕ್ಷೇಮದಾಯಕವಾಗಿರಲು ವಿಷ್ಣುವಿನ ಕೃಪೆ ಇರಬೇಕು. ನಮಗೆ ನಷ್ಟವಾಗದಿರಲಿ ಎಂದರೇ ಶಿವನ ಪ್ರಾರ್ಥನೆ ಮಾಡಿ. ಗಳಿಸೋದು ಅದನ್ನು ಉಳಿಸಿಕೊಳ್ಳೋದೇ ಮನುಷ್ಯನ ಗುರಿಯಾಗಿದೆ. ಇದು ಓರ್ವ ವ್ಯಕ್ತಿಗೆ ಶ್ರೇಯಸ್ಸನ್ನು ಉಂಟು ಮಾಡುತ್ತದೆ. ವಿದ್ಯೆ ಮತ್ತು ಮೋಕ್ಷಕ್ಕೆ ಹರಿ-ಹರರು ಅಧಿಪತಿಗಳಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ತೆರಿಗೆ ತಾರತಮ್ಯ ಹೆಸರಲ್ಲಿ ಉತ್ತರ-ದಕ್ಷಿಣ ರಾಜಕೀಯ! ಮೋದಿ v/s ರಾಹುಲ್ ಕದನದಲ್ಲಿ ಯಾರು ಯಾರ ಕಡೆ ?