ಬೆಳ್ಳಿತೆರೆಯಲ್ಲಿ ಯಶ್ ಪರ್ವ ಆರಂಭ ಆಗಿ ಕಳೆಯಿತು 14 ವರ್ಷ, ಹೇಗಿತ್ತು ಜರ್ನಿ.?

ಈ ಹುಡುಗ ಹಾಸನದ ಅಪ್ಪಟ ಹಳ್ಳಿ ಹುಡುಗ. ಹೆಸರು ನವೀನ್ ಕುಮಾರ್ ಗೌಡ. ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ರು. ಮಧ್ಯಮ ವರ್ಗದ ಕುಟುಂಬಂದಿಂದ ಬಂದ ಈ ಹುಡುಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಅವ್ರೇ ರಾಕಿಂಗ್ ಸ್ಟಾರ್ ಯಶ್!
 

Share this Video
  • FB
  • Linkdin
  • Whatsapp

ಈ ಹುಡುಗ ಹಾಸನದ ಅಪ್ಪಟ ಹಳ್ಳಿ ಹುಡುಗ. ಹೆಸರು ನವೀನ್ ಕುಮಾರ್ ಗೌಡ. ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ರು. ಮಧ್ಯಮ ವರ್ಗದ ಕುಟುಂಬಂದಿಂದ ಬಂದ ಈ ಹುಡುಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಅವ್ರೇ ರಾಕಿಂಗ್ ಸ್ಟಾರ್ ಯಶ್!

Add Asianetnews Kannada as a Preferred SourcegooglePreferred

ಬೆಂಗಳೂರಲ್ಲಿ ಇರ್ಬೇಡ ಅಂತ ಅಪ್ಪ ಓಡ್ಸಿದ್ರು ಆಗ ದೆಹಲಿಗೆ ಹೋಗಿದ್ದೆ: ಸುದೀಪ್

ಯಶ್ (Yash) ಜುಲೈ 18 ಕ್ಕೆ ನಾಯಕನಾಗಿ ಸಿನಿಮಾ ಜರ್ನಿ (Cine Journey) ಶುರುಮಾಡಿ 14 ವರ್ಷ ಆಯ್ತು. ಜುಲೈ 18 ಯಶ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ಮೊಗ್ಗಿನ ಮನಸ್ಸು ಬಿಡುಗಡೆ ಆದ ದಿನ. ಈ 14 ವರ್ಷದ ಯಶಿಸಂನ ಒಮ್ಮೆ ತಿರುವು ಹಾಕಿದ್ರೆ ಅಬ್ಬಬ್ಬ.! ರಾಕಿಯ ಸಾಧನೆ ಎಷ್ಟೊಂದು ರೋಚಕ ಅನಿಸುತ್ತೆ. ಬಣ್ಣದ ಜಗತ್ತಿನ ದಿಕ್ಕು ದೆಸೆ ಗೊತ್ತಿಲ್ಲದ ಯಶ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಲಗಿ ಬೇರೆ ಹೀರೋಗಳ ಹಾಗೆ ಚಿತ್ರಮಂದಿರಗಳ ಮುಂದೆ ನನ್ನದೊಂದು ಕಟೌಟ್ ನಿಲ್ಲಬೇಕು ಅಂತ ಗುರಿ ಇಟ್ಟುಕೊಂಡ ಕಲಾವಿದ. ಆರ್ಕೆಸ್ಟ್ರಾದಲಲ್ಲಿ ಡಾನ್ಸ್ ಮಾಡಿ ರಿಯಲ್ ಸ್ಟಾರ್ ಉಪೇಂದ್ರರಿಂದ ಭೇಷ್ ಎನಿಸಿಕೊಂಡು, ಬಿ.ವಿ.ಕಾರಂತರ 'ಬೆನಕ' ನಾಟಕ ಕಂಪನಿಯಲ್ಲಿ ಅಭಿನಯ ಕಲಿತು, ಕಿರುತೆರೆಯಲ್ಲಿ ನಂದ ಗೋಕುಲ, ಪ್ರೀತಿ ಇಲ್ಲದ ಮೇಲೆ ಧಾರವಾಹಿಯಲ್ಲಿ ನಟಿಸಿ ಕೊನೆಗೆ ಮೊಗ್ಗಿನ ಮನಸ್ಸು ಚಿತ್ರದಿಂದ ಹೀರೋ ಆಗಿ ಬಂದವರು ಯಶ್. 

ಓವರ್ ಸೈಜ್ ಟೀ - ಶರ್ಟ್ ಮತ್ತು ಪ್ಯಾಂಟ್ ಧರಿಸಿದ ದೀಪಿಕಾ ಪಡುಕೋಣೆ

ಯಶ್ ಸ್ಟಾರ್ ಆಗೋಕೆ ಒದ್ದಾಡುತ್ತಿದ್ದ ದಿನಗಳವು. ಧಾರವಾಹಿಯಲ್ಲಿ ರಾಕಿ ಅಭಿನಯಿಸುತ್ತಿದ್ರು. ಆದ್ರೆ ಆಗ ಯಶ್ರನ್ನ ಯಾರು ಕೇರ್ ಮಾಡುತ್ತಿರಲಿಲ್ವಂತೆ. ಯಶ್ರನ್ನ ಹೇಗೆ ಕಡೆಗಣಿಸಿದ್ರು, ಮತ್ತು ಅದನ್ನ ಚಾಲೇಜಿಂಗ್ ಆಗಿ ಪಡೆದ ಯಶ್ ಮುಂದೆ ಏನ್ ಮಾಡ್ಬೇಕು ಅಂತ ಹೇಗೆ ನಿರ್ಧರಿಸಿದ್ರು ಅಂತ ಅವ್ರ ಮಾತುಗಳಿಂದಲೇ ಕೇಳಿ..

Related Video