Asianet Suvarna News Asianet Suvarna News

Puneeth Rajkumar: ವಿಕಿಪೀಡಿಯಾದಲ್ಲಿ ನಂಬರ್ ಒನ್ ಸ್ಥಾನ ಪಡೆದ ಪವರ್ ಸ್ಟಾರ್

ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಸ್ಟಾರ್‌ಗಳ ಬಗ್ಗೆ ವಿಶೇಷ ವರದಿಯೊಂದು ಬಂದಿದೆ. ಗೂಗಲ್‌ನ ವಿಕಿಪೀಡಿಯಾ ಕನ್ನಡದ ಸ್ಟಾರ್ ನಟರ ಬಗ್ಗೆ ವರದಿಯೊಂದನ್ನು ಹೊರ ಹಾಕಿದೆ. ಹೌದು! ಕಳೆದ ವರ್ಷ 2021ರ ವಿಕಿಪೀಡಿಯಾದಲ್ಲಿ ಹೆಚ್ಚು ಹುಡಕಲ್ಪಟ್ಟ ಕನ್ನಡದ ಸ್ಟಾರ್ ಯಾರು ಎನ್ನುವ ಪಟ್ಟಿಯೊಂದು ಹರಿದಾಡುತ್ತಿದೆ. 

ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸೂಪರ್ ಸ್ಟಾರ್‌ಗಳ ಬಗ್ಗೆ ವಿಶೇಷ ವರದಿಯೊಂದು ಬಂದಿದೆ. ಗೂಗಲ್‌ನ ವಿಕಿಪೀಡಿಯಾ (Wikipedia) ಕನ್ನಡದ ಸ್ಟಾರ್ ನಟರ ಬಗ್ಗೆ ವರದಿಯೊಂದನ್ನು ಹೊರ ಹಾಕಿದೆ. ಕಳೆದ ವರ್ಷ 2021ರ ವಿಕಿಪೀಡಿಯಾದಲ್ಲಿ ಹೆಚ್ಚು ಹುಡಕಲ್ಪಟ್ಟ ಕನ್ನಡದ ಸ್ಟಾರ್ ಯಾರು ಎನ್ನುವ ಪಟ್ಟಿಯೊಂದು ಹರಿದಾಡುತ್ತಿದೆ. ಹೌದು! ವಿಕಿಪೀಡಿಯಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು 8.11 ಮಿಲಿಯನ್ ಮಂದಿ ಹುಡುಕಿದ್ದಾರೆ. ಹೀಗಾಗಿ ಹೆಚ್ಚು ಹುಡಕಲ್ಪಟ್ಟ ಕನ್ನಡದ ಸ್ಟಾರ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪುನೀತ್ ಪಡೆದಿದ್ದಾರೆ. 

Valimai Movie: ದೊಡ್ಡ ಮಟ್ಟದ ಒಟಿಟಿ ಆಫರ್ ತಿರಸ್ಕರಿಸಿದ 'ವಲಿಮೈ' ಚಿತ್ರತಂಡ

ಕಳೆದ ಬಾರಿ ಮೊದಲ ಸ್ಥಾನವನ್ನು ಪಡೆದಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಈ ಬಾರಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಯಶ್ ಬಗ್ಗೆ 7.46 ಮಿಲಿಯನ್ ಮಂದಿ ವಿಕಿಪೀಡಿಯಾದಲ್ಲಿ ಹುಡುಕಿದ್ದಾರೆ. ಇನ್ನು ವಿಕಿಪೀಡಿಯಾ ಸರ್ಚಿಂಗ್‌ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಮೂರನೇ ಸ್ಥಾನದಲ್ಲಿದ್ದಾರೆ. 4.38 ಮಿಲಿಯನ್ ಮಂದಿ ಕಿಚ್ಚನ ಬಗ್ಗೆ ವಿಕಿಪೀಡಿಯಾದಲ್ಲಿ ಹುಡುಕಾಡಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಾಲ್ಕನೇ ಸ್ಥಾನದಲ್ಲಿದ್ದು, ಐದನೇ ಸ್ಥಾನದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ (Shivarajkumar) ಇದ್ದಾರೆ. ಈ ಮೂಲಕ ಕನ್ನಡದ 5 ಜನ ಸ್ಟಾರ್‌ಗಳು ವಿಕಿಪೀಡಿಯಾದಲ್ಲಿ ಅತಿ ಹೆಚ್ಚು ಹುಡಕಲ್ಪಟ್ಟವರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories