ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!

ಬಿಗ್​ ಸ್ಕ್ರೀನ್​ನಲ್ಲಿ ದಾಸನ ಅಪ್ಪುಗೆ..! ಹೆಬ್ಬುಲಿ ಕೋಟೆಯಲ್ಲಿ ದಾಸನ ಹುಡ್ಗ ಗಿಲ್ಲಿಯದ್ದೇ ಹವಾ..! ಸ್ಪರ್ಧಿಗಳಿಗೆ ಟ್ರಬಲ್.. ದೊಡ್ಮನೆ ಡೆವಿಲ್.. ಗಿಲ್ಲಿ ಅನ್​ಸ್ಟಾಪೆಬಲ್..! ಇದೇ ಈ ಹೊತ್ತಿನ ವಿಶೇಷ, ಕಿಚ್ಚನ ಅಡ್ಡಾ ದಾಸನ ಹುಡ್ಗ.

Share this Video
  • FB
  • Linkdin
  • Whatsapp

ಬಿಗ್ ಬಾಸ್​ನಲ್ಲಿ ಕಿಚ್ಚನ ಮೆಚ್ಚುಗೆ.. ಬಿಗ್​ ಸ್ಕ್ರೀನ್​ನಲ್ಲಿ ದಾಸನ ಅಪ್ಪುಗೆ..! ಹೆಬ್ಬುಲಿ ಕೋಟೆಯಲ್ಲಿ ದಾಸನ ಹುಡ್ಗ ಗಿಲ್ಲಿಯದ್ದೇ ಹವಾ..! ಸ್ಪರ್ಧಿಗಳಿಗೆ ಟ್ರಬಲ್.. ದೊಡ್ಮನೆ ಡೆವಿಲ್.. ಗಿಲ್ಲಿ ಅನ್​ಸ್ಟಾಪೆಬಲ್..! ಇದೇ ಈ ಹೊತ್ತಿನ ವಿಶೇಷ, ಕಿಚ್ಚನ ಅಡ್ಡಾ ದಾಸನ ಹುಡ್ಗ. ಇವತ್ತಿನ ಸ್ಟೋರಿ ತುಂಬಾನೇ ಇಂಟ್ರೆಸ್ಟಿಂಗ್​ ಹಾಗೂ ಎಂಟರ್​​ಟೈನ್​​​​ ಆಗಿರುತ್ತೆ.. ಹೌದು, ಕಿಚ್ಚ ಸುದೀಪ್​​​ ಅಡ್ಡದಲ್ಲಿ ದಾಸನ ಹುಡುಗನೊಬ್ಬ ಸಿಕ್ಕೊಂಡಿದ್ದಾನೆ.. ಆತನ ಕ್ವಾಟ್ಲೆಗೆ ಅಡ್ಡದಲ್ಲಿರೋ ಹುಡುಗರು ಹಣ್ಣುಗಾಯಿ ನೀರುಗಾಯಿ ಆಗೋಗಿದ್ದಾರೆ.. ಆತನ ಬಾಯಿಗೆ ಸಿಕ್ಕಿ ಗೆಲ್ಲೋಕೆ ಆಗೋಲ್ಲ ಅಂತ ಎಲ್ಲರೂ ಸುಮ್ಮನಾಗಿ ಬಿಟ್ಟಿದ್ದಾರೆ.

ಇನ್ನು ಸಿಬಿಐ ಶಂಕರ್​​ ಆಗಿ ಇನ್ನೊಂದು ಕಡೆ ಹೊಟ್ಟೆಹುಣ್ಣಾಗುವಂತೆ ನಗಿಸುತ್ತಿದ್ದಾನೆ.. ಈತನನ್ನ ಅರ್ಥಮಾಡಿಕೊಳ್ಳೊದು ಕಷ್ಟ, ಆದ್ರೆ, ಎಲ್ಲರನ್ನೂ ನಗಿಸುತ್ತಾನೆ.. ರಂಜಿಸುತ್ತಿದ್ದಾನೆ.. ಇಡೀ ರಾಜ್ಯದ ಮನೆ ಮನಗಳಲ್ಲಿಯೂ ಈತನದ್ದೇ ಮಾತು.. ನಮ್ಮ ಸ್ಟೋರಿ ಕೂಡ ಅವನದ್ದೆ ನೋಡಿ. ದೊಡ್ಮನೆಗೆ ಮಾತ್ರವೇ ಸೀಮಿತವಾಗಿದ್ದ ನಗೆ ಕಡಲು ಇದೀಗ ಬಿಗ್​​ಸ್ಕ್ರೀನ್​​​​​ ಮೂಲ್ಕ ಇಡೀ ಸ್ಯಾಂಡಲ್​​ವುಡ್​​ಗೆ ಪಸರಿಸಿದೆ. ಹೌದು, ದರ್ಶನ್​​ ಅಭಿನಯದ ಡೆವಿಲ್​​ ಸಿನಿಮಾದ ಮೂಲ್ಕ ಗಿಲ್ಲಿ ಬಿಗ್​​ಬಾಸ್​​​ ಮನೆಯಿಂದ ಆಚೆಗೂ ಸೌಂಡ್​​​​ ಮಾಡ್ತಿದ್ದಾರೆ... ಇದು ಯಾವ ರೀತಿಯಲ್ಲಿ ಇದೆ ಅಂದ್ರೆ, ಕಿಚ್ಚನ ಅಡ್ಡೆ ಬಿಗ್​​ಬಾಸ್​​ ಶೋ ಅಂತಾದ್ರೆ, ಡೆವಿಲ್​​ ಸಿನಿಮಾದಲ್ಲಿ ಸೌಂಡ್​​ ಮಾಡ್ತಿರೋ ಗಿಲ್ಲಿ, ದಾಸನ ಹುಡುಗ ಅನ್ನೋದ್ರಲ್ಲಿ ಯಾವುದೇ ಡೌಟಿಲ್ಲ.

ಹೀಗಾಗಿ ದರ್ಶನ್​​​​ ಹುಡುಗನೊಬ್ಬ ಕಿಚ್ಚನ ಅಡ್ಡೆಯಲ್ಲಿ ಹೇಗೆಲ್ಲಾ ಆಡ್ತಿದ್ದಾನೆ.. ಆತನನ್ನ ಕಂಟ್ರೋಲ್​​ ಮಾಡೋಕೆ ಯಾರಿಗೂ ಏಕೆ ಆಗ್ತಿಲ್ಲ.. ದೊಡ್ಮನೆಯಿಂದ ಹೊರ ಬಂದಿರೋ ಸ್ಫರ್ಧಿಗಳು ದರ್ಶನ್​​ ಹುಡುಗನ ಬಗ್ಗೆ ಏನು ಹೇಳ್ತಿದ್ದಾರೆ.. ಹಾಗಾದ್ರೆ, ಕಿಚ್ಚನ ಅಡ್ಡೆಯಿಂದ ದಾಸನ ಹುಡುಗ ಗೆದ್ದು ಬರ್ತಾನಾ.. ಇಂತಹ ಚಿತ್ರ ವಿಚಿತ್ರವಾದ ಕಲ್ಪನೆಗಳು ಇದೀಗ ಬಿಗ್​​ಬಾಸ್​​ ಅಭಿಮಾನಿಗಳ ಮನದಲ್ಲಿ ಮೂಡಿದೆ. ಮೊದಲೇ ಸ್ಯಾಂಡಲ್​​ವುಡ್​​​ನಲ್ಲಿ ಸುದೀಪ್​​ ವರ್ಸಸ್​​ ದರ್ಶನ್​​​ ಅನ್ನೋ ಮಾತಿದೆ.. ಈ ಇಬ್ಬರನ್ನು ಒಟ್ಟಾಗಿ ನೋಡಬೇಕು ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಇದು ಸಾಧ್ಯವೇ ಇಲ್ಲದ ಮಾತಾಗಿದೆ ಅನ್ನೋದು ಅಭಿಮಾನಿಗಳಿಗೂ ಗೊತ್ತಾಗಿಬಿಟ್ಟಿದೆ.

ಹೀಗಾಗಿ ಎಲ್ಲೆಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲೇಲ್ಲಾ ಸುದೀಪ್​​ ಹಾಗೂ ದರ್ಶನ್​​ ತಾಳೆಗಳು ನಡೆಯುತ್ತಲೆ ಇರುತ್ತದೆ.. ಇದೀಗ ಅಂತಹದ್ದೇ ತಾಳೆಯಲ್ಲಿ ಎದ್ದಿರೋದು ಈ ಗಿಲ್ಲಿ ನಟನ ಟಾಕ್​​​​ ಕೂಡ. ಡೆವಿಲ್​​ ಸಿನಿಮಾದ ಪ್ರೋಮೋದಲ್ಲಿ ಗಿಲ್ಲಿ ಕಾಣಿಸಿಕೊಂಡಾಗಿನಿಂದಲೂ ಈ ಮಾತುಗಳು ಇನ್ನಷ್ಟು ಜೋರಾಗಿ ಕೇಳಿ ಬರ್ತಿದೆ.. ಅಲ್ದೆ, ಗಿಲ್ಲಿ ಇದೀಗ ದಾಸನ ಹುಡುಗನು ಆಗೋಗಿದ್ದಾನೆ. ಆ ಮೂಲ್ಕ ಕಿಚ್ಚನ ಅಡ್ಡವಾಗಿರೋ ಬಿಗ್​​ಬಾಸ್​​ ಮನೆಯಲ್ಲಿ ದರ್ಶನ್​ ಹುಡುಗನ ಕಾಮಿಡಿ ಜೋರಾಗಿ ನಡೀತಿದೆ.. ಈ ಕಾಮಿಡಿಗಳಿಂದಲೇ ಗಿಲ್ಲಿ ದಾಸನಂತೆಯೇ ರಾಜ್ಯದ ಮನೆ ಮನೆಯಲ್ಲೂ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾನೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video