Valimai Movie: ದೊಡ್ಡ ಮಟ್ಟದ ಒಟಿಟಿ ಆಫರ್ ತಿರಸ್ಕರಿಸಿದ 'ವಲಿಮೈ' ಚಿತ್ರತಂಡ
ಕಾಲಿವುಡ್‌ನ ಖ್ಯಾತ ನಟ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ವಲಿಮೈ' ಚಿತ್ರವು ಕೊರೋನಾ ಮೂರನೇ ಅಲೆ ಹಾಗೂ ಒಮಿಕ್ರಾನ್ ಹಾವಳಿಯಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಇದೀಗ ಓಟಿಟಿ ಕಂಪನಿಯೊಂದು ಚಿತ್ರಕ್ಕೆ ದೊಡ್ಡ ಮೊತ್ತದ ಆಫರ್ ನೀಡಿದೆ ಎಂಬ ಮಾಹಿತಿ ಕೇಳಿಬಂದಿದೆ.
ತಮಿಳು (Kollywood) ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅಭಿನಯದ ಬಹುನಿರೀಕ್ಷಿತ 'ವಲಿಮೈ' (Valimai) ಚಿತ್ರವು ಜನವರಿ 13ರಂದು ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ (CoronaVirus) ಮೂರನೇ ಅಲೆ ಹಾಗೂ ಒಮಿಕ್ರಾನ್ (Omicron) ಹಾವಳಿಯಿಂದ ಅನಿವಾರ್ಯವಾಗಿ ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿ ಸಿನಿಪ್ರಿಯರನ್ನು ಸೆಳೆದಿತ್ತು. ಈ ಚಿತ್ರದಲ್ಲಿ ಅಜಿತ್ ಸಿಕ್ಕಾಪಟ್ಟೆ ಆ್ಯಕ್ಷನ್ ಮಾಡಿದ್ದು, ವಿಶೇಷವಾಗಿ ಬೈಕ್ ಸ್ಟಂಟ್ (Bike Stunt) ಮಾಡಿದ್ದರು. ಇದೀಗ ಈ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
Valimai Trailer: ಆಕ್ಷನ್ ಧಮಾಕ ಚಿತ್ರದಲ್ಲಿ ಬೈಕ್ ಸ್ಟಂಟ್ ಮಾಡಿದ ನಟ ಅಜಿತ್
ಹೌದು! ಬೈಕ್ ರೇಸ್ನ ಸುತ್ತ ಹೆಣೆದಿರುವ 'ವಲಿಮೈ' ಚಿತ್ರಕ್ಕೆ ದೊಡ್ಡ ಓಟಿಟಿ (OTT) ಕಂಪನಿಯೊಂದು 300 ಕೋಟಿ ರೂ. ಆಫರ್ ನೀಡಿದೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ, ಈ ಆಫರ್‌ಗೆ ಚಿತ್ರದ ನಿರ್ಮಾಪಕ ಬೋನಿ ಕಪೂರ್ (Boney Kapoor) ಇಲ್ಲ ಎಂದಿದ್ದಾರೆ ಎನ್ನಲಾಗಿದೆ. 'ವಲಿಮೈ' ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಲಿದೆ ಎಂಬ ನಂಬಿಕೆ ನಿರ್ಮಾಪಕರಿಗಿದೆಯಂತೆ. ಇನ್ನು ಈ ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಚ್. ವಿನೋದ್ (H.Vinoth) ನಿರ್ದೇಶನ ಮಾಡಿದ್ದಾರೆ. ಅಜಿತ್ ಎದುರಿಗೆ ಕಾರ್ತೀಕೆಯ (Karthikeya) ವಿಲನ್ ಆಗಿ ಅಬ್ಬರಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment