ಲವ್ ಲೀ ಗೆದ್ದರೂ ಬೇಸರಗೊಂಡ ಚಿಟ್ಟೆ ವಸಿಷ್ಠ ಸಿಂಹ ! ಸಿನಿಮಾವನ್ನ ಕೆಟ್ಟ ಟೈಂನಲ್ಲಿ ಬಿಡುಗಡೆ ಮಾಡಿದ್ವಿ ಎಂದ ಡೈರೆಕ್ಟರ್!

ಕ್ರೇಜ್ ಮೇಲೆ ಬಿಡುಗಡೆಯಾದ ಲವ್ ಲೀ ಸಿನಿಮಾಗೆ ಪೇಕ್ಷಕರಿಂದ ಅಷ್ಟೇ ಪ್ರೀತಿ ಸಿಕ್ಕಿದೆ. ಈಗ ಲವ್ ಲೀ ಸಿನಿಮಾ 25 ದಿನ ಪೂರೈಸಿದೆ. ಈ ಖುಷಿಯನ್ನ ಲವ್ ಲೀ ಟೀಂ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ.

Share this Video
  • FB
  • Linkdin
  • Whatsapp

ಸದ್ಯದ ಮಟ್ಟಿನ ಸ್ಥಿತಿ ನೋಡಿದ್ರೆ ಸಿನಿಮಾಗಳು ಒಂದು ವಾರ ಓಡೋದು ಕಷ್ಟ ಅನ್ನೋ ಹಾಗಾಗಿದೆ. ಬಟ್ ಲವ್ ಲೀ ಸಿನಿಮಾ(Love Lee Movie) ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಸಕ್ಸಸ್ ಕಾಣೋದರ ಜೊತೆಗೆ ಸಿಲ್ವರ್ ಡೇಸ್ ಅನ್ನ ಕಂಪ್ಲಿಟ್ ಮಾಡಿದೆ. ಚೇತನ್ ಕೇಶವ್ (Chetan Keshav)ನಿರ್ದೇಶನದ ಲವ್ ಲೀ ಸಿನಿಮಾ ಔಟ್ ಎಂಡ್ ಔಟ್ ರೊಮ್ಯಾಂಟಿಕ್ ಲವ್ ಸ್ಟೋರಿಯೊಂದಿಗೆ ರೌಡಿಸಂ ಕಥೆ ಇರುವ ಸ್ಟೋರಿಯಾಗಿದ್ದು, ವಸಿಷ್ಠಗೆ (Vasishta Simha) ಜೋಡಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಾಯಾಕಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಸೋಷಿಯಲ್ ಮೆಸೇಜ್ ಕೂಡ ಇದೆ. ರೌಡಿಸಂ, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು? ಎಂಬುದು ಕಥೆಯಲ್ಲಿ ಇದೆ. ಹಾಗಾಗಿನೆ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ. ಲವ್ ಲೀ ಸಕ್ಸಸ್ ಕುಷಿಯನ್ನ ಚಿತ್ರತಂಡ, ಅದ್ದೂರಿ ವೇದಿಕೆಯಲ್ಲಿ ಹಂಚಿಕೊಂಡಿದೆ. ಇದೇ ವೇಳೆ ಲವ್ ಲೀ ಗಾಗಿ ದುಡಿದವರಿಗೆ ಶೀಲ್ಡ್ ನೀಡಿ ಗೌರವಿಸಿದೆ. ಆ ಮೂಲಕ ಈ ಚಿತ್ರದ ಗೆಲುವಿಗಾಗಿ ಜೊತೆಯಾಗಿ ನಿಂತವರನ್ನ ಚಿತ್ರತಂಡ ಸ್ಮರಿಸಿಕೊಂಡಿದೆ. ಆದ್ರೂ ಲವ್ ಲಿ ಚಿತ್ರತಂಡಕ್ಕೆ ಒಂದು ಬೇಸರ ಇದೆ. ಈ ಸಿನಿಮಾವನ್ನ ಬ್ಯಾಡ್ ಟೈಂ ನಲ್ಲಿ ರಿಲೀಸ್ ಮಾಡಿದ್ವಿ ಅನ್ನೋ ಬೇಸರ. ಅದಕ್ಕೆ ಕಾರಣ ಕಿಲ್ಲಿಂಗ್ ಸ್ಟಾರ್ ದರ್ಶನ್. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದಕ್ಕೆ ಲವ್ ಲೀ ಸಿನಿಮಾಗೆ ಸರಿಯಾದ ಪ್ರಚಾರ ಸಿಕ್ಕಿಲ್ಲ. ಇದು ನಟ ವಸಿಷ್ಠ ಸಿಂಹ ಹಾಗೂ ನಿರ್ದೆಶಕ ಚೇತನ್ ಕೇಶವ್ ಬೇಸರಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  'ಬಿಲ್ಲಾ ರಂಗ ಭಾಷಾ’ ಚಿತ್ರಕ್ಕೆ ಸುದೀಪ್ ಸಖತ್‌ ತಯಾರಿ! 5-6 ತಿಂಗಳು ತಯಾರಿ ನಡೆಸಲಿದ್ದಾರಂತೆ ನಟ !

Related Video