Asianet Suvarna News Asianet Suvarna News

'ಬಿಲ್ಲಾ ರಂಗ ಭಾಷಾ’ ಚಿತ್ರಕ್ಕೆ ಸುದೀಪ್ ಸಖತ್‌ ತಯಾರಿ! 5-6 ತಿಂಗಳು ತಯಾರಿ ನಡೆಸಲಿದ್ದಾರಂತೆ ನಟ !

ಕಿಚ್ಚ ಸುದೀಪ್ ‘ಮ್ಯಾಕ್ಸ್’ ಸಿನಿಮಾ ಮುಗಿಸಿದ್ದು, ಇದೀಗ ಬಿಲ್ಲಾ ರಂಗ ಭಾಷಾ ಚಿತ್ರಕ್ಕೆ  ತಯಾರಿ ಆರಂಭಿಸಿದ್ದಾರೆ. 
 

ಮ್ಯಾಕ್ಸ್ ಮುಗೀತು(Max Movie) ಮುಂದೇನು ಅನ್ನುವಾಗಲೇ ಸಿಕ್ತು ಕಿಚ್ಚನ ಅಭಿಮಾನಿಗಳಿಗೆ ಬಿಗ್ ನ್ಯೂಸ್. ಬಹುನಿರೀಕ್ಷೆಯ ಬಿಲ್ಲಾ ರಂಗ ಭಾಷಾಗಾಗಿ ಸುದೀಪ್ ಸಜ್ಜಾಗಿದ್ದಾರೆ. ಅನೂಪ್ ಭಂಡಾರಿ ಜೊತೆಗಿನ ಚಿತ್ರಕ್ಕೆ ಸುದೀಪ್(Sudeep) ತಯಾರಿ ಮಾಡಿಕೊಳ್ತಿದ್ದಾರೆ. ಸುದೀಪ್ ನಟಿಸಿಲಿರುವ ‘ಬಿಲ್ಲಾ ರಂಗ ಭಾಷಾ’ ಸಿನಿಮಾ (Billa Ranga Basha Movie) ಸದ್ಯ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಐದಾರು ತಿಂಗಳ ತಯಾರಿ ನಂತರ ಶೂಟಿಂಗ್ ಶುರುವಾಗಲಿದೆ. ಸುದೀಪ್ ಹೊಸ ಪಾತ್ರಕ್ಕೆ ಸ್ಟ್ರಾಂಗ್ ಫಿಸಿಕ್ ಬೇಕಾಗಿದೆ. ಶೀಘ್ರದಲ್ಲೇ ಸಿನಿಮಾ ಘೋಷಣೆ ಮಾಡುತ್ತೇವೆ. ಯಾರು ನಿರ್ಮಾಣ ಮಾಡ್ತಾರೆ. ಇನ್ನೀತರ ವಿಚಾರಗಳನ್ನು ಸದ್ಯದಲ್ಲೇ ಹೇಳುತ್ತೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ. ಪ್ರತ್ಯೇಕ ಕೋಚಿಂಗ್ ಪಡೆಯುತ್ತಿರುವ ಸುದೀಪ್ ಈ ಚಿತ್ರದಲ್ಲಿ ಮೇಲೆ ಭಾರಿ ನಿರೀಕ್ಷೆ ಹೊತ್ತಿದ್ದಾರೆ. ಇನ್ನೂ ‘ಮ್ಯಾಕ್ಸ್’ಚಿತ್ರ ಮುಗಿಯುತ್ತಿದ್ದಂತೆ ಸುದೀಪ್ ಅನೂಪ್ ಸಿನಿಮಾಗೆ ದೇಹ ದಂಡಿಸುತ್ತಿದ್ದಾರೆ. ವರ್ಕೌಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ‘ವಿಕ್ರಾಂತ್‌ ರೋಣ’ ಸಿನಿಮಾಗಾಗಿ ಜೊತೆಯಾಗಿ ಕೆಲಸ ಮಾಡಿದ್ರು ಅನೂಪ್ ಮತ್ತು ಸುದೀಪ್ ಈಗ ಬಿಲ್ಲಾ ರಂಗ ಭಾಷಾ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ. 

ಇದನ್ನೂ ವೀಕ್ಷಿಸಿ:  ಪವಿತ್ರಾ ಗೆಳತಿ ಸಮತಾ ಬುಡಕ್ಕೂ ಬಂತು ರೇಣುಕಾಸ್ವಾಮಿ ಕೇಸ್! ಶಾಕ್ ಡಿವೈಸ್‌ಗೆ ಹಣ ಕೊಟ್ಟಿದ್ಯಾರು?

Video Top Stories