Asianet Suvarna News Asianet Suvarna News

ಅತ್ಯಾಧುನಿಕ ತಂತ್ರಜ್ಞಾನದ ಸಿನಿಮಾ ಉಪ್ಪಿ 'UI':ಈ ಚಿತ್ರ ಟೆಕ್ನಿಕಲಿ ಎಷ್ಟು ಸ್ಟ್ರಾಂಗ್ ಇದೆ ಗೊತ್ತಾ?

ರಿಯಲ್ ಸ್ಟಾರ್ ಉಪ್ಪಿಯ 'UI' ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಹೊಸ ಟಾಕ್ ಶುರುವಾಗಿದೆ. ಯಾಕಂದ್ರೆ UI' ಕಂಟೆಂಟ್ ಸಿನಿಮಾ ಮಾತ್ರ ಅಲ್ಲ. ಈ ಬಾರಿ ಉಪೇಂದ್ರ ತಂತ್ರಜ್ಞಾನದ ಜೊತೆಗೂ ಆಟ ಆಡಿದ್ದಾರೆ.

ರಿಯಲ್‌ಸ್ಟಾರ್ ಉಪೇಂದ್ರ 8 ವರ್ಷದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಗೊತ್ತೇ ಇದೆ. ಉಪ್ಪಿ ನಿರ್ದೇಶನ ಅಂದರೆ, ಆ ಸಿನಿಮಾ ಬಗ್ಗೆ ಎಲ್ಲಿಲ್ಲದ ಕುತೂಹಲವಿರುತ್ತೆ. ಆದ್ರೆ ಐದು ವರ್ಷಕ್ಕೊಮ್ಮೆ, 8 ವರ್ಷಕ್ಕೊಮ್ಮೆ ರಿಯಲ್ ಸ್ಟಾರ್ ಆಕ್ಷನ್ ಕಟ್ ಹೇಳುತ್ತಾರೆ. ಇದೀಗ 'ಕಬ್ಜ' ಸಿನಿಮಾ ಬಳಿಕ ರಿಯಲ್‌ಸ್ಟಾರ್ ಉಪೇಂದ್ರ ಮತ್ತೊಂದು ಸಿನಿಮಾ 'UI' ಸಿದ್ಧವಾಗ್ತಿದೆ. ಯುಐ ಉಪ್ಪಿ ಕುಂಚದಲ್ಲಿ ಅರಳುತ್ತಿರೋ ಕಲ್ಪನೆ. ಹೀಗಾಗಿ ಯುಐ ಮೇಲೆ ಭಾರಿ ನಿರೀಕ್ಷೆ ಇದೆ. ಅದರಲ್ಲೂ ಈ ಬಾರಿಗೆ ವಿಶೇಷ ತಂತ್ರಜ್ಞಾನ ಬಳಸಿ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.

ಇದನ್ನೂ ವೀಕ್ಷಿಸಿ: ಪ್ರೀ ರಿಲೀಸ್ ಗಳಿಕೆಯಲ್ಲಿ ದಾಖಲೆ ಬರೆದ ಆದಿಪುರುಷ್ !: ಮತ್ತೆ ಭಾರತದ ಬಾಕ್ಸಾಫೀಸ್ ಕಿಂಗ್ ಆಗ್ತಾರಾ ಪ್ರಭಾಸ್?