Asianet Suvarna News Asianet Suvarna News

ಪ್ರೀ ರಿಲೀಸ್ ಗಳಿಕೆಯಲ್ಲಿ ದಾಖಲೆ ಬರೆದ ಆದಿಪುರುಷ್ !: ಮತ್ತೆ ಭಾರತದ ಬಾಕ್ಸಾಫೀಸ್ ಕಿಂಗ್ ಆಗ್ತಾರಾ ಪ್ರಭಾಸ್?

'ಆದಿಪುರುಷ್' ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಕೆರಿಯರ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಯಾಕಂದ್ರೆ, ಪೌರಾಣಿಕ ಪಾತ್ರದಲ್ಲಿ ಪ್ರಭಾಸ್ ಹಿಂದೆಂದೂ ನಟಿಸಿರಲಿಲ್ಲ. 
 

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಮತ್ತೆ ಕಮಾಲ್ ಕಾ ಬಾಪ್ ಆಗ್ತಿದ್ದಾರಾ.? ಎಂಬ ಸೌಂಡ್ ಟಿಟೌನ್ ಜಗತ್ತಿನಿಂದ ಹೊರ ಬರುತ್ತಿದೆ. ಅದಕ್ಕೆ ಕಾರಣ ಶ್ರೀರಾಮನ ಕತೆಯ ಆದಿಪುರುಷ್ ಸಿನಿಮಾ. ಯೆಸ್, ಡಾರ್ಲಿಂಗ್ ಪ್ರಭಾಸ್ ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆದ್ರು. ಆದ್ರೆ ಪ್ರಭಾಸ್‌ಗೆ ಬಿಗ್ ಸಕ್ಸಸ್ ಸಿಕ್ಕಿಲ್ಲ. ಸಾಹೋ, ರಾಧೆ ಶ್ಯಾಮ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ವು. ಹೀಗಾಗಿ ಎಲ್ಲರ ಕಣ್ಣು ಈಗ 'ಆದಿಪುರುಷ್' ಮೇಲೆ ಬಿದ್ದಿದೆ. ಆದಿಪುರುಷ್ ರಿಲೀಸ್‌ಗೆ 15 ದಿನ ಬಾಕಿ ಉಳಿದಿವೆ. ಆಗಲೇ 'ಆದಿಪುರುಷ್' ಬಿಡುಗಡೆಗೂ ಮುನ್ನ ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ. ಆದಿಪುರುಷ್ ಪ್ರೀ ರಿಲೀಸ್ ಬ್ಯುಸಿನೆಸ್ ಬರೋಬ್ಬರಿ 200 ಕೋಟಿ ಅಂತ ಅಂದಾಜಿಸಲಾಗಿದೆ.

ಇದನ್ನೂ ವೀಕ್ಷಿಸಿ: ಕಿಚ್ಚನ 46 ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್: ನಾಯಕಿ ಯಾರು.? ಹೇಗಿರುತ್ತೆ ಗೊತ್ತಾ ಸಿನಿಮಾ..?