
ಯಶ್, ಸುದೀಪ್, ರಕ್ಷಿತ್...ಕನ್ನಡದ ಅತೀ ಜನಪ್ರಿಯ ಸ್ಟಾರ್ ಯಾರು..?
ಕನ್ನಡದ ಜನಪ್ರಿಯ ಸ್ಟಾರ್‌ಗಳಲ್ಲಿ ಅತೀ ಜನಪ್ರಿಯ ಸ್ಟಾರ್ ಯಾರು ಎಂಬ ಲಿಸ್ಟ್ ಖಾಸಗಿ ಸಂಸ್ಥೆ ರಿವೀಲ್ ಮಾಡಿದೆ. ಇದು ಜೂನ್ ತಿಂಗಳಿಗೆ ಮಾತ್ರ ಸೀಮಿತವಾಗಿದೆ.
ಕನ್ನಡದ ಜನಪ್ರಿಯ ಸ್ಟಾರ್‌ಗಳಲ್ಲಿ ಅತೀ ಜನಪ್ರಿಯ ಸ್ಟಾರ್ ಯಾರು ಎಂಬ ಲಿಸ್ಟ್ ಖಾಸಗಿ ಸಂಸ್ಥೆ ರಿವೀಲ್ ಮಾಡಿದೆ. ಇದು ಜೂನ್ ತಿಂಗಳಿಗೆ ಮಾತ್ರ ಸೀಮಿತವಾಗಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ 5 ನೇ ಸ್ಥಾನ ಪಡೆದಿದ್ದಾರೆ. ಅರೇ ಯಾಕೆ 5 ನೇ ಸ್ಥಾನ ಅಂತೀರಾ..? ಜೂನ್‌ನಲ್ಲಿ ಶಿವಣ್ಣ ಸಿನಿಮಾ ಬಿಡುಗಡೆಯಾಗಿಲ್ಲ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 3 ನೇ ಸ್ಥಾನ ಪಡೆದಿದ್ಧಾರೆ. ಇವರ 777 ಚಾರ್ಲಿ ಸಿನಿಮಾ ಪ್ರೇಕ್ಷಕರ ಮನೆ ಗೆದ್ದಿದೆ. ಇನ್ನು ಕಿಚ್ಚ ಸುದೀಪ್ ಈ ಲಿಸ್ಟ್‌ನಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮಾ.... ಹಾಡಿನಿಂದಾಗಿ 2 ನೇ ಸ್ಥಾನದಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಂ 1 ಸ್ಥಾನದಲ್ಲಿದ್ಧಾರೆ. ಕೆಜಿಎಫ್ 2 ಹವಾದಿಂದ ಯಶ್ ಮೊದಲ ಸ್ಥಾನದಲ್ಲಿದ್ದಾರೆ.
Add Asianetnews Kannada as a Preferred Source

ವಿಕ್ರಾಂತ್ ರೋಣ ಕಥೆ ಆದಾಗ ಸುದೀಪ್ ಸರ್ ನಟಿಸ್ತಾರೆ ಅಂತ ಗೊತ್ತಿರಲಿಲ್ಲ: ನಿರೂಪ್ ಭಂಡಾರಿ