Asianet Suvarna News Asianet Suvarna News

Cinema Hungama:ತಮಿಳು ಕಿರುತೆರೆ ನಟಿ ಶಾಲಿನಿಯ ಡಿವೋರ್ಸ್ ಫೋಟೋಶೂಟ್ !

ತಮಿಳು ಕಿರುತೆರೆ ನಟಿ ಶಾಲಿನಿ ಡಿವೋರ್ಸ್ ಪಡೆದಿದ್ದಕ್ಕೆ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೇ ಇದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

First Published May 6, 2023, 5:28 PM IST | Last Updated May 6, 2023, 5:28 PM IST

ತಮಿಳು ಕಿರುತೆರೆ ನಟಿ  ಶಾಲಿನಿ ಡಿವೋರ್ಸ್ ವಿಚಾರವಾಗಿ ಸಾಕಷ್ಟು ಸುದ್ದಿ ಆಗಿದ್ದಾರೆ. ಅರೇ ಅದ್ಯಾಕಪ್ಪ ಅಂದ್ರೆ, ವಿಚ್ಚೇದನ ಸಿಕ್ಕ ಸಂಭ್ರಮದಲ್ಲಿ ಅವರು ಫೋಟೋಶೂಟ್  ಮಾಡಿಸಿದ್ದು, ಆ ಫೋಟೋಗಳು ವೈರಲ್ ಆಗಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶಾಲಿನಿಯ ಡಿವೋರ್ಸ್ ಫೋಟೋಶೂಟ್ ಪರ- ವಿರುದ್ಧ ದೊಡ್ಡ ಚರ್ಚೆಯೇ ನಡೆಯುತ್ತಿದೆ. ರಿಯಾಜ್​ ಪ್ರೇಮದ ಬಲೆಗೆ ಬಿದ್ದು,ಆತನನ್ನು ನಟಿ ಶಾಲಿನಿ ಮದುವೆ ಆಗಿಬಿಟ್ಟಿದ್ದಳು. ರಿಯಾಜ್​ಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಾಲಿನಿ, ತನ್ನ ಹೆಸರನ್ನು ಸಾರಾ ಮೊಹ್ಮದ್​ ರಿಯಾಜ್​ ಎಂದು ಬದಲಿಸಿಕೊಂಡಿದ್ದಳು. ಆದ್ರೆ ಮದುವೆಯಾದ ಸ್ವಲ್ಪ ದಿನಕ್ಕೆ ಆತ ನಟಿಗೆ ಕಷ್ಟ ಕೊಡಲು ಆರಂಭಿಸಿದ. ಹಾಗಾಗಿ ನಟಿ ಆತನಿಂದ ಡೈವೋರ್ಸ್‌ ಪಡೆದುಕೊಂಡಿದ್ದಾರೆ. ಅಲ್ಲದೇ ಈ ವಿಷಯವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ.