'ಮ್ಯಾಕ್ಸ್' ಟೀಂ ಕೊಡ್ತಿರೋ ಬಿಗ್ ಅಪ್‌ಡೇಟ್ ಏನು..? ಸಿನಿಮಾ ರಿಲೀಸ್ ಡೇಟ್ ಸುಳಿವು ಕೊಟ್ಟ ಕಿಚ್ಚ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ‌. ಮ್ಯಾಕ್ಸ್ ಅಪ್ ಡೇಟ್‌ಗಾಗಿ ಕಾಯ್ತಿದ್ದ ಫ್ಯಾನ್ಸ್‌ಗೆ ಫಿಲ್ಮ್ ಟೀಮ್ ಸಖತ್ ಸರ್ ಪ್ರೈಸ್ ಕೊಟ್ಟಿದೆ.

Share this Video
  • FB
  • Linkdin
  • Whatsapp

ಸುದೀಪ್ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟು ವರ್ಷ ಆಗಿದೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಮ್ಯಾಕ್ಸ್ ಸಿನಿಮಾದಲ್ಲಿ(Max movie) ಮ್ಯಾಕ್ಸಿಮಮ್ ಮನೋರಂಜನೆ ಕೊಡೋಕೆ ಲಾಟಿ ಹಿಡಿದು ಪೊಲೀಸ್ ಕಾಪ್ ಆಗಿದ್ದಾರೆ. ಆದ್ರೆ ಮ್ಯಾಕ್ಸ್‌ನ ಎರಡೇ ಎರಡು ಗ್ಲಿಮ್ಸ್ ಬಿಟ್ರೆ ಕಿಚ್ಚನ ಫ್ಯಾನ್ಸ್‌ಗೆ ಇದುವರೆಗೂ ಮತ್ತಿನ್ನೇನು ಸಿಕ್ಕಿಲ್ಲ. ಈಗ ಸುದೀಪ್ (Sudeep) ಮ್ಯಾಕ್ಸ್ ವೇರಿ ಸೂನ್, ಮ್ಯಾಕ್ಸ್ ಅಪ್‌ಡೇಟ್ ಕೊಡುತ್ತೇವೆ ರೇಸ್ ಟ್ರ್ಯಾಕ್‌ಗೆ ಎಂಟ್ರಿ ಕೊಡುತ್ತಿದ್ದೇವೆ ಎಂದಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಬೇರೊಂದು ಕಾರ್ಯಕ್ರಮ ಒಂದರಲ್ಲಿ ಮ್ಯಾಕ್ಸ್ ಡಬ್ಬಿಂಗ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆ ಮಾಡೋದಕ್ಕೆ ಪ್ಲ್ಯಾನ್‌ ಮಾಡಿದ್ದೇವೆ ಅಂದಿದ್ರು. ಈಗ ಮ್ಯಾಕ್ಸ್ ಬಿಗ್ ಅಪ್‌ಡೇಟ್‌ನ ಪೋಸ್ಟರ್ ರಿಲೀಸ್ (Release date) ಮಾಡಿ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಿರೋ ಸುಳಿವು ಕೊಟ್ಟಿದ್ದಾರೆ. ಕಿಚ್ಚನ ಆಪ್ತ ಮೂಲಗಳು ಹೇಳೋ ಪ್ರಕಾರ ಮ್ಯಾಕ್ಸ್ ಆಗಸ್ಟ್ 15ಕ್ಕೆ ವರ್ಲ್ಡ್ ವೈಡ್ ತೆರೆ ಮೇಲೆ ಬರಲಿದೆಯಂತೆ. ಆಗಸ್ಟ್ 15ಕ್ಕೆ ಅಲ್ಲು ಅರ್ಜುನ್ ನಟನೆಯ ಮೋಸ್ಟ್ ವಾಂಟೆಡ್ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ2 ಬಿಡುಗಡೆ ಆಗಬೇಕಿತ್ತು. ಆದ್ರೆ ಪುಷ್ಪ2 ಸಿನಿಮಾಗೆ ಬ್ಯುಸ್‌ನೆಸ್ ಆಗುತ್ತಿಲ್ಲ ಅನ್ನೋ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಡಿಸೆಂಬರ್‌ಗೆ ಹೋಗಿದೆ. ಪುಷ್ಪರಾಜ್ ಆಗಸ್ಟ್ 15ರ ಜಾಗ ಕಾಲಿ ಮಾಡುತ್ತಿದ್ದಂತೆ ಕಿಚ್ಚ ಸುದೀಪ್ ಮ್ಯಾಕ್ಸ್ ಆ ಜಾಗವನ್ನ ಕಬ್ಜಾ ಮಾಡಿಕೊಂಡಿದ್ದಾರೆ. ಆಗಸ್ಟ್ 15ಕ್ಕೆ ಮ್ಯಾಕ್ಸ್ ವರ್ಲ್ಡ್ ವೈಡ್ ತೆರೆ ಮೇಲೆ ಬರುತ್ತೆ ಅಂತ ಹೇಳಲಾಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Today Horoscope: ಇಂದು ಪ್ರದೋಷ ಪೂಜೆ ಮಾಡಿ..ಇದರಿಂದ ದೊರೆಯುವ ಫಲಗಳು ಏನು ಗೊತ್ತಾ ?

Related Video