
ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶಿವರಾಜ್ ಕುಮಾರ್; ಗೀತಾ ಕಾಲಿಗೆ ನಮಸ್ಕರಿಸಿದ ವಿನೋದ್ ರಾಜ್!
ನಟ ಶಿವರಾಜ್‌ಕುಮಾರ್ ದಂಪತಿ ಮಂಗಳವಾರ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ವಿನೋದ್ ರಾಜ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡರು.
ಬೆಂಗಳೂರು (ನ.28): ವಯೋಸಹಜ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿರುವ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಮಂಗಳವಾರ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿದರು. ಈ ವೇಳೆ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಡಾ.ರಾಜ್‌ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ ಅವರ ತಲೆಯನ್ನು ನೇವರಿಸಿದ ಶಿವರಾಜ್ ಕುಮಾರ್, 'ನಾನು ಶಿವಣ್ಣ ಬಂದಿದ್ದೀನಿ..' ಎಂದು ಹೇಳಿದ್ದಾರೆ. ಮನೆಯೊಂದ ಹೊರಬರುವ ಸಮಯದಲ್ಲಿ ವಿನೋದ್ ರಾಜ್ ಅವರ ಕೈ ಹಿಡಿದು ಶಿವರಾಜ್ ಕುಮಾರ್ ಆಗಮಿಸಿದ್ದಾರೆ.
Add Asianetnews Kannada as a Preferred Source

ನಟ ಅರ್ಜುನ್ ಸರ್ಜಾ ಲೀಲಾವತಿ ಮಾತನಾಡಿಸುವಾಗ ಗಳಗಳನೇ ಅತ್ತ ವಿನೋದ್‌ರಾಜ್!
ಇನ್ನು ಶಿವರಾಜ್ ಕುಮಾರ್ ದಂಪತಿಗಳು ಮನೆಯ ಒಳಗೆ ಬಂದಾಗ ನಟ ವಿನೋದ್ ರಾಜ್, ಗೀತಾ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ನಮಸ್ಕಾರ ಪಡೆದುಕೊಂಡರು. ಈ ವಿಡಿಯೋ ವಿಶೇಷವಾಗಿತ್ತು.