ನಟ ಅರ್ಜುನ್ ಸರ್ಜಾ ಲೀಲಾವತಿ ಮಾತನಾಡಿಸುವಾಗ ಗಳಗಳನೇ ಅತ್ತ ವಿನೋದ್‌ರಾಜ್!
ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿ ಮನೆಗೆ ಅರ್ಜುನ್ ಸರ್ಜಾ ಭೇಟಿ ಮಾಡಿದರು. ಈ ವೇಳೆ ಲೀಲಾವತಿಯವರ ಆರೋಗ್ಯ ವಿಚಾರಿಸುವಾಗ ಪಕ್ಕದಲ್ಲಿಯೇ ಇದ್ದ ನಟ ವಿನೋದ್‌ರಾಜ್ ಅವರು ಕಣ್ಣೀರಿಟ್ಟರು.
ಬೆಂಗಳೂರು (ನ.18): ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿ ಮನೆಗೆ ಅರ್ಜುನ್ ಸರ್ಜಾ ಭೇಟಿ ಮಾಡಿದರು. ಈ ವೇಳೆ ಲೀಲಾವತಿಯವರ ಆರೋಗ್ಯ ವಿಚಾರಿಸುವಾಗ ಪಕ್ಕದಲ್ಲಿಯೇ ಇದ್ದ ನಟ ವಿನೋದ್‌ರಾಜ್ ಅವರು ಕಣ್ಣೀರಿಟ್ಟರು.
ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ನಯದಿಂದ ಲೀಲಾವತಿಯವರು ಬಳಲುತ್ತಿದ್ದಾರೆ. ಆದ್ದರಿಂದ ದಕ್ಷಿಣ ಭಾರತದ ಸ್ಟಾರ್ ನಟ ಅರ್ಜುನ್ ಸರ್ಜಾ ಅವರು ಶನಿವಾರ ಮಧ್ಯಾಹ್ನ ನಟಿ ಲೀಲಾವತಿಯವರ ಆರೋಗ್ಯ ವಿಚಾರಿಸಲು ಭೇಟಿ ಮಾಡಿದರು. ಈಗ ಲೀಲಾವತಿ ಅವರು ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅಲ್ಲಿಗೇ ಅರ್ಜುನ್ ಸರ್ಜಾ ತೆರಳಿದ್ದರು. 87 ವರ್ಷದ ಹಿರಿಯ ನಟಿ ಡಾ.ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರು ಲೀಲಾವತಿಯವರ ಆರೋಗ್ಯ ವಿಚಾರಿಸುವಾಗ ತಾಯಿಯ ಸ್ಥಿತಿಯನ್ನು ನೋಡಿದ ಮಗ ವಿನೋದ್ ರಾಜ್ ಕಣ್ಣೀರಿಟ್ಟರು. ಲೀಲಾವತಿಯವರು ಬೇಗ ಆರೋಗ್ಯ ಸುಧಾರಿಸಲು ಭಗವಂತ ಹನುಮಂತನಲ್ಲಿ ಪ್ರಾರ್ಥಿಸುವುದಾಗಿ ನಟ ಅರ್ಜುನ್ ಸರ್ಜಾ ಹೇಳಿದರು.
ದಕ್ಷಿಣ ಭಾರತದ ಟಾಪ್ 10 ನಟಿಯರು ಯಾರು? ಅವರ ನೈಜ ವಯಸ್ಸೆಷ್ಟು ಗೊತ್ತಾ?
ನಾವು ದೊಡ್ಡ ಹನುಮಂತನ ದೇವಾಲಯ ಕಟ್ಟಿಸಿದ್ದು ಅಲ್ಲಿ ಲೀಲಾವತಿ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಸಲ್ಲಿಸುವುದಾಗಿ ಷಅರ್ಜುನ್ ಸರ್ಜಾ ಹೇಳಿದರು. ಇನ್ನು ಕನ್ನಡ ಚಿತ್ರರಂಗದಲ್ಲಿ ನಿಮ್ಮ ತಾಯಿ ನಟನೆಯ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಅವರು ಬೆಳೆಯುವ ಜೊತೆಗೆ ಚಿತ್ರರಂಗದ ಬೆಳವಣಿಗೆಗೂ ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದ ಜೊತೆಗೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ನಿಮ್ಮ ತಾಯಿ ಮಾಡಿದ್ದಾರೆ ಎಂದು ಮಗ ವಿನೋದ್ ರಾಜ್ ಅವರಿಗೆ ನಟ ಅರ್ಜುನ್ ಸರ್ಜಾ ಹೇಳಿದರು.
ಪಶು ಆಸ್ಪತ್ರೆಗೆ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದ ವಿನೋದ್‌ರಾಜ್:
ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರು ನಿರ್ಮಿಸಿರುವ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ನೆರವೇರಿಸಿ ಅಗತ್ಯ ಸಿಬ್ಬಂದಿಯನ್ನು ಸರ್ಕಾರದಿಂದಲೇ ನಿಯೋಜನೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಜೊತೆಗೆ, ಬಿಡಿಎ ನಿವೇಶನ ನೋಂದಣಿಗೆ ಉಂಟಾಗಿರುವ ಸಮಸ್ಯೆ ಬಗೆಹರಿಸುವುದಾಗಿ ಹಿರಿಯ ನಟಿ ಲೀಲಾವತಿ ಅವರಿಗೆ ಭರವಸೆ ನೀಡಿದ್ದಾರೆ. ‘ಪ್ರಾಣಿಗಳ ರಕ್ಷಣೆ ಈ ತಾಯಿ, ಮಗನ ನೆಚ್ಚಿನ ಹವ್ಯಾಸ. ಅವರು ವಾಸವಿರುವ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಉದ್ಘಾಟನೆಗೆ ದಿನಾಂಕ ನೀಡಿ ಎಂದು ಕೇಳಿದ್ದಾರೆ. ನಾನು ಸಮಯ ನೋಡಿ ದಿನಾಂಕ ನೀಡುತ್ತೇನೆ' ಎಂದು ತಿಳಿಸಿದ್ದೇನೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಘೋಸ್ಟ್ ಸಿನಿಮಾ ವೀಕ್ಷಣೆ ವೇಳೆ ಶಿವರಾಜ್ ಕುಮಾರ್ ಭೇಟಿಯಾದ ವಿನೋದ್ ರಾಜ್, ಲೀಲಾವತಿ
ಸಿಬ್ಬಂದಿ ನಿಯೋಜನೆಗೆ ಕೇಳಿದ್ದೇವೆ: ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ವಿನೋದ್ ರಾಜ್ ಅವರು, ನಾವು ಸುಸಜ್ಜಿತವಾದ ಪಶು ಚಿಕಿತ್ಸೆ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಸಿಬ್ಬಂದಿಗಳನ್ನು ಸರ್ಕಾರದ ಕಡೆಯಿಂದ ನಿಯೊಜಿಸಬೇಕಾಗಿ ಮನವಿ ಸಲ್ಲಿಸಿದ್ದೇವೆ. ಜತೆಗೆ ಸೊಂಡೆಕೊಪ್ಪ ಬಳಿ ವಿದ್ಯುತ್ ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡು ಅಂತಿಮ ಹಂತದಲ್ಲಿ ನಿಂತು ಹೋಗಿದೆ. ಅದನ್ನು ಕಾರ್ಯಗತಗೊಳಿಸಿದರೆ ಆ ಭಾಗದ ರೈತರಿಗೆ ಉಪಯೋಗವಾಗುತ್ತದೆ ಎಂದು ಮನವಿ ಸಲ್ಲಿಸಿದ್ದೇವೆ ಎಂದರು.