ರಾಕಿಂಗ್ ಸ್ಟಾರ್ ರಂಗಿಗೆ ಇನ್ನೆಷ್ಟು ದಿನ ಕಾಯಬೇಕು ? ದಸರಾಗೆ ಅನೌನ್ಸ್ ಆಗುತ್ತಾ ರಾಕಿ 19ನೇ ಚಿತ್ರ?
ಈ ವರ್ಷದ ಯುಗಾದಿ, ವರಮಹಾಲಕ್ಷ್ಮಿ ಮಾಡಿದ್ದಾಯ್ತು. ಆದ್ರೆ ಗಣೇಶ ಹಬ್ಬಕ್ಕೆ ನೋ ಎಕ್ಸ್ಕ್ಯೂಸ್, ಯಶ್19 ಅನೌನ್ಸ್ ಆಗುತ್ತೆ ಅಂತ ಆಸೆ ಪಟ್ಟಿದ್ದಷ್ಟೇ ಬಂತು. ಆದ್ರೆ ಯಶ್ 19 ಸುಳಿವೇ ಇಲ್ಲ. ಆದ್ರೆ ಈಗ ರಾಕಿಂಗ್ ಸ್ಟಾರ್ 19ನೇ ಸಿನಿಮಾ ಅನೌನ್ಸ್ಗೆ ವೇರಿ ಸೂನ್ ಅನ್ನೋ ಪೋಸ್ಟರ್ ಹರಿದಾಡ್ತಿದೆ. ಆ ದಿನ ಯಾವ್ದು ಅಂತ ಕೇಳಿದ್ರೆ ದಸರಾ ಹಬ್ಬ ಎನ್ನುತ್ತಿದ್ದಾರೆ ರಾಕಿಂಗ್ ಸ್ಟಾರ್ ಫ್ಯಾನ್ಸ್.
ಅಕ್ಟೋಬರ್‌ನಲ್ಲಿ ಯಶ್ 19(Yash 19) ಬಿಗ್ ಅನೌನ್ಸ್ಮೆಂಟ್ ಇದೆ. ಈ ಬಗ್ಗೆ ರಾಕಿ ಆಪ್ತ ಬಳಗವೇ ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಸರಿಯಾರಿ ಯಶ್ ಫ್ಯಾನ್ಸ್ ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಕ್ಟೋಬರ್ ಬಿಗ್ ಅನೌನ್ಸ್ ಮೆಂಟ್ ಅಂತ ಟ್ರೆಂಡ್ ಮಾಡುತ್ತಿದ್ದಾರೆ. ಹೀಗಾಗಿ ಯಶ್ 19 ದಸರಾ(Dasara) ಧಮಾಕ ಪಕ್ಕಾ ಅಂತೆ. ಯಶ್(Yash) ಫ್ಯಾಮಿಲಿ ಜೊತೆ ಫೇವರಿಟ್ ಸ್ಪಾಟ್ ಗೋವಾದಲ್ಲಿ ಒಂದಷ್ಟು ದಿನ ಸ್ಪೆಂಡ್ ಮಾಡಿದ್ರು. ಗೋವಾದಲ್ಲಿ ಯಶ್ 19 ಶೂಟಿಂಗ್ ಆಗ್ತಿದೆ ಅಂತಲೂ ಹೇಳಿದ್ರು. ಆದ್ರೆ ಯಶ್ ನಿಜಕ್ಕು ಏನ್ ಮಾಡ್ತಿದ್ದಾರೆ ಅಂತ ಕೆದಕಿದ ನಮ್ಗೆ ರಾಕಿ ಈಗ ಫಾರಿನ್ನಲ್ಲಿದ್ದಾರೆ ಅನ್ನೋ ಉತ್ತರ ಸಿಕ್ಕಿದೆ. ಅದಕ್ಕೆ ಕಾರಣ ಯಶ್19 ಸಿನಿಮಾದ ವರ್ಕ್ ಅಂತೆ. ಯಶ್ 19 ಸಿನಿ ಮೇಲೆ ಈಗ ದೊಡ್ಡ ಕುತೂಹಲದ ಬೆಟ್ಟವೇ ಸೃಷ್ಟಿಯಾಗಿದೆ. ಕಾರಣ ಅದು ಗ್ಲೋಬಲ್ ಸಿನಿಮಾ ಅನ್ನೋದು. ಈಗ ಸಿಗ್ತಿರೋ ಮತ್ತೊಂದು ಎಕ್ಸ್ಕ್ಲ್ಯೂಸವ್ ಅಂದ್ರೆ ಈ ಸಿನಿಮಾದಲ್ಲಿ ತಮಿಳು, ತೆಲುಗು ಹಾಗು ಹಿಂದಿಯ ಬಿಗ್ ಸ್ಟಾರ್ಸ್ ಇರ್ತಾರೆ. ಜೊತೆಗೆ ಹಾಲಿವುಡ್ನ ಸ್ಟಾರ್ ಒಬ್ರು ನಟಿಸುತ್ತಾರಂತೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ಯಶ್19 ಸಿನಿಮಾದಲ್ಲಿ ಗೋವಾ ಡ್ರಗ್ ಮಾಫಿಯಾ ಕತೆ ಹೇಳ್ತಿದ್ದಾರೆ. ಈ ಮೂವಿ ಬಜೆಟ್ 100, 200ರಲ್ಲ. ಬರೋಬ್ಬರಿ 500 ಕೋಟಿಯಂತೆ. ಕೆಜಿಎಫ್ನಲ್ಲಿ 1250 ಕೋಟಿ ಗಳಿಸಿರೋ ರಾಕಿ ಗ್ಲೋಬಲ್ ಮಟ್ಟಕ್ಕೆ ಸಿದ್ಧವಾಗ್ತಿರೋ ಯಶ್19 ಸಿನಿಮಾದಿಂದ 5000 ಕೋಟಿ ಕಲೆಕ್ಷನ್ ಟಾರ್ಗೆಟ್ ಇಟ್ಟಿದ್ದಾರಂತೆ.
ಇದನ್ನೂ ವೀಕ್ಷಿಸಿ: Today Horoscope: ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ? ಇಂದು ಈ ರಾಶಿಯವರಿಗೆ ಶುಭ ದಿನ