ಸ್ಪಂದನಾ ಬಗ್ಗೆ ನಿರ್ದೇಶಕಿ ರೇಖಾ ರಾಣಿ ಭಾವುಕ ನುಡಿ.. ಅದರಲ್ಲೇನಿದೆ ಗೊತ್ತಾ ?

ಸ್ಪಂದನಾ..ಬಿಕೆ ಶಿವರಾಮ್ ಮುದ್ದಿನ ಮಗಳು. ಅಪ್ಪನ ಮನೆಯಲ್ಲಿ ಮುದ್ದಾಗಿ ಬೆಳೆದ ಸ್ಪಂದನಾಗೆ ಬಾಳ ಸಂಗಾತಿಯಾಗಿ ಸಿಕ್ಕಿದ್ದು ಚಿನ್ನಾರಿ ಮುತ್ತ. ಪತ್ನಿಯನ್ನು ಹೃದಯ ಮಂದಿರದಲ್ಲಿಟ್ಟು ಆರಾಧಿಸುವ ಪತಿಯನ್ನು ಬಿಟ್ಟು ಹೋದ ಸ್ಪಂದನಾ ಮನೆ ಮಂದಿಗಷ್ಟೇ ಅಲ್ಲ. ಬಂಧು ಬಾಂಧವರ, ಕುಟುಂಬದ ಆಪ್ತರಿಗೂ ಅಚ್ಚು ಮೆಚ್ಚಾಗಿದ್ದರು.

Share this Video
  • FB
  • Linkdin
  • Whatsapp

ಕುಟುಂಬದವರಿಗಷ್ಟೇ ಅಲ್ಲ.. ಕುಟುಂಬ ಸ್ನೇಹಿತರಿಗೂ ಸ್ಪಂದನಾ(spandana) ಅಚ್ಚು ಮೆಚ್ಚು. ಸ್ಪಂದನಾಳನ್ನು ತಮ್ಮ ಮಗಳಂತೆ ಭಾವಿಸಿದ್ದ ನಿರ್ದೇಶಕಿ ರೇಖಾರಾಣಿ ಕಶ್ಯಪ್ ಅವರಂತು ಅಚ್ಚು ಅಂತಾಲೇ ಕರೆಯುತ್ತಿದ್ದರಂತೆ. ತಮ್ಮ ಕಣ್ಣಮುಂದೆ ಆಡಿ ಬೆಳೆದ ಅಚ್ಚು ಮರೆಯಾದ ಕ್ಷಣ ರೇಖಾ ರಾಣಿ(Rekha Rani)ಬರೆದ ಭಾವುಕ ನುಡಿಗಳು ಕರುಳು ಹಿಂಡುವಂತಿದೆ. ಬಿ.ಕೆ. ಶಿವರಾಂ ಫ್ಯಾಮಿಲಿ ಫ್ರೆಂಡ್ ರೇಖಾರಾಣಿ ಒಂದೊಂದು ನುಡಿಗಳುಕರುಳು ಹಿಂಡುವಂತಿವೆ. ಇನ್ನು ದಿನಬೆಳಗಾದ್ರೆ ಸ್ಪಂದನಾ ಜೊತೆ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದ ಸ್ನೆಹಿತೆಯರಿಗೂ ಸ್ಪಂದನಾ ಇನ್ನಿಲ್ಲ ಎನ್ನುವ ನೋವು ಅರಗಿಸಿಕೊಳ್ಳಲಾಗ್ತಿಲ್ಲ. ಅಕ್ಕಾವ್ರು ತುಂಬಾ ಹೆಲ್ದಿಯಾಗೇ ಇದ್ರು..ಮನೆಯಿಂದ ಹೋಗೋವಾಗ ಚೆನ್ನಾಗೇ ಇದ್ರು, ಮರಳಿ ಬರೋದಾಗಿ ಹೇಳಿ ಹೋದ ಅಕ್ಕಾವರು ಇನ್ನಿಲ್ಲ ಎನ್ನುತ್ತಾ ಸ್ಪಂದನಾ ಸಾವಿಗೆ ಕಣ್ಣೀರಿಡುತ್ತಿದ್ದಾರೆ ಮನೆ ಕೆಲಸದವರು. ಇನ್ನು ಕಾರ್ ಡ್ರೈವರ್ ಕೂಡ ದುಃಖ ವ್ಯಕ್ತಪಡಿಸಿದ್ರು. ಬಾಲ ನಟನಾಗಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ದೊಡ್ಡ ನಟನಾಗಿ ಖ್ಯಾತಿ ಗಳಿಸಿದ್ದರು ವಿಜಯರಾಘವೇಂದ್ರ ಎಂದೂ ತೋರಿಸಿಕೊಂಡವರಲ್ಲ. ಯಾವುದೇ ಕಾಂಟ್ರವರ್ಸಿ ಮಾಡಿಕೊಂಡಿಲ್ಲ. ಗಂಡನಿಗೆ ತಕ್ಕ ಹೆಂಡತಿಯಾಗಿ, ಮನೆಗೆ ತಕ್ಕ ಮಗಳಾಗಿ, ಸೊಸೆಯಾಗಿ, ಆತ್ಮೀಯರಿಗೆಲ್ಲಾ ಅಚ್ಚು ಮೆಚ್ಚಾಗಿದ್ದ ಸ್ಪಂದನಾ ಇನ್ನು ನೆನಪು ಮಾತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಬ್ಯಾಂಕಾಕ್‌ಗೆ ಹೋದ ಸ್ಪಂದನಾ ಬಾರದ ಲೋಕಕ್ಕೆ: ನೆನೆದು ಕಣ್ಣೀರಿಟ್ಟ ಮಾವ ಚಿನ್ನೇಗೌಡ , ಮೈದುನ ಮುರಳಿ

Related Video